ವಾರಣಾಸಿ : ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ನ್ಯಾಯಾಲಯ ಬುಧವಾರ ಅನುಮತಿ ನೀಡಿದ ನಂತರ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜಾ ಆಚರಣೆಗಳು ಗುರುವಾರ ಪ್ರಾರಂಭವಾದವು. ಕಾಶಿ ವಿಶ್ವನಾಥ ದೇವಾಲಯದ ಪಕ್ಕದ ಮಸೀದಿಯ ಬಗ್ಗೆ ಕಾನೂನು ಹೋರಾಟದಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ. ವಾರಣಾಸಿಯ ಜ್ಞಾನವಾಪಿಯ ನೆಲ ನೆಲಮಾಳಿಗೆಯಲ್ಲಿ ನಡೆದ ‘ಪೂಜೆ’ಯ ಮೊದಲ ದೃಶ್ಯ ಇಲ್ಲಿವೆ.
Puja started at gyanvyapi pic.twitter.com/ZjcWYnklCG
— Vishnu Shankar Jain (@Vishnu_Jain1) February 1, 2024
ಜ್ಞಾನವಾಪಿ ಮಸೀದಿ ಸಂಕೀರ್ಣದೊಳಗಿನ ‘ವ್ಯಾಸ್ ಕಾ ತೆಹ್ಖಾನಾ’ ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸಲು ವಾರಣಾಸಿ ಜಿಲ್ಲಾ ನ್ಯಾಯಾಲಯವು ಹಿಂದೂಗಳಿಗೆ ಅನುಮತಿ ನೀಡಿದೆ. ಭಕ್ತರು ಪ್ರಾರ್ಥನೆ ಸಲ್ಲಿಸಲು ಜ್ಞಾನವಾಪಿ ಆವರಣವನ್ನ ತಲುಪಿದ್ದು, ಅರ್ಚಕರು ಇಂದು ಮುಂಜಾನೆ 3 ಗಂಟೆ ಸುಮಾರಿಗೆ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಿದರು.
ಇನ್ನು ಜ್ಞಾನವಾಪಿ ಮಸೀದಿ ಎಂದಿದ್ದ ಬೋರ್ಡ್ ತೆರವುಗೊಳಿಸಿದ್ದು, ಜ್ಞಾನವಾಪಿ ಮಂದಿರ ಎಂದು ಬದಲಾಯಿಸಲಾಗಿದೆ. ಸಧ್ಯ ಬೋರ್ಡ್ ಬದಲಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
“ನಾವೆಲ್ಲರೂ ಪ್ರತಿದಿನ ಮುಂಜಾನೆ 3-3:00 ರ ಹೊತ್ತಿಗೆ ದರ್ಶನಕ್ಕಾಗಿ ಇಲ್ಲಿಗೆ ಬರುತ್ತೇವೆ. ನ್ಯಾಯಾಲಯದ ಆದೇಶದಿಂದ ನಾವು ತುಂಬಾ ಸಂತೋಷ ಮತ್ತು ಭಾವುಕರಾಗಿದ್ದೇವೆ. ನಮ್ಮ ಸಂತೋಷಕ್ಕೆ ಮಿತಿಯೇ ಇಲ್ಲ” ಎಂದು ಭಕ್ತರೊಬ್ಬರು ಮಾಧ್ಯಮಗಳಿಗೆ ತಿಳಿಸಿದರು.
ಪೂಜೆ ಸಲ್ಲಿಸಿದ ನಂತರ ಸಂಕೀರ್ಣದ ಹೊರಗೆ ಬಂದ ಇನ್ನೊಬ್ಬ ಭಕ್ತ, “ನಾವು ನಂದಿಯನ್ನ ನೋಡಿದ್ದೇವೆ. ನಾವು ನಿನ್ನೆಯಿಂದ ಪ್ರಾರ್ಥನೆ ಸಲ್ಲಿಸಲು ಕಾಯುತ್ತಿದ್ದೇವೆ. ಮಂದಿರ ನಿರ್ಮಾಣವಾಗಬೇಕು. ಪ್ರಾರ್ಥನೆ ಸಲ್ಲಿಸಿದ ನಂತರ ನಮಗೆ ತುಂಬಾ ಸಂತೋಷವಾಗಿದೆ” ಎಂದರು.
“ಸ್ವೀಟ್ ಸ್ಪಾಟ್ , ಅನೇಕ ಉದ್ಯೋಗಾವಕಾಶಗಳು” : ‘ಮಧ್ಯಂತರ ಬಜೆಟ್’ಗೆ ‘ಪ್ರಧಾನಿ ಮೋದಿ’ ಫುಲ್ ಮಾರ್ಕ್ಸ್
‘ಜ್ಞಾನವಾಪಿ’ಯಲ್ಲಿ ಹಿಂದೂಗಳಿಂದ ‘ಪೂಜೆ’ ಸಲ್ಲಿಕೆ, ‘ಮಸೀದಿ’ ಬೋರ್ಡ್ ತೆಗೆದು, ‘ಮಂದಿರ’ ಬೋರ್ಡ್ ಅವಳಡಿಕೆ
BREAKING : ‘ರಾಂಚಿ PMLA ಕೋರ್ಟ್’ಗೆ ಜಾರ್ಖಂಡ್ ಮಾಜಿ ಸಿಎಂ ‘ಹೇಮಂತ್ ಸೊರೆನ್’ ಹಾಜರು