ಸುಕ್ಮಾ : ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಎನ್ಕೌಂಟರ್’ನಲ್ಲಿ ಕನಿಷ್ಠ ಹತ್ತು ನಕ್ಸಲರನ್ನ ಹೊಡೆದುರುಳಿಸಿದ ನಂತರ ಜಿಲ್ಲಾ ರಿಸರ್ವ್ ಗಾರ್ಡ್ (DRG) ಭದ್ರತಾ ಸಿಬ್ಬಂದಿ ನೃತ್ಯ ಮಾಡಿ ಸಂಭ್ರಮಿಸಿದರು.
ಸುದ್ದಿ ಸಂಸ್ಥೆ ಎಎನ್ಐ ಹಂಚಿಕೊಂಡ ದೃಶ್ಯಗಳ ಪ್ರಕಾರ, ಸೇನಾ ಸಿಬ್ಬಂದಿ ಸ್ಥಳೀಯ ಸಂಗೀತದ ಬಡಿತಕ್ಕೆ ನೃತ್ಯ ಮಾಡುವುದನ್ನ ಮತ್ತು ಅವರ ಸಾಧನೆಯನ್ನ ಆಚರಿಸುವುದನ್ನ ಕಾಣಬಹುದು.
#WATCH | DRG (District Reserve Guards) Jawans celebrate after succeeding in eliminating 10 Naxals during an encounter in Sukma, Chhattisgarh pic.twitter.com/dS3oYtzvZl
— ANI (@ANI) November 22, 2024
ಇಂದು ಬೆಳಿಗ್ಗೆ, ಭೆಜ್ಜಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಕಾಡಿನಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಕ್ಸಲರ ನಡುವೆ ಎನ್ಕೌಂಟರ್ ಸಂಭವಿಸಿದ್ದು, ಇದರಲ್ಲಿ ಕನಿಷ್ಠ ಹತ್ತು ಮಾವೋವಾದಿಗಳು ಸಾವನ್ನಪ್ಪಿದ್ದಾರೆ. ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲೀಯ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಬಸ್ತಾರ್ ವಲಯ) ಸುಂದರ್ರಾಜ್ ಪಿ ಅವರನ್ನ ಉಲ್ಲೇಖಿಸಿ ವರದಿಯಾಗಿದೆ.
ಕೊರಜ್ಗುಡ, ದಂಟೆಸ್ಪುರಂ, ನಗರಂ ಮತ್ತು ಭಂಡಾರ್ಪಾದರ್ ಗ್ರಾಮಗಳ ಅರಣ್ಯ ಬೆಟ್ಟಗಳಲ್ಲಿ ನಕ್ಸಲರ ಕೊಂಟಾ ಮತ್ತು ಕಿಸ್ತಾರಾಮ್ ಪ್ರದೇಶ ಸಮಿತಿಗಳಿಗೆ ಸೇರಿದ ಮಾವೋವಾದಿಗಳು ಇರುವ ಬಗ್ಗೆ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆಯನ್ನ ಪ್ರಾರಂಭಿಸಲಾಯಿತು.
ಎಕೆ -47 ರೈಫಲ್, ಐಎನ್ಎಸ್ಎಎಸ್ ಮತ್ತು ಸೆಲ್ಫ್ ಲೋಡಿಂಗ್ ರೈಫಲ್ ಸೇರಿದಂತೆ ಹಲವಾರು ಶಸ್ತ್ರಾಸ್ತ್ರಗಳನ್ನು ಪಡೆಗಳು ವಶಪಡಿಸಿಕೊಂಡಿವೆ.
BREAKING : ಮಣಿಪುರ ಮತ್ತೆ ಉದ್ವಿಗ್ನ ; 90 ಹೆಚ್ಚುವರಿ ‘ಭದ್ರತಾ ಪಡೆ ತುಕಡಿ’ ಕಳುಹಿಸಿದ ಕೇಂದ್ರ ಸರ್ಕಾರ
ತಂದೆ ‘ಆಸ್ತಿ’ಯಲ್ಲಿ ಮಗಳಿಗೆ ಹಕ್ಕಿದ್ಯಾ.? ಎಷ್ಟು ಪಾಲು ಪಡೆಯ್ಬೋದು.? ‘ಕಾನೂನು’ ಹೇಳುವುದೇನು ಗೊತ್ತಾ?