ನವದೆಹಲಿ : ಕಳೆದ ವರ್ಷ ಏಕದಿನ ವಿಶ್ವಕಪ್ನಲ್ಲಿ ಮಿಂಚಿನ ಆಟ ಪ್ರದರ್ಶಿಸಿದ ನಂತರ ವಿರಾಟ್ ಕೊಹ್ಲಿ ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹೌದು, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) 2023ನೇ ಸಾಲಿನ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ. ವಿಶ್ವ ಕ್ರಿಕೆಟ್ ಆಡಳಿತ ಮಂಡಳಿ ಗುರುವಾರ (ಜನವರಿ 25) ಇದನ್ನ ಘೋಷಿಸಿದೆ.
Player of the tournament at the ICC Men’s @cricketworldcup 2023 😎
The extraordinary India batter has been awarded the ICC Men’s ODI Cricketer of the Year 💥 https://t.co/Ea4KJZMImE
— ICC (@ICC) January 25, 2024
2023ರ ಏಕದಿನ ವಿಶ್ವಕಪ್ನಲ್ಲಿ ಅತಿ ಹೆಚ್ಚು ಏಕದಿನ ಶತಕಗಳನ್ನು ಗಳಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನ ಕೊಹ್ಲಿ ಮುರಿದರು, ಈ ಪಂದ್ಯಾವಳಿಯಲ್ಲಿ ಅವರು 95.62 ಸರಾಸರಿಯಲ್ಲಿ 765 ರನ್ ಗಳಿಸಿ ಪಂದ್ಯಾವಳಿಯ ಆಟಗಾರನಾಗಿ ಹೊರಹೊಮ್ಮಿದರು.
ಅಂದ್ಹಾಗೆ, ವಿರಾಟ್ ಕೊಹ್ಲಿ ನಾಲ್ಕನೇ ಬಾರಿಗೆ ಈ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ವಿರಾಟ್ ಕೊಹ್ಲಿ 2012, 2017 ಮತ್ತು 2018ರಲ್ಲಿ ಐಸಿಸಿ ವರ್ಷದ ಏಕದಿನ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾಗಿದ್ದರು.
BIG UPDATE: ರಾಯಚೂರಲ್ಲಿ ಏಕಾಏಕಿ ಶಾಲಾ ಕೊಠಡಿಯ ಮೇಲ್ಛಾವಣಿ ಕುಸಿತ: ವಿದ್ಯಾರ್ಥಿನಿ ಕಾಲಿನ ಬೆರಳು ಕಟ್
ರಾಜತಾಂತ್ರಿಕ ಉದ್ವಿಗ್ನತೆ ನಡುವೆ ಭಾರತದ ವಿರುದ್ಧ ‘ಕೆನಡಾ’ ಮತ್ತೊಂದು ಗಂಭೀರ ಆರೋಪ