ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಗುರುವಾರ ದೆಹಲಿಯ ವಿಜ್ಞಾನ ಭವನದಲ್ಲಿ 98ನೇ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನವನ್ನ ಉದ್ಘಾಟಿಸಿದರು. ಈ ಸಮಯದಲ್ಲಿ ಪ್ರಧಾನಿ ಮೋದಿ ಅವರು ಮರಾಠಿ ಭಾಷೆ ಅಮೃತಕ್ಕಿಂತ ಸಿಹಿಯಾಗಿದೆ ಮತ್ತು ಈ ಭಾಷೆಯನ್ನ ಮಾತನಾಡಲು ಮತ್ತು ಅದರ ಹೊಸ ಪದಗಳನ್ನ ಕಲಿಯಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದರು. ಪ್ರಧಾನಿ ಮೋದಿ ಅವರೊಂದಿಗೆ ಶರದ್ ಪವಾರ್ ಕೂಡ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಶರದ್ ಪವಾರ್ ಸಮ್ಮೇಳನಕ್ಕೆ ಬಂದಾಗ, ಪ್ರಧಾನಿ ಮೋದಿ ಅವರನ್ನ ಗೌರವದಿಂದ ಸ್ವಾಗತಿಸಿದರು.
ಪ್ರಧಾನಿ ಮೋದಿ ಶರದ್ ಪವಾರ್ ಅವರ ಲೋಟದಲ್ಲಿ ನೀರು ತುಂಬಿಸಿದ ಪ್ರಧಾನಿ.!
ಪ್ರಧಾನಿ ಮೋದಿಯವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 98ನೇ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯ ವಿಡಿಯೋ. ಈ ಸಮಯದಲ್ಲಿ, ಪ್ರಧಾನಿ ಮೋದಿ ಮತ್ತು ಶರದ್ ಪವಾರ್ ಅವರ ಕುರ್ಚಿಗಳನ್ನ ಪರಸ್ಪರ ಹತ್ತಿರ ಇರಿಸಲಾಗಿತ್ತು, ಶರದ್ ಪವಾರ್ ತಮ್ಮ ಕುರ್ಚಿಯ ಮೇಲೆ ಕುಳಿತುಕೊಳ್ಳಲು ಮುಂದಾದಾಗ, ಪ್ರಧಾನಿ ಮೋದಿ ಅವರಿಗಾಗಿ ಕುರ್ಚಿಯನ್ನ ಸರಿ ಮಾಡಿದರು. ಇದಾದ ನಂತರ, ಪ್ರಧಾನಿ ನರೇಂದ್ರ ಮೋದಿ ಒಂದು ಲೋಟದಲ್ಲಿ ನೀರು ತುಂಬಿಸಿ ಶರದ್ ಪವಾರ್ ಕಡೆಗೆ ಇಡುತ್ತಿರುವು ಕಂಡುಬಂದಿತು. ಪ್ರಧಾನ ಮಂತ್ರಿಯವರ ಈ ಶೈಲಿಯ ನಂತರ, ಇಡೀ ಸಭಾಂಗಣವು ಚಪ್ಪಾಳೆಯಿಂದ ಪ್ರತಿಧ್ವನಿಸಿತು.
ವಿಡಿಯೋ ನೋಡಿ.!
#WATCH | Delhi: Prime Minister Narendra Modi and NCP chief Sharad Pawar at the inauguration of the 98th Akhil Bharatiya Marathi Sahitya Sammelan.
(Source: DD News) pic.twitter.com/W2TJpqyeqv
— ANI (@ANI) February 21, 2025
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ‘ಒಣದ್ರಾಕ್ಷಿ’ ತಿನ್ನೋದು ಈ 4 ಜನರಿಗೆ ಅತ್ಯುತ್ತಮ ಔಷಧಿ, ಅಸಂಖ್ಯಾತ ಪ್ರಯೋಜನ
‘ಕೋವಿಡ್ -19’ನಂತೆಯೇ ಮಾನವರಿಗೆ ಸೋಂಕು ತಗುಲಿಸುವ ಹೊಸ ‘ವೈರಸ್’ ಕಂಡುಹಿಡಿದ ‘ಚೀನಾ’
ವಿರೋಧ ಪಕ್ಷದ ಮುಖಂಡರ ಆರೋಪಗಳಿಗೆ ಈ ತಿರುಗೇಟು ಕೊಟ್ಟ ‘ಸಿಎಂ ಸಿದ್ಧರಾಮಯ್ಯ’