ನವದೆಹಲಿ : ನಾಗಾಲ್ಯಾಂಡ್ ಸಚಿವ ಮತ್ತು ಬಿಜೆಪಿ ಮುಖಂಡ ತೆಮ್ಜೆನ್ ಇಮ್ನಾ ಅಲಾಂಗ್ ಇತ್ತೀಚೆಗೆ ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್ ಮೂಲಕ ವೀಡಿಯೊವನ್ನ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಕೆಸರು ಕೊಳದಲ್ಲಿ ಸಿಲುಕಿದ್ದು, ಅವ್ರನ್ನ ಹೊರತೆಗೆಯುವುದನ್ನ ಕಾಣಬಹುದು. ಇನ್ನಿದಕ್ಕೆ ಇಬ್ಬರು ಪುರುಷರು ನೀರಿನಿಂದ ಹೊರ ತರಲು ಸಹಾಯ ಮಾಡುವುದನ್ನ ಕಾಣಬಹುದು.
ಸಮಸ್ಯೆಗಳ ಬಗ್ಗೆ ಹಾಸ್ಯಮಯ ನಿಲುವಿಗೆ ಹೆಸರುವಾಸಿಯಾದ ಅಲಾಂಗ್, ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ತಮಾಷೆ ಮಾಡುವುದನ್ನ ಕಾಣಬಹುದು. ಒಂದು ಹಂತದಲ್ಲಿ, “ನಾನು ಕೊಳದ ಅತಿದೊಡ್ಡ ಮೀನು” ಎಂದು ಅವ್ರು ಹೇಳುವುದನ್ನ ಕೇಳಬಹುದು. ಇದಲ್ಲದೆ, ಅಲಾಂಗ್ ಈಗ ವೈರಲ್ ಆಗಿರುವ ಕ್ಲಿಪ್ಗೆ ಚಮತ್ಕಾರಿ ಶೀರ್ಷಿಕೆಯನ್ನ ಸೇರಿಸಿದ್ದಾರೆ, “ಇಂದು ಜೆಸಿಬಿಯ ಪರೀಕ್ಷೆ ಇತ್ತು. ಗಮನಿಸಿ : ಇದು ಎನ್ಸಿಎಪಿ ರೇಟಿಂಗ್ ಬಗ್ಗೆ, ವಾಹನವನ್ನ ಖರೀದಿಸುವ ಮೊದಲು ಎನ್ಸಿಎಪಿ ರೇಟಿಂಗ್ ಪರಿಶೀಲಿಸಬೇಕು. ಯಾಕಂದ್ರೆ, ಇದು ನಿಮ್ಮ ಜೀವನದ ವಿಷಯ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Aaj JCB ka Test tha !
Note: It's all about NCAP Rating, Gadi Kharidney Se Pehley NCAP Rating Jarur Dekhe.
Kyunki Yeh Aapke Jaan Ka Mamla Hain !! pic.twitter.com/DydgI92we2
— Temjen Imna Along (@AlongImna) February 10, 2024