ಬೆಂಗಳೂರು: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ಸಂಸತ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಈ ನಡುವೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಡೆಗೆ ವ್ಯಾಪಾಕ ಟೀಕೆ ಕೇಳಿ ಬಂದಿದ್ದು, ಕರ್ನಾಟಕದ ಸಂಸದರಾಗಿ ಅವರು ಕನ್ನಡದಲ್ಲಿ ಪ್ರಮಾಣವಚನ ಸ್ವೀಕಾರ ಮಾಡುವುದು ಬಿಟ್ಟು ಸಂಸ್ಕೃತದಲ್ಲಿ ಲೋಕಸಭಾ ಸದ್ಯಸನಾಗಿ ಸ್ವೀಕಾರ ಮಾಡಿರುವುದು ನಾಡಿಗೆ ಮಾಡಿದ ದ್ರೋಹ ಅಂತ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾಗಿ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ಸಂಸತ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿದರು. pic.twitter.com/pXzjQevLAN
— BJP Karnataka (@BJP4Karnataka) June 24, 2024