ರಾಮೇಶ್ವರಂ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಮೇಶ್ವರಂನ ಭಗವಾನ್ ರಾಮನಾಥಸ್ವಾಮಿ ದೇವಸ್ಥಾನದಲ್ಲಿ ಅಗ್ನಿತೀರ್ಥ ಬೀಚ್ ನಲ್ಲಿ ಪವಿತ್ರ ಸ್ನಾನ ಮಾಡಿದ ನಂತರ ವಿಶೇಷ ಪೂಜೆ ಸಲ್ಲಿಸಿದರು. ರುದ್ರಾಕ್ಷಿ ಮಾಲೆ ಧರಿಸಿದ ಪ್ರಧಾನಿ ಮೋದಿ ತಮಿಳುನಾಡಿನ ಪ್ರಾಚೀನ ಶಿವ ದೇವಾಲಯವಾದ ರಾಮನಾಥಸ್ವಾಮಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅವರಿಗೆ ಪುರೋಹಿತರು ಸಾಂಪ್ರದಾಯಿಕ ಗೌರವಗಳನ್ನು ನೀಡಿದರು. ಅವರು ದೇವಾಲಯದಲ್ಲಿ ನಡೆದ ‘ಭಜನೆ’ಗಳಲ್ಲಿಯೂ ಭಾಗವಹಿಸಿದರು.
ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂ ದ್ವೀಪದಲ್ಲಿರುವ ಶಿವ ದೇವಾಲಯವು ರಾಮಾಯಣದೊಂದಿಗೆ ಸಂಪರ್ಕವನ್ನು ಹೊಂದಿದೆ, ಏಕೆಂದರೆ ಇಲ್ಲಿನ ಶಿವಲಿಂಗವನ್ನು ಶ್ರೀ ರಾಮನು ಸ್ಥಾಪಿಸಿದನು ಎನ್ನುವ ನಂಬಿಕೆ ಇದೆ. ಭಗವಾನ್ ರಾಮ ಮತ್ತು ಸೀತಾ ದೇವಿ ಇಲ್ಲಿ ಪ್ರಾರ್ಥಿಸಿದರು. ತಿರುಚಿರಾಪಳ್ಳಿ ಜಿಲ್ಲೆಯ ಶ್ರೀರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಇಲ್ಲಿಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯ ಜನರು ಉತ್ಸಾಹಭರಿತ ಸ್ವಾಗತ ನೀಡಿದರು.
#WATCH | Prime Minister Narendra Modi offers prayers at Sri Arulmigu Ramanathaswamy Temple in Rameswaram, Tamil Nadu. The Prime Minister also took a holy dip into the sea here. pic.twitter.com/v7BCSxdnSk
— ANI (@ANI) January 20, 2024