ನವದೆಹಲಿ: ಮಗುವೊಂದು ಕಾಪರ್ ಟಿ ಅನ್ನು ಕೈನಲ್ಲಿ ಹಿಡಿದುಕೊಂಡು ಜನಿಸಿರುವ ಘಟನೆ ಬ್ರೆಜಿಲ್‌ನ ನೆರೋಪೊಲಿಸ್‌ನಲ್ಲಿರುವ ಸಗ್ರಾಡೊ ಕೊರಾಕಾವೊ ಡಿ ಜೀಸಸ್ ಆಸ್ಪತ್ರೆಯಲ್ಲಿ ನಡೆದಿದೆ.
ಕ್ವಿಡಿ ಎನ್ನುವ ಮಹಿಳೆ ಕಾಪರ್ ಟೀ ಅನ್ನು ಅಳವಡಿಸಿಕೊಂಡಿದ್ದರು, ಆದರೆ ಅದು ವಿಫಲವಾಗಿ ಗರ್ಭವತಿಯಾಗಿದ್ದಾರ. ಈ ನಡುವೆ ಕಾಪರ್ ಟೀ ಇನ್ನೂ ತಾಯಿಯ ಗರ್ಭದಲ್ಲೇ ಇದ್ದಿದ್ದರಿಂದ ಜೊತೆಗೆ ಮಗುವೂ ಇದ್ದಿದ್ದರಿಮದ ಅದನ್ನು ತೆಗೆದುಹಾಕುವುದು ತುಂಬಾ ಅಪಾಯಕಾರಿಯಾದ ಹಿನ್ನಲೆಯಲ್ಲಿ ಆಕೆಯ ಪ್ರಸವದ ತನಕ ಕಾಪರ್ ಟೀಯನ್ನು ತೆಗೆಯಲು ವೈದ್ಯರು ಮುಂದಾಗಲಿಲ್ಲ. ಈ ನಡುವೆ ಗರ್ಭಾವಸ್ಥೆಯಲ್ಲಿ, ಕ್ವಿಡಿ ರಕ್ತಸ್ರಾವ ಮತ್ತು ಬೇರ್ಪಡುವಿಕೆ ಸೇರಿದಂತೆ ಕೆಲವು ತೊಂದರೆಗಳನ್ನು ಅನುಭವಿಸಿದರು. ಅದೃಷ್ಟವಶಾತ್, ಅವರ ಗಂಡು ಮಗು ಬ್ರೆಜಿಲ್‌ನ ನೆರೋಪೊಲಿಸ್‌ನಲ್ಲಿರುವ ಸಗ್ರಾಡೊ ಕೊರಾಕಾವೊ ಡಿ ಜೀಸಸ್ ಆಸ್ಪತ್ರೆಯಲ್ಲಿ ಆರೋಗ್ಯಕರವಾಗಿ ಜನಿಸಿದೆ.
IUD ಎನ್ನುವುದು ಗರ್ಭಾಶಯದೊಳಗೆ (ಗರ್ಭಾಶಯ) ಸೇರಿಸಲಾದ ಸಣ್ಣ T-ಆಕಾರದ ಸಾಧನವನ್ನು ಒಳಗೊಂಡಿರುವ ಒಂದು ರೀತಿಯ ಗರ್ಭನಿರೋಧಕವಾಗಿದ್ದು ಅದು ತಕ್ಷಣವೇ ಕಾರ್ಯನಿರ್ವಹಿಸುತ್ತದೆ. ಇದು “ಗರ್ಭಾಶಯಕ್ಕೆ ತಾಮ್ರವನ್ನು ಬಿಡುಗಡೆ ಮಾಡುವ ಮೂಲಕ” ಗರ್ಭಧಾರಣೆಯನ್ನು ತಡೆಯುತ್ತದೆ ಎಂದು NHS ಹೇಳುತ್ತದೆ ಮತ್ತು ಸಾಮಾನ್ಯವಾಗಿ ಐದು ಅಥವಾ 10 ವರ್ಷಗಳವರೆಗೆ ಇರುತ್ತದೆ.






