ಬೆಂಗಳೂರು : ನಗರದಲ್ಲಿ ತಲೆದೋರಿರುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ಮಾರ್ಚ್ 25 ರಂದು ಹೋಳಿ ಆಚರಣೆಗಾಗಿ ಮಳೆ ನೃತ್ಯ ಮತ್ತು ಪೂಲ್ ಪಾರ್ಟಿಗಳಿಗೆ ಕುಡಿಯುವ ನೀರು ಬಳಸದಂತೆ ಸೂಚನೆ ನೀಡಿದೆ.
ಹಬ್ಬವನ್ನು ಆಚರಿಸಲು ಪೂಲ್ ಪಾರ್ಟಿಗಳು ಅಥವಾ ಮಳೆ ನೃತ್ಯಗಳಿಗೆ ಕಾವೇರಿ ಅಥವಾ ಬೋರ್ವೆಲ್ ನೀರನ್ನು ಬಳಸದಂತೆ ವಾಣಿಜ್ಯ ಮತ್ತು ಮನರಂಜನಾ ಕೇಂದ್ರಗಳನ್ನು ಬಿಡಬ್ಲ್ಯೂಎಸ್ಎಸ್ಬಿ ಆದೇಶದಲ್ಲಿ ತಿಳಿಸಿದೆ.
ಈ ಸಮಯದಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ಮಳೆ ನೃತ್ಯಗಳು ಮತ್ತು ಪೂಲ್ ಪಾರ್ಟಿಗಳಂತಹ ಮನರಂಜನೆಯನ್ನು ಆಯೋಜಿಸುವುದು ಸೂಕ್ತವಲ್ಲ. ಸಾರ್ವಜನಿಕ ಹಿತದೃಷ್ಟಿಯಿಂದ ಕಾವೇರಿ ನೀರು ಮತ್ತು ಬೋರ್ವೆಲ್ ನೀರನ್ನು ಬಳಸುವುದನ್ನು ನಿಷೇಧಿಸಲಾಗಿದೆ ಎಂದು ಜಲಮಂಡಳಿ ಆದೇಶದಲ್ಲಿ ತಿಳಿಸಿದೆ.