ಗುರುಗಾವ್: ಊಟದ ನಂತರ ಮನಸ್ಥಿತಿಯನ್ನು ತಾಜಾಗೊಳಿಸಲು ಜನರು ಮೌತ್ ಫ್ರೆಶನರ್ ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ, ಗುರುಗ್ರಾಮದ ಕೆಫೆಯೊಂದರಲ್ಲಿ ಊಟದ ನಂತರ ಮೌತ್ ಫ್ರೆಶನರ್ ಸೇವಿಸಿದ ಪರಿಣಾಮ ಐವರು ರಕ್ತ ವಾಂತಿ ಮಾಡಿರುವ ಘಟನೆ ನಡದಿದೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ವರದಿಯ ಪ್ರಕಾರ, ಅಂಕಿತ್ ಕುಮಾರ್ ತನ್ನ ಪತ್ನಿ ಮತ್ತು ಸ್ನೇಹಿತರೊಂದಿಗೆ ಗುರುಗ್ರಾಮದ ಸೆಕ್ಟರ್ 90 ರಲ್ಲಿರುವ ಲಫಾರೆಸ್ಟಾ ಕೆಫೆಯಲ್ಲಿದ್ದರು. ಊಟದ ನಂತರ, ಅವರೆಲ್ಲರೂ ಮೌತ್ ಫ್ರೆಶನರ್ ಸೇವಿಸಿದ ನಂತರ ನೋವು ಮತ್ತು ಅಸ್ವಸ್ಥತೆಯಿಂದ ಕಿರುಚುವುದು ಮತ್ತು ಅಳುತ್ತಿರುವುದು ಕಂಡುಬಂದಿದೆ. ವೈರಲ್ ವಿಡಿಯೋದಲ್ಲಿ “ಅವರು (ಮೌತ್ ಫ್ರೆಶನರ್ನಲ್ಲಿ) ಏನು ಮಿಶ್ರಣ ಮಾಡಿದ್ದಾರೆಂದು ನಮಗೆ ತಿಳಿದಿಲ್ಲ. ಇಲ್ಲಿ ಎಲ್ಲರೂ ವಾಂತಿ ಮಾಡಿಕೊಳ್ಳುತ್ತಿದ್ದಾರೆ. ಅವರ ನಾಲಿಗೆಯ ಮೇಲೆ ಗಾಯಗಳಾಗಿವೆ. ಅವರ ಬಾಯಿ ಉರಿಯುತ್ತಿದೆ. ಅವರು ನಮಗೆ ಯಾವ ರೀತಿಯ ಆಸಿಡ್ ನೀಡಿದ್ದಾರೆಂದು ತಿಳಿದಿಲ್ಲ” ಎಂದು ಕುಮಾರ್ ಹೇಳಿದ್ದಾರೆ. ಇದರ ನಂತರ ಅವರು ಕೆಫೆಯಲ್ಲಿದ್ದ ಜನರನ್ನು ಪೊಲೀಸರಿಗೆ ಕರೆ ಮಾಡಲು ಕೇಳಿಕೊಂಡಿದಾರೆ.
Five people started vomiting blood and reported a burning sensation in their mouths after eating mouth freshener after their meal at a cafe in Gurugram. They were hospitalized and two are critical. pic.twitter.com/brMnbWbZQW
— Waquar Hasan (@WaqarHasan1231) March 4, 2024