ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಚೀನಾದ ಯುವತಿಯೊಬ್ಬಳು ಭಾರತೀಯ ಆಹಾರವನ್ನ ಅಣಕಿಸಿದಾಗ ಭಾರತೀಯ ಯೂಟ್ಯೂಬರ್ ತುಂಬಾ ಶಾಂತವಾಗಿ ಪ್ರತಿಕ್ರಿಯಿಸಿದ್ದಾರೆ. ವೈರಲ್ ವೀಡಿಯೊವೊಂದರಲ್ಲಿ, ಭಾರತದ ಜನಪ್ರಿಯ ಟ್ರಾವೆಲ್ ವ್ಲಾಗರ್ ‘ಪ್ಯಾಸೆಂಜರ್ ಪರಮವೀರ್’ ಚೀನಾದ ಯುವತಿಯೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಆಗ ಚೀನಾದ ಮಹಿಳೆ ತನ್ನ ಫೋನ್’ನಲ್ಲಿ ಕೆಲವು ಟಿಕ್‌ಟಾಕ್ ವೀಡಿಯೊಗಳನ್ನ ತೋರಿಸಿದಳು. ಇದಲ್ಲದೆ, ಭಾರತೀಯ ಆಹಾರವು ಕೊಳಕು ಎಂದು ಆಕೆ ಪ್ರತಿಕ್ರಿಯಿಸಿದ್ದಾಳೆ. ಯುವತಿ ತೋರಿಸಿದ ವೀಡಿಯೋ ತುಣುಕುಗಳಲ್ಲಿ ಮಾರಾಟಗಾರನೊಬ್ಬ ತನ್ನ ಕಂಕುಳನ್ನ ಒರೆಸಿಕೊಂಡು ಮತ್ತೆ ಆ ಕೈಯಿಂದ ಹಿಟ್ಟನ್ನು ಹಿಡಿಯುತ್ತಿರುವುದನ್ನ ತೋರಿಸಿದರೆ, ಇನ್ನೊಬ್ಬ ಅಡುಗೆಯವರು ಅಡುಗೆ ಮಾಡುವಾಗ ಬಾಣಲೆಯಲ್ಲಿ ಕೈ ತೊಳೆಯುತ್ತಿರುವುದನ್ನ ನೋಡಬಹುದು.
ಆದರೆ ವೀಡಿಯೊ ತುಣುಕುಗಳನ್ನು ನೋಡಿದ ನಂತರ, ವ್ಲಾಗರ್ ಪರಮವೀರ್ ನಗಲು ಪ್ರಾರಂಭಿಸಿದರು. ಇದಲ್ಲದೆ, ಆಹಾರ ಸಂಸ್ಕೃತಿಯಲ್ಲಿ ಈ ರೀತಿಯ ಭಾರತೀಯ ಬೀದಿ ಆಹಾರವು ಕೇವಲ ಒಂದು ಅಪವಾದವಾಗಿದೆ ಎಂದು ಅವರು ಯುವತಿಗೆ ಹೇಳಿದರು. ನೀವು ಅಂತಹ ವೀಡಿಯೊಗಳನ್ನ ಎಲ್ಲಿಂದ ಪಡೆಯುತ್ತೀರಿ ಎಂದು ನನಗೆ ತಿಳಿದಿಲ್ಲ. ಆದರೆ ಶುಚಿಯಾದ ಜಾಗಕ್ಕೆ ಹೋದರೆ ಭಾರತೀಯ ಆಹಾರದ ರುಚಿಗೆ ಮಾರುಹೋಗಿ ಚೈನೀಸ್ ಖಾದ್ಯವನ್ನೇ ಮರೆತುಬಿಡುತ್ತೀರಿ ಎಂದು ಯುವತಿಗೆ ಹೇಳಿದ್ದಾರೆ.
ಇದಾದ ನಂತರ ಪರವೀರ್ ಚೈನೀಸ್ ಹುಡುಗಿಯನ್ನ ಉತ್ತಮವಾದ ಭಾರತೀಯ ರೆಸ್ಟೋರೆಂಟ್’ಗೆ ಕರೆದೊಯ್ದಿದ್ದು, ಅಲ್ಲಿ ಅವಳು ದಾಲ್ ಮಖಾನಿ, ಶಾಹಿ ಪನೀರ್ ಮತ್ತು ನಾನ್ ಆನಂದಿಸಿದಳು. ಈ ವೀಡಿಯೋದಲ್ಲಿ ಭಾರತೀಯ ಆಹಾರವನ್ನ ಸೇವಿಸಿದ ನಂತ್ರ ಆಕೆಯ ಅನುಮಾನಗಳು ಕಳೆದು ಹೋಗಿದ್ದು, ಭಾರತೀಯ ಆಹಾರ ನಿಜವಾಗಿಯೂ ರುಚಿಕರವಾಗಿದೆ ಎಂದು ಒಪ್ಪಿಕೊಂಡಿದ್ದಾಳೆ.
ವಿಡಿಯೋ ಇಲ್ಲಿದೆ ನೋಡಿ.!
A Chinese woman shows an Indian vlogger dirty street food videos to make him feel embarrassed and feel disgusted for himself.
Instead, the kind vlogger takes her to a good Indian restaurant, and treats her with amazing Indian cuisine in China. pic.twitter.com/mYRNmVDjxV
— FedAmshaa (@FedAmsha) October 19, 2024
@FedAmsha ಹ್ಯಾಂಡಲ್‌ನೊಂದಿಗೆ ಈ 2 ನಿಮಿಷ 21 ಸೆಕೆಂಡುಗಳ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ, ಬಳಕೆದಾರರು ಶೀರ್ಷಿಕೆಯಲ್ಲಿ, ಚೀನಾದ ಯುವತಿ ಭಾರತೀಯ ಯೂಟ್ಯೂಬರ್’ಗೆ ಕೊಳಕು ಭಾರತೀಯ ಬೀದಿ ಆಹಾರದ ವೀಡಿಯೊವನ್ನ ತೋರಿಸಿದ್ದಾರೆ. ಆದ್ದರಿಂದ ಅವರು ಮುಜುಗರಕ್ಕೊಳಗಾದರು. ಬದಲಾಗಿ, ವ್ಲಾಗರ್ ಅವಳನ್ನ ಒಂದು ಉತ್ತಮವಾದ ಭಾರತೀಯ ರೆಸ್ಟೋರೆಂಟ್’ಗೆ ಕರೆದೊಯ್ದರು ಮತ್ತು ಚೀನಾ ಯುವತಿಗೆ ಅದ್ಭುತ ಭಾರತೀಯ ಪಾಕಪದ್ಧತಿಯನ್ನ ರುಚಿಸುವಂತೆ ಮಾಡಿದರು.
ಕೆಲವು ವೀಡಿಯೊಗಳನ್ನು ಆಧರಿಸಿ ಕೆಲವರು ಭಾರತೀಯ ಪಾಕಪದ್ಧತಿಯನ್ನ ನಿರ್ಣಯಿಸುವುದು ದುರದೃಷ್ಟಕರ ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಪರವೀರ್ ಭಾಯ್ ಅವರಿಗೆ ಮಿರರ್ ತೋರಿಸಿದ್ದಕ್ಕೆ ಖುಷಿಯಾಗಿದ್ದಾರೆ. ಬಳಕೆದಾರರು ಇಲಿ, ಜಿರಳೆ ತಿನ್ನುವವರಿಗೆ ಭಾರತೀಯ ರುಚಿಯ ರುಚಿ ಗೊತ್ತಿಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
BREAKING: ಜೆಇಇ ಮೇನ್ 2025ರ ಪರೀಕ್ಷೆಗೆ ದಿನಾಂಕ ಪ್ರಕಟ: ಇಲ್ಲಿದೆ ಡೀಟೆಲ್ಸ್ | JEE Main 2025 exam
SHOCKING : ‘ಸ್ಟ್ರೀಟ್ ಫುಡ್’ ಸೇವನೆಗೂ ಮುನ್ನ ಇರಲಿ ಎಚ್ಚರ : ‘ಮೊಮೋಸ್’ ತಿಂದು ಓರ್ವ ಮಹಿಳೆ ಸಾವು, 50 ಜನ ಅಸ್ವಸ್ಥ!
BIGG NEWS: ಎಲ್ಲಾ ‘ನೇಮಕಾತಿ’ಗಳನ್ನು ಕನಿಷ್ಠ ಮೂರು ತಿಂಗಳವರೆಗೆ ಮುಂದೂಡಲು ‘ಕರ್ನಾಟಕ ಸರ್ಕಾರ’ ನಿರ್ಧಾರ!