ಬೀದರ :ಜಿಲ್ಲೆಯಲ್ಲಿ ಆಧಾರ ಕಾರ್ಡ ಹೊಂದಿರುವ ನಾಗರೀಕರು ಆಧಾರ್ ನೋಂದಣಿ ಸಮಯದಲ್ಲಿ ನಮೂದಿಸಿದ ವಿಳಾಸ 10 ವರ್ಷ ಮೇಲ್ಪಟ್ಟಿರುವ ಆಧಾರ ಕಾರ್ಡುಗಳು ನಿಷ್ಕ್ರಿಯಗೊಳಿಸಲಾಗುತ್ತಿದೆ.
ಕಾರಣ ಇಲ್ಲಿಯವರೆಗೂ ತಮ್ಮ ಆಧಾರ್ ಕಾರ್ಡ ನವೀಕರಿಸದೇ ಇರುವಂತಹ ನಾಗರೀಕರು ತಮ್ಮ ವೈಯಕ್ತಿಕ ಗುರುತಿನ ದಾಖಲೆ ಹಾಗೂ ವಿಳಾಸದ ದಾಖಲೆಗಳನ್ನು ಸಂಬಂಧಿಸಿದ ಹತ್ತಿರದ ಅಟಲ್ ಜೀ ಜನಸ್ನೇಹಿ ಕೇಂದ್ರ, ನಾಡಕಛೇರಿ, ಜಿಲ್ಲಾಧಿಕಾರಿಗಳ ಕಛೇರಿಯ ಸ್ಪಂದನ ಕೇಂದ್ರ, ಅಂಚೆ ಕಛೇರಿ ಹಾಗೂ ಬ್ಯಾಂಕ್‌ಗಳಲ್ಲಿ ಇರುವ ಆಧಾರ ನೋಂದಣಿ ಕೇಂದ್ರಕ್ಕೆ ಭೇಟಿ ಮಾಡಿ UIDAI ಅವರು ಅಭಿವೃದ್ಧಿಪಡಿಸಿರುವ ಹೊಸ ವೈಶಿಷ್ಟ ದಾಖಲಾತಿ ನವೀಕರಣ (UIDAI has Developed a new feature Document Update) ತಂತ್ರಾಂಶವನ್ನು ಉಪಯೋಗಿಸಿಕೊಂಡು ಆಧಾರ ಕಾರ್ಡುಗಳನ್ನು ನವೀಕರಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.