ಕೆಎನ್‍್ಎನ್‍್ಡಿಜಿಟಲ್ ಡೆಸ್ಕ್ : ಭಾರತೀಯ ರೈಲ್ವೆಯು ವಿಂಟೇಜ್ ’13 ಕಮಾನು ಸೇತುವೆ’ಯಿಂದ ರೈಲು ಹಾದುಹೋಗುವುದನ್ನ ತೋರಿಸುವ ಮೋಡಿ ಮಾಡುವ ಡ್ರೋನ್ ವೀಡಿಯೊವನ್ನ ಹಂಚಿಕೊಂಡಿದೆ. 17 ಸೆಕೆಂಡುಗಳ ವೀಡಿಯೊ ಕ್ಲಿಪ್ ದಕ್ಷಿಣ ರೈಲ್ವೆಯ ಸೌಂದರ್ಯವನ್ನು ತೋರಿಸುತ್ತದೆ.

“ಭಾವಪರವಶ! ದಕ್ಷಿಣ ರೈಲ್ವೆಯ ಸೆಂಗೊಟ್ಟೈ-ಪುನಲೂರ್ ವಿಭಾಗದ ವಿಂಟೇಜ್ ’13 ಕಮಾನು ಸೇತುವೆ’ (ಪಥಿಮೂನು ಕಣ್ಣಾರ ಪಾಲಂ) ಮೇಲೆ ಚಲಿಸುವ ರೈಲಿನ ಆಕರ್ಷಕ ನೋಟ”, ಎಂದು ರೈಲ್ವೆ ಸಚಿವಾಲಯ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್’ನಿಂದ ಭಾನುವಾರ ಟ್ವೀಟ್ ಮಾಡಿದೆ.

ಕೆಲವೇ ಗಂಟೆಗಳಲ್ಲಿ, ಈ ತುಣುಕು 13 ಕೆ ವೀಕ್ಷಣೆಗಳನ್ನ ಗಳಿಸಿದ್ದು, ಈ ಕ್ಲಿಪ್ 1000ಕ್ಕೂ ಹೆಚ್ಚು ಲೈಕ್’ಗಳನ್ನ ಸಹ ಹೊಂದಿದೆ.

ಅಂದ್ಹಾಗೆ, ಭಾರತದ ಕೊಲ್ಲಂ-ಸೆಂಗೊಟ್ಟೈ ರೈಲು ಮಾರ್ಗದಲ್ಲಿರುವ ಪಥಿಮೂನ್ನು ಕನ್ನಾರಾ ಸೇತುವೆ (ಇದನ್ನು “13 ಕಮಾನು ಸೇತುವೆ” ಎಂದೂ ಕರೆಯಲಾಗುತ್ತದೆ) ಒಂದು ಐತಿಹಾಸಿಕ ಬ್ರಿಟಿಷ್ ಯುಗದ ರಚನೆಯಾಗಿದೆ. ಈ ಸೇತುವೆಯು ಕೇರಳದ ಕೊಲ್ಲಂ ಜಿಲ್ಲೆಯ ಕಜುತುರುಟ್ಟಿಯಲ್ಲಿದೆ. ಇದು ಭಾರತದ ಅತ್ಯಂತ ಹಳೆಯ ಪರ್ವತ ರೈಲು ಮಾರ್ಗಗಳಲ್ಲಿ ಒಂದರ ಒಂದು ಭಾಗವಾಗಿದೆ.

Share.
Exit mobile version