ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳ ಜೊತೆಗೆ ಸಿಎಂ ಸಿದ್ದರಾಮಯ್ಯ ಅವರು ಕೆಲ ಹೊತ್ತು ಸಮಯ ಕಳೆದ ಎಲ್ಲರ ಗಮನ ಸೆಳೆದಿದ್ದಾರೆ.
ಈ ಬಗ್ಗೆ ವಿಡಿಯೋ ಟ್ವಿಟ್ ಮಾಡಿರುವ ಅವರು ಥಮಿಕ ಶಾಲೆಯಲ್ಲಿ ನಾನು ಕಲಿತ ಕನ್ನಡ ವ್ಯಾಕರಣ ಪಾಠಗಳು ಉಸಿರಿರುವವ ವರೆಗೆ ಹಸಿರಾಗಿರಲಿದೆ. ಕನ್ನಡ ಭಾಷೆಯ ಸೌಂದರ್ಯವನ್ನು ಬಣ್ಣಿಸುವ, ವ್ಯಾಕರಣದ ಬಗ್ಗೆ ವಿವರಿಸುವ ಅವಕಾಶ ಸಿಕ್ಕಾಗಲೆಲ್ಲ ಸಂಧಿಗಳು, ಸಮಾಸಗಳು, ಸ್ವರ, ವ್ಯಂಜನಗಳು ಥಟ್ಟನೆ ನೆನಪಾಗುತ್ತವೆ. ಅದು ಶಾಲಾ ಕೊಠಡಿಯೇ ಇರಲಿ, ವಿಧಾನಸಭೆಯೇ ಆಗಿರಲಿ. ಮುತ್ತು ಪೋಣಿಸಿದಂತೆ ಬಿಡಿ ಬಿಡಿಯಾಗಿ ಕಣ್ಣಮುಂದೆ ಬರುತ್ತದೆ.
ಯಾವುದೇ ಭಾಷೆಯಾಗಿರಲಿ ಅದು ಹೃದಯಕ್ಕೆ ಹತ್ತಿರವಾದಾಗ ಮಾತ್ರ ಜೀವಂತಿಕೆಯನ್ನು ಉಳಿಸಿಕೊಳ್ಳುತ್ತದೆ. ಹಾಗಾಗಿಯೇ ಕನ್ನಡ ನನಗೆ ಆಡು ಭಾಷೆಯೂ ಹೌದು, ನಾಡಭಾಷೆಯೂ ಹೌದು,\ ನನ್ನ ಹೆತ್ತ ತಾಯಿಭಾಷೆಯೂ ಹೌದು. ಅಂಥ ತಿಳಿಸಿದ್ದಾರೆ.
SC/ST ಜನಸಂಖ್ಯೆಗೆ ಅನುಗುಣವಾಗಿ ಹಣ ಖರ್ಚು ಮಾಡುತ್ತಿರುವುದು ನಮ್ಮ ಸರ್ಕಾರ ಮಾತ್ರ
ಇಡೀ ದೇಶದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಹಣ ಖರ್ಚು ಮಾಡುತ್ತಿರುವುದು ನಮ್ಮ ಸರ್ಕಾರ ಮಾತ್ರ. ಎಸ್‌ಸಿ.ಎಸ್.ಪಿ / ಟಿ.ಎಸ್.ಪಿ ಗೆ ಬಜೆಟ್‌ನಲ್ಲಿ ಘೋಷಿಸಿದ ಅನುದಾನವನ್ನು ಆಯಾಯ ವರ್ಷವೇ ಶೇ 100 ರಷ್ಟು ಖರ್ಚು ಮಾಡಬೇಕು ಎನ್ನುವ ಕಾನೂನು ಮಾಡಿದ್ದು ನಾವೇ. ಖರ್ಚು ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎನ್ನುವ ನಿಯಮವನ್ನೂ ಮಾಡಿದ್ದೇವೆ. ಅನುದಾನ ಬಳಕೆ ಮಾಡದೆ ಯಾರು ನಿರ್ಲಕ್ಷ್ಯ ಮಾಡುತ್ತಾರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶೋಷಿತ ವರ್ಗದ ಜನರ ಬದುಕಲ್ಲಿ ಬದಲಾವಣೆ ತರುವುದೇ ನಮ್ಮ ಆದ್ಯತೆ. ಇದರಲ್ಲಿ ಯಾವ ರಾಜಿಯಿಲ್ಲ.
ಇಡೀ ದೇಶದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಹಣ ಖರ್ಚು ಮಾಡುತ್ತಿರುವುದು ನಮ್ಮ ಸರ್ಕಾರ ಮಾತ್ರ. ಎಸ್‌ಸಿ.ಎಸ್.ಪಿ / ಟಿ.ಎಸ್.ಪಿ ಗೆ ಬಜೆಟ್‌ನಲ್ಲಿ ಘೋಷಿಸಿದ ಅನುದಾನವನ್ನು ಆಯಾಯ ವರ್ಷವೇ ಶೇ 100 ರಷ್ಟು ಖರ್ಚು ಮಾಡಬೇಕು ಎನ್ನುವ ಕಾನೂನು ಮಾಡಿದ್ದು ನಾವೇ. ಖರ್ಚು ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ… pic.twitter.com/kaFJmL5x6y
— Siddaramaiah (@siddaramaiah) July 5, 2024