ಬೆಂಗಳೂರು: ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ನಡೆದಂತ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ವಿವೇಕ್ ರೆಡ್ಡಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಇಂದು ಬೆಂಗಳೂರು ವಕೀಲರ ಸಂಘದ ಚುನಾವಣೆ 2025-2028ಗೆ ಮತದಾನ ನಡೆಯಿತು. ಮತದಾನದ ಬಳಿಕ ನಡೆದಂತ ಮತಏಣಿಕೆ ಕಾರ್ಯದಲ್ಲಿ ಮೊದಲ ಸುತ್ತಿನಿಂದ ಅಂತಿಮ ಸುತ್ತಿನವರೆಗೆ ಅಧ್ಯಕ್ಷರ ಹುದ್ದೆಯ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿಯೇ ನಡೆಯಿತು.
9ನೇ ಸುತ್ತಿನಲ್ಲಿ ಒಟ್ಟು 13,403 ಮತಗಳು ಅಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಚಲಾವಣೆಗೊಂಡಿದ್ದವು. ಇವುಗಳಲ್ಲಿ ಎಪಿ ರಂಗನಾಥ್ 4,518 ಮತಗಳನ್ನು ಪಡೆದಿದ್ದರೇ, ವಿವೇಕ್ ಸುಬ್ಬಾರೆಡ್ಡಿ ಅವರು 6,820 ಮತಗಳನ್ನು ಪಡೆದರು. ಅಂತಿಮವಾಗಿ ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಮತ್ತೊಮ್ಮೆ ಅಧ್ಯಕ್ಷರಾಗಿ ವಿವೇಕ್ ರೆಡ್ಡಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಇನ್ನೂ ಜನರಲ್ ಸೆಕ್ರೇಟರಿ ಸ್ಥಾನಕ್ಕೆ ನಡೆದಂತ ಚುನಾವಣೆಯಲ್ಲಿ ಪ್ರವೀಣ್ ಗೌಡ ಹೆಚ್.ವಿ ಅವರು ಶಿವಮೂರ್ತಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಪ್ರವೀಣ್ ಗೌಡ ಅವರು 4854 ಮತಗಳನ್ನು ಪಡೆದರೇ, ಶಿವಮೂರ್ತಿ ಅವರು 2,321 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ಅಂದಹಾಗೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ 6 ಮಂದಿ ಸ್ಪರ್ಧೆಯಲ್ಲಿದ್ದರು. ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಐವರು ಕಣದಲ್ಲಿದ್ದರು. ಇನ್ನೂ ಉಳಿದಂತ ಚುನಾವಣೆಯ ಫಲಿತಾಂಶ ಹೊರಬೀಳಬೇಕಿದೆ.
ಮಹಿಳೆಯರಿಗಾಗಿ ಮೀಸಲಾಗಿರುವಂತ ಖಜಾಂಚಿಯ ಹುದ್ದೆಗೇರಲು ಎಸ್.ಸುಧಾ, ಕೆ.ಶೈಲಜಾ, ಪಿ.ಕೆ ಸ್ವಪ್ನಾ, ಎಂಎಂ ವಹೀದಾ, ಗೀತಾ ರಾಜ್, ಹೆಚ್.ಆರ್ ಅನಿತಾ, ಎಲ್ ಮಂಜುಳಾ, ಪಿ.ಮಂಜುಳಾ, ಎಂ.ಮಂಜುಳಮ್ಮ, ಕೆ. ಮೀನಾಕ್ಷಿ, ರುಖೈ.ಬಿ, ಸಂಧ್ಯಾ ಜಮದಾಗ್ನಿ ಸೇರಿದಂತೆ ಇತರರು ಕಣದಲ್ಲಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ರಾತ್ರಿ ವೇಳೆ ‘ಸಿಂಗಲ್ ಫೇಸ್’ ಕೃಷಿ ಪಂಪ್ ಸೆಟ್ ನೀರಾವರಿಗೆ ಬಳಸಬೇಡಿ: ರೈತರಿಗೆ ಬೆಸ್ಕಾಂ ಮನವಿ