ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಛತ್ತೀಸ್ ಗಢದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಸಮಯದಲ್ಲಿ, ಬಾಲಕಿಯೊಬ್ಬಳು ಪ್ರಧಾನಿ ಮೋದಿ ರೇಖಾಚಿತ್ರವನ್ನ ಹಿಡಿದು ಬೀಸುತ್ತಲೇ ಇದ್ದಳು. ಭಾಷಣ ಮಾಡುತ್ತಿದ್ದ ಪ್ರಧಾನಿ ಬಾಲಕಿಯನ್ನ ಗಮನಿಸಿದ್ದು, ಆ ರೇಖಾಚಿತ್ರವನ್ನ ತಮ್ಮ ಬಳಿಗೆ ತರುವಂತೆ ಸೂಚಿಸಿದರು.
ಭಾಷಣದ ಸಮಯದಲ್ಲಿ, ಪಿಎಂ ಮೋದಿ ಈ ರೇಖಾಚಿತ್ರವನ್ನ ನನಗಾಗಿ ತಂದಿದ್ದೀರಾ ಎಂದು ಬಾಲಕಿಯನ್ನ ಕೇಳಿದರು. ಬಾಲಕಿ ಹೌದು ಎಂದು ಉತ್ತರಿಸಿದಾಗ, ಪ್ರಧಾನಿ ಅಲ್ಲಿ ಹಾಜರಿದ್ದ ಪೊಲೀಸರಿಗೆ ರೇಖಾಚಿತ್ರವನ್ನ ತನ್ನ ಬಳಿಗೆ ತರುವಂತೆ ಕೇಳಿದರು. ಅದೇ ಸಮಯದಲ್ಲಿ, ರೇಖಾಚಿತ್ರದ ಹಿಂಭಾಗದಲ್ಲಿ ನಿಮ್ಮ ಹೆಸರು ಮತ್ತು ವಿಳಾಸವನ್ನ ಬರೆಯಿರಿ, ನಾನು ನಿಮಗೆ ಪತ್ರ ಬರೆಯುತ್ತೇನೆ ಎಂದು ಬಾಲಕಿಗೆ ಪ್ರಧಾನಿ ಹೇಳಿದರು.
#WATCH | Chhattisgarh: PM Modi asked security personnel to take the portrait from a girl who was carrying a self-made portrait of the Prime Minister during his public rally in Janjgir-Champa. pic.twitter.com/wQkvDoUV7u
— ANI (@ANI) April 23, 2024
“ನಾನು ಬಿಜೆಪಿ ನಾಯಕತ್ವದಲ್ಲಿ ಮೂರನೇ ಅವಧಿಗೆ ನಿಮ್ಮ ಆಶೀರ್ವಾದ ಪಡೆಯಲು ಬಂದಿದ್ದೇನೆ. ಮೋದಿ ಅವರ ಪ್ರತಿಯೊಂದು ಗ್ಯಾರಂಟಿಗೂ ಛತ್ತೀಸ್ ಗಢದ ಜನರು ಒಪ್ಪಿಗೆ ನೀಡಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರವನ್ನ ಎಂದಿಗೂ ನಿರ್ಮಿಸಲಾಗುವುದಿಲ್ಲ ಎಂದು ಎಲ್ಲರೂ ಭಾವಿಸಿದ್ದರು, ಆದರೆ ಬಿಜೆಪಿ ಅದನ್ನ ನಿರ್ಮಿಸುವುದನ್ನ ಖಚಿತಪಡಿಸಿತು” ಎಂದು ಅವರು ಹೇಳಿದರು.
ಭಾರತದ ಅತಿದೊಡ್ಡ ಮೊಬೈಲ್ ಆಪರೇಟರ್ ಆಗಿ ಹೊರಹೊಮ್ಮಿದ ರಿಲಯನ್ಸ್ ಜಿಯೋ | Reliance Jio
ಭಾರತದ ಯಾವ ಮೂಲೆಯಲ್ಲೂ ಮೋದಿ ಅಲೆ ಇಲ್ಲ ಎನ್ನುವುದು ಸಾಬೀತಾಗಿದೆ :ಸಿಎಂ ಸಿದ್ದರಾಮಯ್ಯ