ಹೈದರಾಬಾದ್: ತೆಲಂಗಾಣದ ಮೆಹಬೂಬ್ ನಗರದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಚೇತನ ಮಹಿಳೆಯರಿಗಾಗಿ ಮಾಡಿದ ಕಾರ್ಯ ಎಲ್ಲರ ಹೃದಯ ಗೆದ್ದಿದೆ. ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ತಮ್ಮನ್ನು ಆಶೀರ್ವದಿಸಲು ಅಲ್ಲಿಗೆ ಬಂದಿದ್ದ ದಿವ್ಯಾಂಗ ಸಹೋದರಿಯರಿಗೆ ದಾರಿ ಮಾಡಿಕೊಡುವಂತೆ ನೆರೆದಿದ್ದ ಜನರಿಗೆ ಮನವಿ ಮಾಡಿದರು.
“ದಿವ್ಯಾಂಗ ಸಹೋದರಿಯರು ನನ್ನನ್ನು ಆಶೀರ್ವದಿಸಲು ಬರುತ್ತಿದ್ದಾರೆ, ಅವರು ಮುಂದೆ ಬರಲಿ” ಎಂದು ಪ್ರಧಾನಿ ಹೇಳಿದರು. ಈ ಮಹಿಳೆಯರಿಗೆ ಸರಿಯಾದ ವ್ಯವಸ್ಥೆ ಮಾಡುವವರೆಗೂ ತಾವು ಭಾಷಣವನ್ನ ಮುಂದುವರಿಸುವುದಿಲ್ಲ ಎಂದು ಪ್ರಧಾನಿ ಹೇಳಿದರು.
“ಅವರು ನೋವಿನಿಂದ ಬಳಲುತ್ತಿರುವುದನ್ನು ನಾನು ನೋಡಲಾರೆ, ದಯವಿಟ್ಟು ಅವರಿಗೆ ವ್ಯವಸ್ಥೆ ಮಾಡಿ” ಎಂದು ಪ್ರಧಾನಿ ಮೋದಿ ಹೇಳಿದ್ದು, ನೆರದಿದ್ದ ಜನರು ವಿಶೇಷ ಚೇತನ ಮಹಿಳೆಯರನ್ನ ಎತ್ತಿಕೊಂಡು ಜನಸಮೂಹದ ಮುಂದಿನ ಸಾಲಿನಲ್ಲಿ ಇರಿಸುವಂತೆ ಪ್ರಧಾನಿ ಮಾಡಿದರು.
#WATCH | Telangana: During his public rally in Mahbubnagar, PM Narendra Modi asks people to make way for and comfortably accommodate a few differently-abled women who had come to attend his rally. pic.twitter.com/eVloBp93dV
— ANI (@ANI) May 10, 2024
BREAKING : WFI ಮಾಜಿ ಮುಖ್ಯಸ್ಥ ‘ಬ್ರಿಜ್ ಭೂಷಣ್’ ವಿರುದ್ಧ ‘ದೋಷಾರೋಪ ಪಟ್ಟಿ’ ದಾಖಲಿಸಲು ಕೋರ್ಟ್ ಆದೇಶ
‘ಬಸ್ತಾರ್’ನಲ್ಲಿ ಎನ್ ಕೌಂಟರ್: 7 ನಕ್ಸಲರ ಹತ್ಯೆ | Naxalites killed