ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಜಿ20 ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲು ಬ್ರೆಜಿಲ್’ನ ರಿಯೋ ಡಿ ಜನೈರೊಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವ್ರಿಗೆ ಆಧ್ಯಾತ್ಮಿಕ ಸ್ವಾಗತ ದೊರೆತಿದೆ.
ದಕ್ಷಿಣ ಅಮೆರಿಕಾದ ರಾಷ್ಟ್ರದ ಎರಡನೇ ಅತಿದೊಡ್ಡ ನಗರಕ್ಕೆ ಪ್ರಧಾನಿ ಆಗಮಿಸಿದಾಗ, ಇಲ್ಲಿನ ಭಾರತೀಯ ವಲಸಿಗರು ಸಂಸ್ಕೃತ ಮಂತ್ರಗಳೊಂದಿಗೆ ಅವರನ್ನ ಸ್ವಾಗತಿಸಿದರು. ಇದಷ್ಟೇ ಅಲ್ಲದೆ, ಅವರನ್ನ ಸ್ವಾಗತಿಸಲು ಸಾಂಸ್ಕೃತಿಕ ಪ್ರದರ್ಶನಗಳು ನಡೆದವು.
ಎಕ್ಸ್ (ಹಿಂದೆ ಟ್ವಿಟರ್) ನಲ್ಲಿನ ಪೋಸ್ಟ್ನಲ್ಲಿ, ಪಿಎಂ ಮೋದಿ ತಮಗೆ ನೀಡಿದ “ಸ್ಮರಣೀಯ” ಸ್ವಾಗತಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಅಂತೆಯೇ ಪ್ರಧಾನಿ ಮೋದಿ, “ಬ್ರೆಜಿಲ್’ನಲ್ಲಿ ಭಾರತೀಯ ಸಂಸ್ಕೃತಿಯ ಆಚರಣೆ! ರಿಯೋ ಡಿ ಜನೈರೊಗೆ ಸ್ಮರಣೀಯ ಸ್ವಾಗತಕ್ಕಾಗಿ ಕೃತಜ್ಞತೆಗಳು…” ಎಂದು ಬರೆದಿದ್ದಾರೆ.
Deeply touched by the warm and lively welcome from the Indian community upon arriving in Rio de Janeiro. Their energy reflects the affection that binds us across continents. pic.twitter.com/hvA6GGKE9l
— Narendra Modi (@narendramodi) November 18, 2024