ನವದೆಹಲಿ : ವ್ಯಕ್ತಿಯೊಬ್ಬ ಸಂಸತ್ ಭವನದ ಬಳಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಾಯಾಳುವನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಂಕಿ ಹಚ್ಚಿದ ವ್ಯಕ್ತಿ ತೀವ್ರವಾಗಿ ಸುಟ್ಟುಹೋಗಿದ್ದಾನೆ. ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದು ಯಾಕೆ.? ಎನ್ನುವ ಮಾಹಿತಿ ಲಭ್ಯವಾಗಬೇಕಿದ್ದು, ಸಧ್ಯ ಸ್ಥಳಕ್ಕೆ ತನಿಖೆಗಾಗಿ ವಿಧಿವಿಜ್ಞಾನ ತಂಡ ತಲುಪಿದೆ.
https://twitter.com/ANI/status/1871874520136700116
ಘಟನೆ ಹೇಗೆ ನಡೆಯಿತು.?
ಮೂಲಗಳ ಪ್ರಕಾರ, ಉತ್ತರ ಪ್ರದೇಶದ ಬಾಗ್ಪತ್ ಮೂಲದ ಜಿತೇಂದ್ರ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಸಂಸತ್ತಿನ ಮುಂಭಾಗದ ಉದ್ಯಾನವನದಲ್ಲಿ ಬೆಂಕಿ ಹಚ್ಚಿಕೊಂಡು ನಂತರ ಮುಖ್ಯ ಗೇಟ್ ಕಡೆಗೆ ಧಾವಿಸಿದ್ದಾನೆ. ಶೇ.90ರಷ್ಟು ಸುಟ್ಟ ಗಾಯಗಳಾಗಿರುವ ಅವರನ್ನು ನಗರದ ಆರ್ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ ‘ಗಂಭೀರ’ ಸ್ಥಿತಿಯಲ್ಲಿದ್ದಾರೆ ಎಂದು ಹೇಳಲಾಗಿದೆ. ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಳ್ಳಲು ಪೆಟ್ರೋಲ್ ತರಹದ ವಸ್ತುವನ್ನು ಬಳಸಿದ್ದಾನೆ.
Jasprit Bumrah ICC Rankings : ಇತಿಹಾಸ ಸೃಷ್ಟಿಸಿದ ‘ಜಸ್ಪ್ರೀತ್ ಬುಮ್ರಾ’, ಸಂಚಲನ ಮೂಡಿಸಿದ ‘ಅಶ್ವಿನ್’
Jasprit Bumrah ICC Rankings : ಇತಿಹಾಸ ಸೃಷ್ಟಿಸಿದ ‘ಜಸ್ಪ್ರೀತ್ ಬುಮ್ರಾ’, ಸಂಚಲನ ಮೂಡಿಸಿದ ‘ಅಶ್ವಿನ್’