ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಬೃಹತ್ ಗಾತ್ರದ ತಿಮಿಂಗಿಲವೊಂದು ಇದ್ದಕ್ಕಿದ್ದಂತೆ ಸಮುದ್ರದಲ್ಲಿ ಬಂದು ಬೋಟ್ ಮೇಲೆ ದಾಳಿ ಮಾಡಿದರೆ ಏನಾಗುತ್ತದೆ. ಭಯದಿಂದ ನಡುಗ ಉಂಟಾಗುತ್ತೆ ಅಲ್ವಾ.? ಅಮೆರಿಕದ ನ್ಯೂ ಹ್ಯಾಂಪ್‌ಶೈರ್’ನಲ್ಲಿ ಇಂತಹದ್ದೇ ಘಟನೆಯೊಂದು ನಡೆದಿದೆ. ಚಿಕ್ಕ ದೋಣಿಯೊಂದು ಸಮುದ್ರದಲ್ಲಿದ್ದಾಗಲೇ ಬೃಹತ್ ಗಾತ್ರದ ತಿಮಿಂಗಿಲ ಬಂದು ಬೋಟ್ ಮೇಲೆ ದಾಳಿ ಮಾಡಿದೆ. ಈ ದಾಳಿಯಲ್ಲಿ ದೋಣಿ ಮುಳುಗಿದೆ. ಹಿಂದಿನ ದೋಣಿಯಲ್ಲಿದ್ದ ವ್ಯಕ್ತಿಯೊಬ್ಬರು ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆಯಲ್ಲಿ ಬೋಟ್ ಮಾತ್ರ ಧ್ವಂಸವಾಗಿದೆ, ಯಾರಿಗೂ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ವೇಳೆ ತಿಮಿಂಗಿಲ ದಾಳಿ ಮಾಡಿದಾಗ ದೋಣಿಯಲ್ಲಿದ್ದ ಇಬ್ಬರು ತಕ್ಷಣ ನೀರಿಗೆ ಹಾರಿದ್ದಾರೆ. ಒಬ್ಬ ವ್ಯಕ್ತಿ ಸ್ವಲ್ಪ ದೂರದಲ್ಲಿ ಬಿದ್ದರೆ ಮತ್ತೊಬ್ಬ ನೀರಿನಲ್ಲಿ ಮುಳುಗಿದ್ರು ಒಟ್ಟಾರೇ ಇಬ್ಬರೂ ಬದುಕುಳಿದ್ದಾರೆ.
ನೆಟ್ಟಿಗರೊಬ್ಬರು ಈ ವೀಡಿಯೊವನ್ನ ಜುಲೈ 23 ರಂದು X ನಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ 37 ಲಕ್ಷ ವೀಕ್ಷಣೆ ಮತ್ತು ನೂರಾರು ಕಾಮೆಂಟ್’ಗಳು ಬಂದಿವೆ. ಹಿಂದೆ ದೋಣಿಯಲ್ಲಿ ಒಬ್ಬ ಹುಡುಗ ಕಾಣಿಸಿದ್ದು, ‘ಆ ಮಗು ಚೆನ್ನಾಗಿದೆಯೇ? ಏನಾಯಿತು’ ಎಂದು ಅನೇಕ ನೆಟ್ಟಿಗರು ಕಾಮೆಂಟ್’ನಲ್ಲಿ ಕೇಳುತ್ತಿದ್ದಾರೆ. ಸಮುದ್ರದಲ್ಲಿ ಪ್ರಯಾಣಿಸುವಾಗ ಲೈಫ್ ಜಾಕೆಟ್’ಗಳನ್ನ ಧರಿಸಬೇಕು ಎಂದು ಇತರರು ಸಲಹೆ ನೀಡಿದ್ದಾರೆ. ಇಬ್ಬರೂ ಅಪಾಯದಿಂದ ಪಾರಾಗಿ ಭಾವುಕರಾಗಿ ಬದುಕಿರುವುದು ನನ್ನ ಅದೃಷ್ಟ ಎಂದಿದ್ದರಂತೆ.
This happened off Portsmouth, NH.: pic.twitter.com/LRY5uGAQOG
— Timothy Cornell (@cornelldolanpc) July 23, 2024
ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ‘ಡಿಸಿಎಂ ಡಿ.ಕೆ ಶಿವಕುಮಾರ್’ ಭೇಟಿಯಾಗಿದ್ದು ಏಕೆ ಗೊತ್ತೇ?
ರಾಜ್ಯದ ‘ಉಭಯ ಸದನ’ಗಳಲ್ಲಿ ‘ಮುಡಾ ಹಗರಣ’ ಪ್ರತಿಧ್ವನಿ: ‘ಸಾಕು ಸಾಕು ಲೂಟಿ ಸಾಕು’ ಎಂದು ಘೋಷಣೆ
ED ವಿರುದ್ಧ ದೂರು ವಿಚಾರ: ಕಾಂಗ್ರೆಸ್ ಯಾರನ್ನೂ ಬಳಸಿಕೊಳ್ಳುವುದಿಲ್ಲ: ಡಿಸಿಎಂ ಡಿಕೆ ಶಿವಕುಮಾರ್