ಶಿವಮೊಗ್ಗ: ಜಿಲ್ಲೆಯ ಸಾಗರದ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ಚುನಾವಣೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು, ನವೆಂಬರ್.24 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಈ ಕುರಿತಂತೆ ಚುನಾವಣಾಧಿಕಾರಿ ನಾಗಭೂಷಣ ಚಂದ್ರಶೇಖರ ಕಲ್ಮನೆ ಅವರು ಚುನಾವಣಾ ಅಧಿಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ಮುಂದಿನ ಮೂರು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ ಚುನಾವಣೆಯನ್ನು ಈ ಕೆಳಕಂಡಂತೆ ನಿಗದಿ ಪಡಿಸಿರುವುದಾಗಿ ತಿಳಿಸಿದ್ದಾರೆ.
ಹೀಗಿದೆ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣಾ ವೇಳಾಪಟ್ಟಿ
- ದಿನಾಂಕ 19-11-2025ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಉಮೇದುವಾರಿಕೆ ಹಿಂಪಡೆಯಲು ದಿನಾಂಕ 24-11-2025 ಕೊನೆಯ ದಿನವಾಗಿದೆ.
- ದಿನಾಂಕ 25-11-2025ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
- ದಿನಾಂಕ 26-11-2025ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
- ದಿನಾಂಕ 26-11-2025ರಂದು ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ ಪ್ರಕಟ
- ದಿನಾಂಕ 26-11-2025ರಂದು ಸಂಜೆ 4 ಗಂಟೆಗೆ ಕ್ರಮಬದ್ಧ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಪಟ್ಟಿ ಪ್ರಕಟ
- ದಿನಾಂಕ 26-11-2025ರಂದು ಸಂಜೆ 4 ಗಂಟೆಗೆ ಅಭ್ಯರ್ಥಿ ಆಪೇಕ್ಷಿಸಿದಲ್ಲಿ ಚಿಹ್ನೆಗಳನ್ನು ಹಂಚಿಕೆ.
- ದಿನಾಂಕ 26-11-2025ರಂದು ಸಂಜೆ 4 ಗಂಟೆಗೆ ಚಿಹ್ನೆ ಸಹಿತ ಕ್ರಮಬದ್ಧವಾಗಿ ಸ್ಪರ್ಧೆಯಲ್ಲಿರುವಂತ ಅಭ್ಯರ್ಥಿಗಳ ಪಟ್ಟಿ ಪ್ರಕಟ
- ದಿನಾಂಕ 30-11-2025ರಂದು ಸಾಗರದ ವಿನೋಬನಗರದಲ್ಲಿರುವಂತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 4 ಗಂಟೆಯವರೆಗೆ ಮತದಾನ ನಿಗದಿ.
- ದಿನಾಂಕ 30-11-2025ರಂದು ಮತದಾನ ಮುಕ್ತಾಯದ ನಂತ್ರ ಮತಏಣಿಕೆ ಮಾಡಿ, ಫಲಿತಾಂಶ ಪ್ರಕಟ
ನ.30ರಂದು ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಯಾವೆಲ್ಲ ಸ್ಥಾನಗಳಿಗೆ ಚುನಾವಣೆ?
- ಸಾಮಾನ್ಯ ವರ್ಗ – 23 ಸ್ಥಾನ
- 2.ಮಹಿಳಾ ಮೀಸಲು – 5 ಸ್ಥಾನ
- ಉಪ್ಪಾರ ಸಮಾಜ – 1 ಸ್ಥಾನ
- ಕುರುಬ ಸಮಾಜ – 1 ಸ್ಥಾನ
- ಮಡಿವಾಳ ಸಮಾಜ – 1 ಸ್ಥಾನ
- ಸಮಗಾರ ಸಮಾಜ – 1 ಸ್ಥಾನ
- ಛಲವಾದಿ ಸಮಾಜ- 1 ಸ್ಥಾನ
- ಭೋವಿ/ಗಂಗಾಮತ ಸಮಾಜ- 1 ಸ್ಥಾನ
- ಗುಡಿಗಾರ ಸಮಾಜ- 1 ಸ್ಥಾನ
- ಆಚಾರರ ಸಮಾಜ -1 ಸ್ಥಾನ
ಒಟ್ಟು 36 ಸ್ಥಾನಗಳು ಸೇರಿವೆ. ಈ ಮೇಲ್ಕಂಡ ಒಟ್ಟು 36 ಸ್ಥಾನಗಳಲ್ಲಿ 28 ಸ್ಥಾನಗಳಿಗೆ ಮಾತ್ರವೇ ಚುನಾವಣೆ ನಡೆಯಲಿದೆ. ಇದರ ಹೊರತಾಗಿ ಉಪ್ಪಾರ, ಕುರುಬ, ಮಡಿವಾಳ, ಸಮಗಾರ, ಛಲವಾದಿ, ಭೋವಿ/ಗಂಗಾಮತ, ಗುಡಿಗಾರ ಸಮಾಜಕ್ಕೆ ಚುನಾವಣೆ ನಡೆಯೋದಿಲ್ಲ. ಆದರೇ ಒಂದು ವೇಳೆ 8 ಸಮಾಜದ ಮೀಸಲು ಸ್ಥಾನಗಳಿಗೂ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳ ಹೆಸರುಗಳನ್ನು ಸಮಾಜದಿಂದ ಸೂಚಿಸಿದಲ್ಲಿ ಚುನಾವಣೆ ನಡೆಸುವ ಸಂಭವವಿದೆ ಎನ್ನಲಾಗುತ್ತಿದೆ.
ಅಂದಹಾಗೇ ಶಿವಮೊಗ್ಗ ಜಿಲ್ಲಾ ಮತ್ತು ಪ್ರದಾನ ಸತ್ರ ನ್ಯಾಯಾಲಯವು ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ದಿನಾಂಕ 15-11-2025ರಂದು, ದಿನಾಂಕ 24-11-2025ರ ಒಳಗಾಗಿ ಚುನಾವಣೆ ನಡೆಸಿ, ದಿನಾಂಕ 30-11-2025ರೊಳಗೆ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸುವಂತೆ ಆದೇಶಿಸಿತ್ತು. ಅದರಂತೆ ಇದೀಗ ನವೆಂಬರ್.30ರಂದು ಚುನಾವಣೆ ನಿಗದಿಯಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು

BIG NEWS: ಸಾಗರ ತಾಲ್ಲೂಕಲ್ಲಿ ’50 ಕೋಟಿ’ಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ‘ಆರ್ಥಿಕ ಇಲಾಖೆ’ ಅನುಮತಿಸಿ ಆದೇಶ
ಶಿವಮೊಗ್ಗ: ಸಾಗರ ತಾಲ್ಲೂಕು KUWJ ಸಂಘದ ‘ಅಧ್ಯಕ್ಷರಾಗಿ ಮಹೇಶ್ ಹೆಗಡೆ’ ಅವಿರೋಧವಾಗಿ ಆಯ್ಕೆ








