ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಗುರುವಾರ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನದಲ್ಲಿ ನಡೆದ ಒಂದು ಅಭೂತಪೂರ್ವ ಕ್ಷಣದಲ್ಲಿ, ಭಾರತದ ಗಾಯಗೊಂಡ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಹೊರಟರು. ಈ ವೇಳೆ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
ಟೆಸ್ಟ್‌ನ ಮೊದಲ ದಿನದಂದು ವೇಗಿ ಕ್ರಿಸ್ ವೋಕ್ಸ್ ಹೊಡೆದ ಪರಿಣಾಮ ಪಂತ್ ಅವರ ಬಲಗಾಲಿನಲ್ಲಿ ಮೂಳೆ ಮುರಿತ ಉಂಟಾಗಿದೆ. ಅವರನ್ನ ಮೈದಾನದಿಂದ ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಅವರ ಕಾಲು ತಕ್ಷಣವೇ ಊದಿಕೊಂಡು ರಕ್ತ ಸೋರುತ್ತಿತ್ತು. ಅವರ ಐದನೇ ಮೆಟಾಟಾರ್ಸಲ್ ಮೂಳೆ ಮುರಿತಕ್ಕೊಳಗಾಗಿದ್ದು, ಆರು ವಾರಗಳ ವಿಶ್ರಾಂತಿಗೆ ಸೂಚಿಸಲಾಗಿದೆ ಎಂದು ವರದಿಯಾಗಿದೆ. ಆದ್ರೆ, ಈ ಟೆಸ್ಟ್‌ನ ತಂಡದ ಮೊದಲ ಇನ್ನಿಂಗ್ಸ್’ಗಾಗಿ ನೋವನ್ನು ಸಹಿಸಿಕೊಳ್ಳಲು ನಿರ್ಧರಿಸಿದ್ದಾರೆ. ಆ ಕ್ಷಣದ ವೀಡಿಯೊವನ್ನ ಇಲ್ಲಿ ವೀಕ್ಷಿಸಿ.
𝙂𝙧𝙞𝙩. 𝙂𝙪𝙩𝙨. 𝙂𝙪𝙢𝙥𝙩𝙞𝙤𝙣!
When Old Trafford stood up to applaud a brave Rishabh Pant 🙌 🫡#TeamIndia | #ENGvIND | @RishabhPant17 pic.twitter.com/nxT2xZp134
— BCCI (@BCCI) July 24, 2025
BREAKING: ಗ್ರೇಟರ್ ಬೆಂಗಳೂರು ಕಾಯ್ದೆಯಡಿ ಭೂಸ್ವಾಧೀನಕ್ಕೆ ಹಿನ್ನಡೆ: ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶ
ವೃದ್ಧ ಪೋಷಕರನ್ನು ನೋಡಿಕೊಳ್ಳಲು ಕೇಂದ್ರ ಸರ್ಕಾರಿ ನೌಕರರು 30 ದಿನ ರಜೆ ಪಡೆಯಬಹುದು: ಕೇಂದ್ರ ಸರ್ಕಾರ
Good News : ವೃದ್ಧ ಪೋಷಕರನ್ನ ನೋಡಿಕೊಳ್ಳಲು ಈಗ ‘ಸರ್ಕಾರಿ ನೌಕರರು’ 30 ದಿನಗಳ ರಜೆ ಪಡೆಯ್ಬೋದು ; ಕೇಂದ್ರ ಸರ್ಕಾರ