ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕತಾರ್ ರಾಷ್ಟ್ರದ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರನ್ನ ಸ್ವಾಗತಿಸಿದರು.
ಅಮೀರ್ ಫೆಬ್ರವರಿ 17 ರಿಂದ 18 ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದಾರೆ. ಕತಾರ್ ಅಮೀರ್ ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ. ಅವರೊಂದಿಗೆ ಸಚಿವರು, ಹಿರಿಯ ಅಧಿಕಾರಿಗಳು ಮತ್ತು ವ್ಯಾಪಾರ ನಿಯೋಗ ಸೇರಿದಂತೆ ಉನ್ನತ ಮಟ್ಟದ ನಿಯೋಗವಿದೆ. ಅವರು ಈ ಹಿಂದೆ ಮಾರ್ಚ್ 2015ರಲ್ಲಿ ಅಧಿಕೃತ ಭೇಟಿಗಾಗಿ ಭಾರತಕ್ಕೆ ಬಂದಿದ್ದರು. ಫೆಬ್ರವರಿ 18 ರಂದು ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಕತಾರ್ ಅಮೀರ್ ಅವರಿಗೆ ಔಪಚಾರಿಕ ಸ್ವಾಗತ ನೀಡಲಾಗುವುದು.
#WATCH | Prime Minister Narendra Modi receives Amir of the State of Qatar, Sheikh Tamim Bin Hamad AL Thani, at the Indira Gandhi International Airport in Delhi.
Amir of the State of Qatar, Sheikh Tamim Bin Hamad AL Thani will be on a State Visit to India on 17-18 February.… pic.twitter.com/jYMwP8IZVD
— ANI (@ANI) February 17, 2025
ಪ್ರಮುಖ ಸಭೆಗಳಲ್ಲಿ ಭಾಗವಹಿಸಲಿರುವ ಕತಾರ್ ಅಮೀರ್.!
ತಮ್ಮ ಭೇಟಿಯ ಸಮಯದಲ್ಲಿ, ಅಮೀರ್ ಅಧ್ಯಕ್ಷ ದ್ರೌಪದಿ ಮುರ್ಮು ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ, ಅವ್ರು ಅವರ ಗೌರವಾರ್ಥ ಔತಣಕೂಟವನ್ನ ಆಯೋಜಿಸಲಿದ್ದಾರೆ. ಕತಾರ್ ಅಮೀರ್ ಅವರು ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ ಅವರೊಂದಿಗೆ ದ್ವಿಪಕ್ಷೀಯ ಸಂಬಂಧಗಳ ವಿವಿಧ ಅಂಶಗಳನ್ನ ಒಳಗೊಂಡ ಮಾತುಕತೆ ನಡೆಸಲಿದ್ದಾರೆ. ವಿಶೇಷವೆಂದರೆ, ಭಾರತ ಮತ್ತು ಕತಾರ್ ಸ್ನೇಹ, ನಂಬಿಕೆ ಮತ್ತು ಪರಸ್ಪರ ಗೌರವದ ಆಳವಾದ ಐತಿಹಾಸಿಕ ಸಂಬಂಧಗಳನ್ನು ಹೊಂದಿವೆ.
ಭಾರತ-ಕತಾರ್ ಸಂಬಂಧ.!
ಇತ್ತೀಚಿನ ವರ್ಷಗಳಲ್ಲಿ, ವ್ಯಾಪಾರ, ಹೂಡಿಕೆ, ಇಂಧನ, ತಂತ್ರಜ್ಞಾನ, ಸಂಸ್ಕೃತಿ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ಉಭಯ ದೇಶಗಳ ನಡುವಿನ ಸಂಬಂಧಗಳು ಬಲಗೊಳ್ಳುತ್ತಲೇ ಇವೆ. ಕತಾರ್ನಲ್ಲಿ ವಾಸಿಸುವ ಭಾರತೀಯ ಸಮುದಾಯವು ದೇಶದ ಅತಿದೊಡ್ಡ ವಲಸಿಗ ಸಮುದಾಯವನ್ನ ರೂಪಿಸುತ್ತದೆ ಮತ್ತು ಕತಾರ್ನ ಪ್ರಗತಿ ಮತ್ತು ಅಭಿವೃದ್ಧಿಯಲ್ಲಿ ಅದರ ಸಕಾರಾತ್ಮಕ ಕೊಡುಗೆಗಾಗಿ ಶ್ಲಾಘಿಸಲ್ಪಟ್ಟಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಕತಾರ್ ಅಮೀರ್ ಅವರ ಭೇಟಿಯು ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ಬಹುಮುಖಿ ಪಾಲುದಾರಿಕೆಗೆ ಮತ್ತಷ್ಟು ವೇಗವನ್ನು ನೀಡುತ್ತದೆ ಎಂದು ಅದು ಹೇಳಿದೆ.
ಕೇರಳದ ಕಾಂಗ್ರೆಸ್ ಕಾರ್ಯಕರ್ತರ ಕೊಲೆ; ಕೆಪಿಸಿಸಿಯಿಂದ ₹25 ಲಕ್ಷ ಪರಿಹಾರ- DKS ಘೋಷಣೆ
‘NRI’ಗಳಿಗೆ ರಿಮೋಟ್ ಮತದಾನ, AI ಮತ್ತು ಬಯೋಮೆಟ್ರಿಕ್ಸ್ ; ಚುನಾವಣೆಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳಿಗೆ ‘CEC’ ಕರೆ
Good News : PF ಮೇಲಿನ ‘ಬಡ್ಡಿದರ’ದ ಕುರಿತು ಮಹತ್ವದ ನಿರ್ಧಾರ ; ಪ್ರತ್ಯೇಕ ‘ಮೀಸಲು ನಿಧಿ’ ರಚನೆ!