ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 20 ರಂದು ತಮಿಳುನಾಡಿನ ಎರಡು ಪ್ರಮುಖ ದೇವಾಲಯಗಳಾದ ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಾಲಯ ಮತ್ತು ರಾಮೇಶ್ವರಂನ ಶ್ರೀ ಅರುಲ್ಮಿಗು ರಾಮನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದರು. ನಂತ್ರ ಪ್ರಧಾನಿ ಮೋದಿ ಅವರು ಎರಡೂ ದೇವಾಲಯ ಪಟ್ಟಣಗಳಲ್ಲಿ ರೋಡ್ ಶೋ ನಡೆಸಿದರು, ಅವರನ್ನ ಸ್ವಾಗತಿಸಲು ರಸ್ತೆಯ ಎರಡೂ ಬದಿಗಳಲ್ಲಿ ಸಾವಿರಾರು ಜನರು ಸಾಲುಗಟ್ಟಿ ನಿಂತಿದ್ದರು. ಹೆಚ್ಚುವರಿಯಾಗಿ, ಪ್ರಧಾನಿ ಉಡುಗೊರೆಗಳನ್ನ ಸ್ವೀಕರಿಸಿದರು, ಅದನ್ನು ಅವರು ಅಯೋಧ್ಯೆಗೆ ಕೊಂಡೊಯ್ಯುತ್ತಾರೆ ಎನ್ನಲಾಗ್ತಿದೆ.
Glimpses of their beloved Prime Minister left the people overwhelmed!
Enthralling visuals of PM Modi's roadshow in Tiruchirappalli, Tamil Nadu. pic.twitter.com/floMibH5Jw
— BJP (@BJP4India) January 20, 2024
ಇದಕ್ಕೂ ಮುನ್ನ ತಮಿಳುನಾಡಿನ ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಭಾಗವಹಿಸಿದ್ದರು. ತಿರುಚಿರಾಪಳ್ಳಿಯ ಶ್ರೀರಂಗನಾಥಸ್ವಾಮಿ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ದೇವಾಲಯದ ಆನೆಯ ಆಶೀರ್ವಾದ ಪಡೆದರು.
ದೇವಾಲಯಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ ಮೋದಿ, ‘ವೆಷ್ಠಿ’ (ಧೋತಿ) ಮತ್ತು ಅಂಗವಸ್ತ್ರ (ಶಾಲು) ಧರಿಸಿ ವಿಷ್ಣು ದೇವಾಲಯದಲ್ಲಿ ಕೈಮುಗಿದು ಪ್ರಾರ್ಥಿಸಿದರು.
ಅವರು ಆಗಮಿಸಿದಾಗ, ಪುರೋಹಿತರಿಂದ ವೈದಿಕ ಪಠಣದ ನಡುವೆ ಅವರಿಗೆ ಔಪಚಾರಿಕ ‘ಪೂರ್ಣಕುಂಭ’ ಸ್ವಾಗತ ನೀಡಲಾಯಿತು. ದೇವಾಲಯದ ಆನೆಗೆ ಆಹಾರ ನೀಡಿದ ನಂತ್ರ ಆನೆ ತನ್ನ ಸೊಂಡಿಲಿನಿಂದ ಪ್ರಧಾನಿಯನ್ನ ಆಶೀರ್ವದಿಸಿತು. ಇನ್ನು ಇದೇ ವೇಳೆ ಗಜರಾಜ ಮೌತ್ ಆರ್ಗನ್ ನುಡಿಸಿ ಪ್ರಧಾನಿ ಮೋದಿಯನ್ನ ಮಂತ್ರಮುಗ್ದಗೊಳಿರು. ಸಧ್ಯ ಈ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಅಂದ್ಹಾಗೆ, ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀ ರಾಮ್ ಲಲ್ಲಾ ಅವರ ‘ಪ್ರಾಣ ಪ್ರತಿಷ್ಠಾ’ ಕ್ಕೆ ಮುಂಚಿತವಾಗಿ ಪ್ರಧಾನಿ ಮೋದಿ 11 ದಿನಗಳ ಅನುಷ್ಟಾನವನ್ನು ಆಚರಿಸುತ್ತಿದ್ದಾರೆ.
Watch : ತಮಿಳುನಾಡು ಶ್ರೀರಂಗನಾಥ ಆಲಯಕ್ಕೆ ‘ಮೋದಿ’ ಭೇಟಿ : ಮೌತ್ ಆರ್ಗನ್ ನುಡಿಸಿ, ‘ನಮೋ’ ಆರ್ಶೀವಾದಿಸಿದ ‘ಗಜರಾಜ’
ಮಂತ್ರಾಲಯ ಪ್ರವೇಶದ ಮುಖ್ಯ ದ್ವಾರದ ಬಳಿ 36 ಅಡಿ ಎತ್ತರದ ಶ್ರೀರಾಮನ ಏಕಶಿಲಾ ವಿಗ್ರಹ ಪ್ರತಿಷ್ಠಾಪನೆ
ದೇಹದ ತೂಕ ಹೇಳಿಸಲು ಹರಸಾಹಸ ಪಡಬೇಕೆಂದಿಲ್ಲ.. ಈ ಕಾಫಿ ಕುಡಿದರಾಯ್ತು… ಯಾವುದದು…?