Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈಗ ಒಳ್ಳೆಯ ಆಡಳಿತ ಕೊಟ್ಟರೆ, 2028ರ ಚುನಾವಣೆಯಲ್ಲಿ ಅನುಕೂಲ ಆಗಲಿದೆ : ಸಿಎಂ ಡಿಕೆಶಿಗೆ ಕೆ.ಎನ್ ರಾಜಣ್ಣ ಸಲಹೆ!

BREAKING : ವಿಶಾಖಪಟ್ಟಣಂ ಉಕ್ಕು ಕಾರ್ಖಾನೆಯಲ್ಲಿ ಬಿಸಿ ಲೋಹ ಬಿದ್ದು, 8 ಕಾರ್ಮಿಕರು ಸಜೀವ ದಹನ | Watch Video

BIG NEWS : ರಾಜ್ಯದಲ್ಲಿ `ರೌಡಿಸಂ’ಗೆ ಬ್ರೇಕ್ ಹಾಕಲು ಮಹತ್ವದ ಕ್ರಮ: ‘ರೌಡಿ ಸ್ಕ್ವಾಡ್’ ರಚನೆಗೆ ಸರ್ಕಾರ ಮಹತ್ವದ ಆದೇಶ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ವಿಶ್ವಕರ್ಮ’ ಸಮಾಜವೇ ನಿಜವಾದ ಮೊದಲ ‘ಇಂಜಿನಿಯರ್’ಗಳು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
KARNATAKA

‘ವಿಶ್ವಕರ್ಮ’ ಸಮಾಜವೇ ನಿಜವಾದ ಮೊದಲ ‘ಇಂಜಿನಿಯರ್’ಗಳು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ವಿಶ್ವಕರ್ಮ ಸಮಾಜ ನಿಜವಾದ ಮೊದಲ ಇಂಜಿನಿಯರ್ ಗಳು. ಅವರಲ್ಲಿರುವ ಕುಶಲತೆ ಅಪಾರ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ವಿಶ್ವಕರ್ಮ ನಾಡೋಜ ಡಾ. ಬಿ.ಎಂ. ಉಮೇಶ್ ಕುಮಾರ್ ನೇತೃತ್ವದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ವಿರಾಟ್ ವಿಶ್ವಕರ್ಮ ಮಹೋತ್ಸವವನ್ನು ಉದ್ಘಾಟಿಸಿ ಸಾಧಕರಿಗೆ ವಿಶ್ವಕರ್ಮ ಶ್ರೀ, ವಿಶ್ವಕರ್ಮ ಸೇವಾ ರತ್ನ ಸೇರಿ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ವಿಶ್ವಕರ್ಮ ಸಮುದಾಯ ಭವ್ಯವಾದ ಶ್ರಮ ಸಂಸ್ಕೃತಿಯನ್ನು ಬೆಳೆಸಿಕೊಂಡು, ಉಳಿಸಿಕೊಂಡು ಬಂದಿದೆ. ನಿಮ್ಮಲ್ಲಿ ಅಗಾಧ ಪ್ರತಿಭೆ ಇದ್ದು, ಮುಂದಿನ ಪೀಳಿಗೆಗೆಯನ್ನು ಇನ್ನಷ್ಟು ಸಶಕ್ತಗೊಳಿಸಬೇಕಾಗಿದೆ. ಸಮುದಾಯದ ಸೃಜನ ಶೀಲತೆಯನ್ನು ಪ್ರೋತ್ಸಾಹಿಸಿ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದರು.

ಯಾವುದೇ ಸಮುದಾಯಕ್ಕೆ ಶಿಕ್ಷಣ, ಆರೋಗ್ಯ ಮತ್ತು ಮಾಹಿತಿ ಅತ್ಯಂತ ಅಗತ್ಯವಾಗಿದೆ. ಸಮಾಜದಲ್ಲಿ ಎಲ್ಲರಿಗೂ ಸಮಾನವಾದ ಅವಕಾಶವಿದೆ. ಪ್ರತಿಯೊಬ್ಬರೂ ಬೆಳೆಯಲು ಅವಕಾಶವಿದೆ. ಎಲ್ಲರೂ ಸಶಕ್ತರಾದರೆ ದೇಶ ಸೂಪರ್ ಪವರ್ ಆಗಲಿದೆ. ವಿಶ್ವಕರ್ಮ ಸಮಾಜಕ್ಕೆ ಸರ್ಕಾರದ ಬೆಂಬಲ ಇದ್ದೇ ಇರುತ್ತದೆ ಎಂದರು.

ಚಿತ್ರನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಮಾತನಾಡಿ, ಪ್ರತಿಯೊಬ್ಬರೂ ಕುಲದ ನೆಲೆಯನ್ನು ಗೌರವಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಮಾಡಬೇಕು. ಸಮುದಾಯದ ನೊಂದವರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರೂಪಿಸಿರುವ ವಿಶ್ವಕರ್ಮ ಯೋಜನೆ ಅತ್ಯುತ್ತಮವಾಗಿದ್ದು, 13 ಸಾವಿರ ಕೋಟಿ ರೂಪಾಯಿ ಮೀಸಲಿರಿಸಿದ್ದಾರೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ್ ಕಂಬಾರ ಅವರನ್ನು ಸಮುದಾಯದಿಂದ ಗೌರವಿಸಲಾಯಿತು. ಆಡಳಿತ ಕ್ಷೇತ್ರದಲ್ಲಿ ಭಾರತೀಯ ಸಮಾಚಾರ ಸೇವೆ ಅಧಿಕಾರಿ ಸುಹಾಸ್ ರಾಮಚಂದ್ರಚಾರ್, ಕೆ.ಎ.ಎಸ್ ಅಧಿಕಾರಿ ಆರ್. ಉಮಾದೇವಿ, ರಾಜಕೀಯದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾ ಪೌರ ರಾಮಪ್ಪ ಬಡಿಗೇರ್, ಚಲನಚಿತ್ರದಲ್ಲಿ ಚಲನಚಿತ್ರ ಕಲಾವಿದೆ ವೀಣಾ ಸುಂದರ್, ಸಮುದಾಯ ಸೇವಾ ಕ್ಷೇತ್ರದಲ್ಲಿ ಬಿ.ಎನ್.ವಿ. ರಾಜಶೇಖರ್ ಅವರಿಗೆ ವಿಶ್ವಕರ್ಮ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಂಗೀತ ಕ್ಷೇತ್ರದಲ್ಲಿ ರಾಜೇಶ್ ಕೃಷ್ಣನ್, ಶಾಸ್ತ್ರೀಯ ನೃತ್ಯಪಟು ಡಾ. ಶ್ರೀಧರ್, ಆಡಳಿತ ಕ್ಷೇತ್ರದಲ್ಲಿ ಡಿಜಿಪಿ ನಂಜುಂಡಸ್ವಾಮಿ, ಕಲಾವಿದ ಡಿ. ಮಹೇಂದ್ರ, ಬರಹಗಾರ ನಾಡೋಜ ಎಸ್. ಷಡಾಕ್ಷರಿ, ಯೋಗ ಗುರು ಆರಾಧ್ಯ, ಶಿಕ್ಷಣ ಕ್ಷೇತ್ರದಲ್ಲಿ ಬಸವನಗುಡಿಯ ನ್ಯಾಷನಲ್ ಕಾಲೇಜ್, ವಾಸವಿ ಆಸ್ಪತ್ರೆ, ಪಂಚಶಿಲ್ಪಿಗಳಾದ ರಾಜಗೋಪಾಲ ಆಚಾರ್ಯ, ನಂಜುಂಡಸ್ವಾಮಿ, ವೆಂಕಟರಮಣಾಚಾರಿ, ಎಂ. ಶಂಕರ್ ಮೂರ್ತಿ, ಎನ್ ಶಂಕರಾಚಾರ್ಯ ಹಾಗೂ ಗೌರವ ಪ್ರಶಸ್ತಿಗಳನ್ನು ಪಿ.ಲಿಂಗಾಚಾರ್, ಬಾಲಸುಬ್ರಹ್ಮಣ್ಯ ಚಾರಿ, ಗಿರಿಧರ್ ಲಾಲ್ ಜಹಂಗೀಡ್, ಮಾನಪ್ಪ ಪತ್ತಾರ, ಕೆ.ಪಿ ಸ್ವಾಮಿ, ಉಮಾಶಂಕರಾಚಾರ್ಯ ಅವರಿಗೆ ವಿಶ್ವಕರ್ಮ ಸೇವಾ ರತ್ನ ಪ್ರಶಸ್ತಿನೀಡಿ ಗೌರವಿಸಲಾಯಿತು.

ಸ್ಮಾರಕ ಪ್ರಶಸ್ತಿ ವಲಯದಲ್ಲಿ ಖಂಜಿರ ವಿದ್ವಾನ್ ಎಚ್.ಪಿ. ರಾಮಾಚಾರ್, ಖ್ಯಾತ ಸಂಗೀತ ಹಾಗೂ ಮೃದಂಗ ವಿದ್ವಾಂಸರು ಆನೂರು ಅನಂತ ಕೃಷ್ಣ ಶರ್ಮ, ತುಮಕೂರಿನ ಶಿಲ್ಪಿ ದಿ. ಕೆ.ಎಚ್. ರಾಜಶೇಖರಚಾರ್ ಪ್ರಶಸ್ತಿಗೆ ಸ್ವರ್ಣ ಶಿಲ್ಪಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಮಾಜಿ ಶಾಸಕಿ ಸೌಮ್ಯ ರೆಡ್ಡಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಸೋಮಶೇಖರ್, ಪ್ರತಿಷ್ಠಾನದ ಅಧ್ಯಕ್ಷ ಪ್ರಭಾಕರ್, ಮುಖಂಡರಾದ ವೇದಮೂರ್ತಿ, ಶಿಲ್ಪಿ ಹೊನ್ನಪ್ಪಾಚಾರ್, ಜಿ.ಶಂಕರ್, ಚಂದ್ರಶೇಖರ ಚಾರಿ, ಬಿ. ರುದ್ರಾಚಾರ್, ಎಸ್. ನಂಜುಂಡ ಪ್ರಸಾದ್, ಡಾ. ಆರ್. ಮಧುಸೂದನ್, ಬಾಲಾಜಿ ಹಾಗೂ ಆರ್. ಪ್ರಸನ್ನ ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

‌’ಬಿಗ್‌ ಬಾಸ್‌’ ಮೇಕಿಂಗ್‌ ವಿಡಿಯೋ ಔಟ್: ಸ್ವರ್ಗ, ನರಕದ ‘ದೊಡ್ಮನೆ’ ಹೇಗಿದೆ ನೋಡಿ | Bigg Boss Kannada 11

BREAKING : ಮುಸ್ಲಿಂರು ‘ಹಮ್ ಪಾಂಚ್ ಹಮಾರಾ ಪಂಚಿಸ್’ ಅಂತಾರೆ : ಶಾಸಕ ಯತ್ನಾಳ್ ವಿವಾದಾತ್ಮಕ ಹೇಳಿಕೆ

Share. Facebook Twitter LinkedIn WhatsApp Email

Related Posts

ಈಗ ಒಳ್ಳೆಯ ಆಡಳಿತ ಕೊಟ್ಟರೆ, 2028ರ ಚುನಾವಣೆಯಲ್ಲಿ ಅನುಕೂಲ ಆಗಲಿದೆ : ಸಿಎಂ ಡಿಕೆಶಿಗೆ ಕೆ.ಎನ್ ರಾಜಣ್ಣ ಸಲಹೆ!

1 Min Read

BIG NEWS : ರಾಜ್ಯದಲ್ಲಿ `ರೌಡಿಸಂ’ಗೆ ಬ್ರೇಕ್ ಹಾಕಲು ಮಹತ್ವದ ಕ್ರಮ: ‘ರೌಡಿ ಸ್ಕ್ವಾಡ್’ ರಚನೆಗೆ ಸರ್ಕಾರ ಮಹತ್ವದ ಆದೇಶ

2 Mins Read

BREAKING : ಸೂರಜ್ ಹೆಗ್ಡೆ ಅಂತಿಮ ದರ್ಶನ ಪಡೆದ ರಾಹುಲ್ ಗಾಂಧಿ : ಸಿಎಂ, ಡಿಸಿಎಂ ಸೇರಿ ಹಲವರು ಭಾಗಿ!

1 Min Read
Recent News

ಈಗ ಒಳ್ಳೆಯ ಆಡಳಿತ ಕೊಟ್ಟರೆ, 2028ರ ಚುನಾವಣೆಯಲ್ಲಿ ಅನುಕೂಲ ಆಗಲಿದೆ : ಸಿಎಂ ಡಿಕೆಶಿಗೆ ಕೆ.ಎನ್ ರಾಜಣ್ಣ ಸಲಹೆ!

BREAKING : ವಿಶಾಖಪಟ್ಟಣಂ ಉಕ್ಕು ಕಾರ್ಖಾನೆಯಲ್ಲಿ ಬಿಸಿ ಲೋಹ ಬಿದ್ದು, 8 ಕಾರ್ಮಿಕರು ಸಜೀವ ದಹನ | Watch Video

BIG NEWS : ರಾಜ್ಯದಲ್ಲಿ `ರೌಡಿಸಂ’ಗೆ ಬ್ರೇಕ್ ಹಾಕಲು ಮಹತ್ವದ ಕ್ರಮ: ‘ರೌಡಿ ಸ್ಕ್ವಾಡ್’ ರಚನೆಗೆ ಸರ್ಕಾರ ಮಹತ್ವದ ಆದೇಶ

BREAKING : ಸೂರಜ್ ಹೆಗ್ಡೆ ಅಂತಿಮ ದರ್ಶನ ಪಡೆದ ರಾಹುಲ್ ಗಾಂಧಿ : ಸಿಎಂ, ಡಿಸಿಎಂ ಸೇರಿ ಹಲವರು ಭಾಗಿ!

State News
KARNATAKA

ಈಗ ಒಳ್ಳೆಯ ಆಡಳಿತ ಕೊಟ್ಟರೆ, 2028ರ ಚುನಾವಣೆಯಲ್ಲಿ ಅನುಕೂಲ ಆಗಲಿದೆ : ಸಿಎಂ ಡಿಕೆಶಿಗೆ ಕೆ.ಎನ್ ರಾಜಣ್ಣ ಸಲಹೆ!

By ಸುರೇಶ್‌ KARNATAKA 1 Min Read

ಬೆಂಗಳೂರು : ಈಗ ಒಳ್ಳೆಯ ಆಡಳಿತ ಕೊಟ್ಟರೆ ಮುಂದೆ ಪಕ್ಷಕ್ಕೆ ಅನುಕೂಲ ಆಗಲಿದೆ. 2028 ರ ಚುನಾವಣೆಗೆ ಈಗಿನ ಒಳ್ಳೆಯ…

BIG NEWS : ರಾಜ್ಯದಲ್ಲಿ `ರೌಡಿಸಂ’ಗೆ ಬ್ರೇಕ್ ಹಾಕಲು ಮಹತ್ವದ ಕ್ರಮ: ‘ರೌಡಿ ಸ್ಕ್ವಾಡ್’ ರಚನೆಗೆ ಸರ್ಕಾರ ಮಹತ್ವದ ಆದೇಶ

BREAKING : ಸೂರಜ್ ಹೆಗ್ಡೆ ಅಂತಿಮ ದರ್ಶನ ಪಡೆದ ರಾಹುಲ್ ಗಾಂಧಿ : ಸಿಎಂ, ಡಿಸಿಎಂ ಸೇರಿ ಹಲವರು ಭಾಗಿ!

ಮೆಂತ್ಯ ಸೊಪ್ಪು ಸೇವಿಸುವುದರಿಂದ ಸಿಗಲಿವೆ ಈ ಎಲ್ಲಾ ಆರೋಗ್ಯ ಪ್ರಯೋಜನಗಳು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.