ಬೆಂಗಳೂರು: ಹಾವೇರಿ ಮತ್ತು ಬ್ಯಾಡಗಿ ನಿಲ್ದಾಣಗಳ ನಡುವಿನ ರೈಲ್ವೆ ಹಳಿಯಲ್ಲಿ ಅಗತ್ಯ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳು ನಡೆಯುತ್ತಿರುವುದರಿಂದ, ಈ ಕೆಳಗಿನ ರೈಲುಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗುತ್ತಿದೆ.
1. ರೈಲು ಸಂಖ್ಯೆ 17325 ಬೆಳಗಾವಿ–ಮೈಸೂರು ವಿಶ್ವಮಾನವ ದೈನಂದಿನ ಎಕ್ಸ್ ಪ್ರೆಸ್ ರೈಲು ಈ ಮೊದಲು ಮೇ 5, 6, 8, 9, 11, 12, 13, 15 ಮತ್ತು 16, 2025 ರಂದು ಬೆಳಗಾವಿಯಿಂದ 60 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ ಮತ್ತು ಮಾರ್ಗ ಮಧ್ಯೆ 45 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, ಈಗ ಈ ರೈಲು ಮೇ 5, 2025 ರಿಂದ ತನ್ನ ಮೊದಲಿನ ವೇಳಾಪಟ್ಟಿಯ ಪ್ರಕಾರ ಎಂದಿನಂತೆ ಸಂಚಾರ ಆರಂಭಿಸಲಿದೆ.
2. ಮೇ 6, 8, 13, 15 ಮತ್ತು 20, 2025 ರಂದು ಬಿಕಾನೇರ್’ನಿಂದ ಹೊರಡುವ ರೈಲು ಸಂಖ್ಯೆ 16588 ಬಿಕಾನೇರ್–ಯಶವಂತಪುರ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯೆ 75 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
3. ಮೇ 5, 6, 8, 9, 11, 12, 13, 15, 16, 18, 19, 20, 22 ಮತ್ತು 23, 2025 ರಂದು ಹೊರಡುವ ರೈಲು ಸಂಖ್ಯೆ 17347 ಹುಬ್ಬಳ್ಳಿ–ಚಿತ್ರದುರ್ಗ ಡೈಲಿ ಎಕ್ಸ್ ಪ್ರೆಸ್ ಹುಬ್ಬಳ್ಳಿಯಿಂದ 75 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ ಮತ್ತು ಮಾರ್ಗ ಮಧ್ಯೆ 25 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
SSLC ಪರೀಕ್ಷೆ-2ಕ್ಕೆ ಈವರೆಗೆ 64,600 ವಿದ್ಯಾರ್ಥಿಗಳು ನೋಂದಣಿ: ಸಚಿವ ಮಧು ಬಂಗಾರಪ್ಪ
BREAKING: ಭಾರತ-ಪಾಕ್ ಉದ್ವಿಗ್ನತೆಯ ನಡುವೆ 2ನೇ ಬಾರಿಗೆ ಫತಾಹ್ ಕ್ಷಿಪಣಿ ಪರೀಕ್ಷೆ ನಡೆಸಿದ ಪಾಕಿಸ್ತಾನ!