ಕಾನ್ಪುರ : ಕಾನ್ಪುರದ ಬೆಕನ್ಗಂಜ್ ಮಾರುಕಟ್ಟೆಯಲ್ಲಿ ಮಹಿಳೆಯೊಬ್ಬಳು ತನಗೆ ಕಿರುಕುಳ ನೀಡಿದ ವ್ಯಕ್ತಿಗೆ ಥಳಿಸಿ ಬುದ್ಧಿ ಕಲಿಸಿರುವ ದೃಶ್ಯವೊಂದು ಬೆಳಕಿಗೆ ಬಂದಿದೆ. ಆರೋಪಿಯನ್ನು ಬಜಾರಿಯಾ ಪೊಲೀಸ್ ಠಾಣೆ ಪ್ರದೇಶದ ಅದ್ನಾನ್ ಎಂದು ಗುರುತಿಸಲಾಗಿದ್ದು, ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸಲು ಪ್ರಯತ್ನಿಸಿದ್ದಾನೆ ಎಂದು ವರದಿಯಾಗಿದೆ.
ವೈರಲ್ ಆಗಿರುವ ವೀಡಿಯೊದಲ್ಲಿ ಬುರ್ಖಾ ಧರಿಸಿದ ಮಹಿಳೆ, 48 ಸೆಕೆಂಡುಗಳಲ್ಲಿ ವ್ಯಕ್ತಿಯ ಕಾಲರ್ ಹಿಡಿದು 14 ಬಾರಿ ಕಪಾಳಮೋಕ್ಷ ಮಾಡಿದ್ದಾಳೆ. ಪ್ರೇಕ್ಷಕರು ಮಹಿಳೆಯನ್ನ ಬೆಂಬಲಿಸಿದರು, ಆರೋಪಿಯ ನಡವಳಿಕೆಯನ್ನ ಖಂಡಿಸಿದರು. ಈ ವ್ಯಕ್ತಿ ಮಾರುಕಟ್ಟೆಯಲ್ಲಿ ಮಹಿಳೆಯರಿಗೆ ನಿಯಮಿತವಾಗಿ ಕಿರುಕುಳ ನೀಡುತ್ತಿದ್ದ ಎಂದು ಸ್ಥಳೀಯರು ಹೇಳಿದ್ದಾರೆ. ಕಾನ್ಪುರ ಪೊಲೀಸರು ಫೆಬ್ರವರಿ 25ರ ಘಟನೆಯನ್ನ ದೃಢಪಡಿಸಿದರು ಮತ್ತು ಅದ್ನಾನ್’ನ್ನ ವಶಕ್ಕೆ ತೆಗೆದುಕೊಂಡರು.
वायरल वीडियो कानपुर का बताया जा रहा है। जहाँ छेड़छाड़ से परेशान होकर एक महिला ने एक युवक कि सरेआम धुनाई कर दी । pic.twitter.com/kCR3KwbSbj
— 𝕏 (@ItxHuzaifa61) February 26, 2025