ನವದೆಹಲಿ: ಲೋಕಸಭಾ ಚುನಾವಣೆ 2024 ನಡೆಯುತ್ತಿದ್ದು, ಏಪ್ರಿಲ್ 26 ರಂದು 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 89 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನ ಈಗ ಶುರುವಾಗಿದೆ. ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ 89 ಸ್ಥಾನಗಳಿಗೆ ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದೆ. ಏಪ್ರಿಲ್ 19 ರಂದು ನಿಗದಿಯಾಗಿದ್ದ ಮೊದಲ ಹಂತದ ಮತದಾನದಲ್ಲಿ ಒಟ್ಟು 109 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
ಲೋಕಸಭಾ ಚುನಾವಣೆಯ ಎರಡನೇ ಹಂತದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ಪ್ರಮುಖ ಸ್ಪರ್ಧಿಗಳಾಗಿವೆ. ಹಲವಾರು ಪ್ರಾದೇಶಿಕ ಪಕ್ಷಗಳು ಸಹ 89 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
2ನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳ ಪಟ್ಟಿ
ಅಸ್ಸಾಂ: ಕರೀಂಗಂಜ್, ಸಿಲ್ಚಾರ್, ಮಂಗಲ್ದೋಯ್, ನವ್ಗಾಂಗ್, ಕಾಲಿಯಾಬೋರ್
ಬಿಹಾರ: ಕಿಶನ್ಗಂಜ್, ಕತಿಹಾರ್, ಪೂರ್ಣಿಯಾ, ಭಾಗಲ್ಪು
ಛತ್ತೀಸ್ಗಢ: ರಾಜನಂದಗಾಂವ್, ಮಹಾಸಮುಂದ್, ಕಂಕೇರ್
ಜಮ್ಮು ಮತ್ತು ಕಾಶ್ಮೀರ: ಜಮ್ಮು
ಕರ್ನಾಟಕ: ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ
ಕೇರಳ: ಕಾಸರಗೋಡು, ಕಣ್ಣೂರು, ವಟಕರ, ವಯನಾಡ್, ಕೋಝಿಕೋಡ್, ಮಲಪ್ಪುರಂ, ಪೊನ್ನಾನಿ, ಪಾಲಕ್ಕಾಡ್, ಅಲತೂರ್, ತ್ರಿಶೂರ್, ಚಲಕುಡಿ, ಎರ್ನಾಕುಲಂ, ಇಡುಕ್ಕಿ, ಕೊಟ್ಟಾಯಂ, ಅಲಪ್ಪುಳ, ಮಾವೆಲಿಕ್ಕರ, ಪಥನಂತಿಟ್ಟ, ಕೊಲ್ಲಂ, ಅಟ್ಟಿಂಗಲ್, ತಿರುವನಂತಪುರಂ
ಮಣಿಪುರ: ಹೊರ ಮಣಿಪುರ
ಮಧ್ಯಪ್ರದೇಶ: ಟಿಕಾಮ್ಗರ್, ದಮೋಹ್, ಖಜುರಾಹೊ, ಸತ್ನಾ, ರೇವಾ, ಹೋಶಂಗಾಬಾದ್, ಬೆತುಲ್
ಮಹಾರಾಷ್ಟ್ರ: ಬುಲ್ಧಾನಾ, ಅಕೋಲಾ, ಅಮರಾವತಿ, ವಾರ್ಧಾ, ಯವತ್ಮಾಲ್ ವಾಶಿಮ್, ಹಿಂಗೋಲಿ, ನಾಂದೇಡ್, ಪರ್ಭಾನಿ
ರಾಜಸ್ಥಾನ: ಟೋಂಕ್-ಸವಾಯಿ ಮಾಧೋಪುರ್, ಅಜ್ಮೀರ್, ಪಾಲಿ, ಜೋಧ್ಪುರ, ಬಾರ್ಮರ್, ಜಲೋರ್, ಉದಯಪುರ, ಬನ್ಸ್ವಾರಾ, ಚಿತ್ತೋರ್ಗಢ್, ರಾಜ್ಸಮಂದ್, ಭಿಲ್ವಾರಾ, ಕೋಟಾ, ಝಾಲಾವರ್-ಬರಾನ್
ತ್ರಿಪುರಾ: ತ್ರಿಪುರಾ ಪೂರ್ವ
ಉತ್ತರ ಪ್ರದೇಶ: ಅಮ್ರೋಹಾ, ಮೀರತ್, ಬಾಗ್ಪತ್, ಗಾಜಿಯಾಬಾದ್, ಗೌತಮ್ ಬುದ್ಧ ನಗರ, ಬುಲಂದ್ಶಹರ್, ಅಲಿಗಢ, ಮಥುರಾ
ಪಶ್ಚಿಮ ಬಂಗಾಳ: ಡಾರ್ಜಿಲಿಂಗ್, ರಾಯ್ಗಂಜ್, ಬಾಲೂರ್ಘಾಟ್
ರಾಜನಂದಗಾಂವ್ ನಿಂದ ಭೂಪೇಶ್ ಬಘೇಲ್, ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ.ಸುರೇಶ್, ಬೆಂಗಳೂರು ಉತ್ತರದಿಂದ ಶೋಭಾ ಕರಂದ್ಲಾಜೆ, ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ, ಮಂಡ್ಯದಿಂದ ಎಚ್.ಡಿ.ಕುಮಾರಸ್ವಾಮಿ, ವಯನಾಡ್ ನಿಂದ ರಾಹುಲ್ ಗಾಂಧಿ, ಪಥನಂತಿಟ್ಟದಿಂದ ಅನಿಲ್ ಆಂಟನಿ, ತಿರುವನಂತಪುರಂನಿಂದ ಶಶಿ ತರೂರ್ ಮತ್ತು ರಾಜೀವ್ ಚಂದ್ರಶೇಖರ್ ಸ್ಪರ್ಧಿಸುತ್ತಿರುವ ಪ್ರಮುಖ ಅಭ್ಯರ್ಥಿಗಳು.
ಜೋಧಪುರದಿಂದ ಗಜೇಂದ್ರ ಸಿಂಗ್ ಶೇಖಾವತ್, ಜಲೋರ್ನಿಂದ ವೈಭವ್ ಗೆಹ್ಲೋಟ್, ಮಥುರಾದಿಂದ ಹೇಮಾ ಮಾಲಿನಿ, ಮೀರತ್ನಿಂದ ಅರುಣ್ ಗೋವಿಲ್ 2024 ರ ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಲ್ಲಿ ಸೇರಿದ್ದಾರೆ.