ಕಂಧಮಾಲ್ : ಒಡಿಶಾದ ಕಂಧಮಾಲ್’ನಲ್ಲಿ ಶನಿವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬುಡಕಟ್ಟು ಕವಿಯತ್ರಿ ಪೂರ್ಣಮಾಸಿ ಜಾನಿ ಅವರ ಪಾದಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು.
80 ವರ್ಷದ ಕವಿ ಮತ್ತು ಸಾಮಾಜಿಕ ಕಾರ್ಯಕರ್ತೆ ಕುಯಿ, ಒಡಿಯಾ ಮತ್ತು ಸಂಸ್ಕೃತದಲ್ಲಿ 50,000ಕ್ಕೂ ಹೆಚ್ಚು ಭಕ್ತಿಗೀತೆಗಳನ್ನ ಸಂಯೋಜಿಸಿದ್ದಾರೆ ಮತ್ತು ಅವರಿಗೆ 2021ರಲ್ಲಿ ಪದ್ಮಶ್ರೀ ಗೌರವವನ್ನ ನೀಡಲಾಯಿತು.
1954ರಲ್ಲಿ ಸ್ಥಾಪಿಸಲಾದ ಪದ್ಮ ಪ್ರಶಸ್ತಿಗಳು ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾಗಿದೆ ಮತ್ತು ವಾರ್ಷಿಕವಾಗಿ ಗಣರಾಜ್ಯೋತ್ಸವದ ಮುನ್ನಾದಿನದಂದು ಘೋಷಿಸಲಾಗುತ್ತದೆ.
ತಡಿಸಾರು ಬಾಯಿ ಎಂದು ಕರೆಯಲ್ಪಡುವ ಕವಿಯತ್ರಿಯ ಪಾದಗಳನ್ನ ಮುಟ್ಟಿ ಪ್ರಧಾನಿ ನಮಸ್ಕರಿಸುವ ವೀಡಿಯೋವನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಪ್ರಧಾನ ಮಂತ್ರಿಯವರು ನಾರಿಶಕ್ತಿಗೆ ಗೌರವ ನಮನ ಸಲ್ಲಿಸಿದ್ದಾರೆ ಎನ್ನಲಾಗ್ತಿದೆ.
PM Shri @narendramodi Ji takes blessings from Padma Shri awardee Purnamasi Jani during a public meeting in Kandhmal, Odisha.#ModimayaOdisha pic.twitter.com/11L6ZrqFGE
— Sambit Patra (Modi Ka Parivar) (@sambitswaraj) May 11, 2024
ನೀತಿ ಉಲ್ಲಂಘನೆ : ಏಪ್ರಿಲ್’ನಲ್ಲಿ 1.8 ಲಕ್ಷಕ್ಕೂ ಹೆಚ್ಚು ‘X ಖಾತೆ’ ನಿಷೇಧ
ಮಾಜಿ ಸಿಎಂ ಎಸ್.ಎಂ ಕೃಷ್ಣಗೆ ಮುಂದುವರೆದ ಚಿಕಿತ್ಸೆ : ‘ಹೆಲ್ತ್ ಬುಲೆಟಿನ್’ ಬಿಡುಗಡೆ ಮಾಡಿದ ಮಣಿಪಾಲ್ ಆಸ್ಪತ್ರೆ
BREAKING: ‘ಮಾಜಿ ಸಿಎಂ S.M ಕೃಷ್ಣ’ ಆರೋಗ್ಯ ಸ್ಥಿರ: ಮಣಿಪಾಲ್ ಆಸ್ಪತ್ರೆ ವೈದ್ಯರ ಸ್ಪಷ್ಟನೆ | Ex CM S.M Krishna