ನವದೆಹಲಿ : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು ಉಲ್ಲೇಖಿಸಿ “ಅಬ್ಕಿ ಬಾರ್, 400 ಪಾರ್”( ಈ ಬಾರಿ 400 ದಾಟುತ್ತದೆ) ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಗುರುವಾರ ಸದನದಲ್ಲಿ ದೇಶದ ಮಧ್ಯಂತರ ಬಜೆಟ್ ಮಂಡಿಸಲಾಯಿತು. ಮೋದಿ ಸರ್ಕಾರದ ಎರಡನೇ ಅವಧಿಯ ಈ ಕೊನೆಯ ಬಜೆಟ್ಗಾಗಿ ಕರೆಯಲಾದ ಬಜೆಟ್ ಅಧಿವೇಶನದಲ್ಲಿ ಶುಕ್ರವಾರ ಚರ್ಚೆ ಮುಂದುವರಿಯಿತು. ರಾಜ್ಯಸಭೆಯಲ್ಲಿ ಶುಕ್ರವಾರ ನಡೆದ ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “330-334 ಸ್ಥಾನಗಳೊಂದಿಗೆ ನಿಮಗೆ ಬಹುಮತವಿದೆ. ಈ ಬಾರಿ ಅದು 400ಕ್ಕಿಂತ ಹೆಚ್ಚಾಗಲಿದೆ” ಎನ್ನುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನೆರೆದಿದ್ದ ಆಡಳಿತ ಪಕ್ಷದ ಸಂಸದರು ಮೇಜನ್ನ ಬಡಿದು, ಚಪ್ಪಾಳೆ ತಟ್ಟಿ ಘೋಷಣೆಗಳನ್ನ ಕೂಗಿದರು. ಸಧ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಈ ವಿಡಿಯೋವನ್ನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಪ್ರತಿಪಕ್ಷಗಳು ಸಹ ಒಪ್ಪಿಕೊಂಡಿವೆ, ಬಿಜೆಪಿ ಮೂರನೇ ಬಾರಿಗೆ 400 ಗಡಿ ದಾಟುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.
विपक्ष ने कर लिया स्वीकार,
तीसरी बार में 400 पार! pic.twitter.com/AWvbZexcaK— Smriti Z Irani (@smritiirani) February 2, 2024
ಈ ‘ರೇಷನ್ ಕಾರ್ಡ್’ಯಿದ್ರೆ ಅಗ್ಗದಲ್ಲಿ ಸಿಗುತ್ತೆ ‘ಗೋಧಿ, ಅಕ್ಕಿ, ಸಕ್ಕರೆ’ ; ನೀವೂ ಅಪ್ಲೈ ಮಾಡಿ