ನವದೆಹಲಿ : ಕ್ರಿಕೆಟ್ ಭಾರತದ ಉದ್ದಗಲಕ್ಕೂ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿದ್ದು, ಜನರು ಆಡಲು ಮತ್ತು ಕ್ರೀಡೆಯೊಂದಿಗೆ ಸಂಪರ್ಕದಲ್ಲಿರಲು ಹಲವು ಕಾರಣಗಳಿವೆ. ಮಧ್ಯಪ್ರದೇಶದ ಭೋಪಾಲ್ನಲ್ಲಿ ಸಂಸ್ಕೃತಿ ಬಚಾವೋ ಮಂಚ್ ವಿಶಿಷ್ಟ ಕ್ರಿಕೆಟ್ ಪಂದ್ಯಾವಳಿಯನ್ನ ಆಯೋಜಿಸಿದ್ದು, ಈ ಪಂದ್ಯಾವಳಿಯನ್ನು ಮಹರ್ಷಿ ಮೈತ್ರಿ ಮ್ಯಾಚ್ ಟೂರ್ನಮೆಂಟ್ ಎಂದು ಹೆಸರಿಸಲಾಗಿದೆ. ಸಧ್ಯ ಈ ವಿಶಿಷ್ಠ ಪಂದ್ಯದ ವಿಡಿಯೋ ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸುದ್ದಿ ಸಂಸ್ಥೆ ಎಎನ್ಐ ಹಂಚಿಕೊಂಡಿರುವ ವೀಡಿಯೊದಲ್ಲಿ, ಆಟಗಾರರು ‘ಧೋತಿ ಮತ್ತು ಕುರ್ತಾ’ ಧರಿಸಿ ಕ್ರಿಕೆಟ್ ಆಡುತ್ತಿರುವುದನ್ನು ಕಾಣಬಹುದು ಮತ್ತು ಪಂದ್ಯದ ವೀಕ್ಷಕ ವಿವರಣೆಯನ್ನ ಸಂಸ್ಕೃತದಲ್ಲಿ ಮಾಡಲಾಗುತ್ತಿದೆ. ಎಎನ್ಐ ಪ್ರಕಾರ, ಪಂದ್ಯಾವಳಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸುತ್ತಿದ್ದು, ವಿಜೇತ ತಂಡದ ಆಟಗಾರರನ್ನ ಸಂಸ್ಕೃತಿ ಬಚಾವೋ ಮಂಚ್ ದರ್ಶನಕ್ಕಾಗಿ ಅಯೋಧ್ಯೆಗೆ ಕರೆದೊಯ್ಯಲಿದೆ.
#WATCH | Madhya Pradesh: In a unique cricket tournament (Maharishi Maitri Match Tournament) organized by Sanskriti Bachao Manch in Bhopal, the players can be seen playing in 'dhoti' and 'kurta' while commentary is being done in the Sanskrit language. A total of 12 teams are… pic.twitter.com/VU7Y7y2t1Q
— ANI (@ANI) January 6, 2024
ಧಾರವಾಡದಲ್ಲಿ ‘ಶಾಲಾ ಬಾಲಕಿ’ ಕಪಾಳಕ್ಕೆ ಹೊಡೆದ ‘ಸರ್ಕಾರಿ ಬಸ್ ಕಂಡಕ್ಟರ್’
BREAKING : ಹೊಸ ‘ಔಷಧ ತಯಾರಿಕೆ ಮಾನದಂಡ’ ಅನುಸರಿಸಲು ಕಂಪನಿಗಳಿಗೆ ಕೇಂದ್ರ ಸರ್ಕಾರ ಆದೇಶ