ಬೆಂಗಳೂರು : ವಿಲಾಸಿ ಸೀರೆಗಳಿಗೆ ಹೆಸರುವಾಸಿಯಾದ ವಿಆರ್‌ಕೆ ಹೆರಿಟೇಜ್ ನಿಂದ ಇದೀಗ “ಥ್ರೆಡ್ಸ್ ಆಫ್ ಹೆರಿಟೇಜ್” ಆಯೋಜಿಸಲಾಗಿದೆ. ಇದು ಭಾರತೀಯ ಕರಕುಶಲ ಮತ್ತು ಜವಳಿ ಸಂಪ್ರದಾಯದ ಕಲೆಯ ಎಕ್ಸ್ ಕ್ಲೂಸಿವ್ ಆದಂಥ ಪ್ರದರ್ಶನವಾಗಿದೆ. ಒಟ್ಟಾರೆಯಾಗಿ ಈ ಪ್ರದರ್ಶನದಲ್ಲಿ ದೇಶದಾದ್ಯಂತದ ಒಂಬತ್ತು ವಿಶಿಷ್ಟ ಸೀರೆ ನೇಯ್ಗೆಗಳನ್ನು ಒಂದೆಡೆ ಕಲೆ ಹಾಕಲಾಗಿದೆ. ಅದರಲ್ಲಿ ಕಾಂಜೀವರಂ, ಬನಾರಸಿ, ಗದ್ವಾಲ್, ಪೈಥಾಣಿ, ಪರಾಣ್ ಪಠೋಲ, ಝರಿ ಕೋಟಾ, ಕಲಾಂಕರಿ, ಮೈಸೂರು ರೇಷ್ಮೆ ಹಾಗೂ ಬಾಂಧನಿ ಒಳಗೊಂಡಿದೆ. ಇದರಲ್ಲಿ ಪ್ರತಿಯೊಂದು ಸಹ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಕುಸುರಿಗಾರಿಕೆಯ ಗಾಥೆಯನ್ನು ಹೇಳುವ ರೀತಿಯಲ್ಲಿ ಇದೆ.
ಈ ಪ್ರದರ್ಶನವನ್ನು ಉದ್ಘಾಟಿಸಿದವರು ಅದ್ಭುತ ನೇಯ್ಗೆಗೆ ಹೆಸರಾದ- ಗುಜರಾತ್ ನ ಅಹಮದಾಬಾದ್ ನವರಾದ ಪ್ರವೀಣ್ ಭಾಯ್ ಸಿ ಪಠೋಲ್ ವಾಲಾ. ಪರಂಪರೆಯ ಮಾತಿನ ಮೂಲಕವಾಗಿ ಅವರು ಪ್ರೇಕ್ಷಕರನ್ನು ಆಕರ್ಷಿಸಿದರು. ತುಂಬ ಒಳನೋಟಗಳನ್ನು ಹೊಂದಿದ್ದಂಥ ಸೆಷನ್ ಅವರದಾಗಿತ್ತು. ಅದರಲ್ಲಿ ಝರಿ ಕೋಟಾದ ನೇಯ್ಗೆಯ ಸೂಕ್ಷ್ಮ ತಂತ್ರಗಳು ಹಾಗೂ ಅದರ ಪರಂಪರೆಯ ಬಗ್ಗೆ ತುಂಬ ಚೆನ್ನಾಗಿ ಅವರು ವಿವರಿಸಿದರು.
ಪ್ರದರ್ಶನದಲ್ಲಿ ಕಣ್ಣರಳಿಸುವಂತೆ ಮಾಡಿದ್ದು ಭರ್ಜರಿಯಾಗಿದ್ದ ಕಾಂಜೀವರಂ ಸೀರೆ. ಅದರ ಮೌಲ್ಯ 2 ಲಕ್ಷ ರೂಪಾಯಿ ಮೇಲ್ಪಟ್ಟಿತ್ತು. ತುಂಬ ಸೂಕ್ಷ್ಮವಾಗಿ ಚಿನ್ನ ಮತ್ತು ಬೆಳ್ಳಿಯಿಂದ ಹೆಣೆದ ಝರಿಯಿಂದ ನೇಯ್ದ ಸೀರೆ ಅದಾಗಿತ್ತು. ವಿಆರ್‌ಕೆ ಹೆರಿಟೇಜ್ ಸಂಗ್ರಹದಲ್ಲಿನ ಅತ್ಯುತ್ತಮ ಗುಣಮಟ್ಟ, ಸಾಂಪ್ರದಾಯಿಕತೆ ಹಾಗೂ ಅದ್ಭುತವಾದದ್ದನ್ನು ನೀಡುವಂಥದ್ದು ಎಂಬುದನ್ನು ವ್ಯಾಖ್ಯಾನಿಸುವುದಕ್ಕೆ ಈ ಸೊಗಸಾದ ಸೀರೆಯೊಂದೇ ಸಾಕಾಗಿತ್ತು.
ಸೀರೆಯ ಬಗ್ಗೆ ತುಂಬ ವಿಶಿಷ್ಟ ಪ್ರೀತಿ ಇರುವಂಥವರು, ವೈವಿಧ್ಯ ಬಗೆಯ ಸೀರೆಯ ನೇಯ್ಗೆಯ ಬಗ್ಗೆ ಆಸಕ್ತಿ ಇರುವವರು ಮತ್ತು ಅದೇ ಸಮಯಕ್ಕೆ ಸೀರೆಗಳನ್ನು ಸಂಗ್ರಹ ಹೊಂದಿರುವವರು ಮತ್ತು ವಿಶಿಷ್ಟ ಸೀರೆಗಳನ್ನು ಹುಡುಕಾಡುವಂಥವರು, ಸಮುದಾಯದ ಸದಸ್ಯರು ಇವರೆಲ್ಲರನ್ನೂ ಈ ಕಾರ್ಯಕ್ರಮವು ಸ್ವಾಗತಿಸುತ್ತಾ ಇದೆ. ವಿಆರ್‌ಕೆ ಹೆರಿಟೇಕ್ ಬದ್ಧತೆ ಏನೆಂದರೆ, ಭಾರತದ ಜವಳಿ ಪರಂಪರೆಯನ್ನು ಉತ್ತೇಜಿಸುವುದು ಹಾಗೂ ಅದನ್ನು ಕಾಪಾಡಿಕೊಳ್ಳುವುದು. ಅದೇ ವೇಳೆ ಸಂಪ್ರದಾಯ ಹಾಗೂ ಸಮುದಾಯ ಎರಡನ್ನೂ ಗೌರವಿಸುವುದಕ್ಕೆ ಬೇಕಾದಂಥ ಪ್ಲಾಟ್ ಫಾರ್ಮ್ ಅಥವಾ ವೇದಿಕೆಯನ್ನು ಸೃಷ್ಟಿಸುವುದನ್ನು ಖಾತ್ರಿಪಡಿಸುವುದಾಗಿದೆ.
ನಿಖರವಾದ ಹಾಗೂ ವೈವಿಧ್ಯಮಯಮಾದ ಸೀರೆ ಕುಸುರಿಗೆ ಬೆಂಗಳೂರು ಬಹಳ ಸೂಕ್ತ ಮತ್ತು ಹೇಳಿ ಮಾಡಿಸಿದಂಥ ಸ್ಥಳ. ಎಲ್ಲ ಕಾಲಕ್ಕೂ ತನ್ನ ಸೌಂದರ್ಯ ಹಾಗೂ ಶ್ರೀಮಂತಿಕೆ ಮೂಲಕ ಸೆಳೆಯುವಂಥ ಸೀರೆಗಳನ್ನು ಬಯಸುವವರಿಗೆ ವಿಆರ್‌ಕೆ ಹೆರಿಟೇಜ್ ಉತ್ತೇಜನದ ಹೆಮ್ಮೆಯನ್ನು ಮುಂದುವರಿಸಿಕೊಂಡು ಬಂದಿದೆ ವಿಆರ್‌ಕೆ ಹೆರಿಟೇಜ್. ಇದೇ ಅಕ್ಟೋಬರ್ 6ನೇ ತಾರೀಕಿನ ತನಕ ಬೆಂಗಳೂರಿನಲ್ಲಿ ಇರುವ ಮಳಿಗೆ ಇಲ್ಲಿಗೆ ಭೇಟಿ ನೀಡುವವರಿಗೆ “ಥ್ರೆಡ್ಸ್ ಆಫ್ ಹೆರಿಟೇಜ್” ಪ್ರದರ್ಶನ ಇರುತ್ತದೆ. ಪ್ರತಿ ನೂಲಿನಲ್ಲೂ ಸೌಂದರ್ಯ ಹಾಗೂ ಪರಂಪರೆಯ ನೇಯ್ಗೆಯನ್ನು ಅನುಭವಿಸುವುದಕ್ಕೆ ಅಪರೂಪದ ಅವಕಾಶವನ್ನು ಒದಗಿಸುತ್ತದೆ.
ಬೆಂಗಳೂರಿನ ವಿಆರ್‌ಕೆ ಹೆರಿಟೇಜ್‌ನಲ್ಲಿರುವ ಪ್ರದರ್ಶನಕ್ಕೆ ಭೇಟಿ ನೀಡವುದಕ್ಕಾಗಿ ವಿಳಾಸ: 46ನೇ ಅಡ್ಡರಸ್ತೆ, ಶೆಲ್ ಪೆಟ್ರೋಲ್ ಬಂಕ್ ಸಮೀಪ, 5ನೇ ಬ್ಲಾಕ್, ಟಿಎಂಸಿ ಲೇಔಟ್, 1ನೇ ಹಂತ, ಜಯನಗರ, ಬೆಂಗಳೂರು – 560041.
GST ಕಡಿತದ ನಂತರ ಬೆಲೆಗಳನ್ನು ಕಡಿಮೆ ಮಾಡದ ‘ಇ-ಕಾಮರ್ಸ್ ಕಂಪನಿ’ಗಳನ್ನು ಕೇಂದ್ರ ಸರ್ಕಾರ ತರಾಟೆ