ಬೆಂಗಳೂರು : 2024 ನೇ ಸಾಲಿನ ” ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ” ಪ್ರಶಸ್ತಿಗೆ ಅರ್ಹರು ನಿಗದಿತ ಅವಧಿಯಲ್ಲಿ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.

ಶಾಲಾ ಶಿಕ್ಷಣ ಕ್ಷೇತ್ರಕ್ಕೆ ಮತ್ತು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ದೇಶದಾದ್ಯಂತ ಶಿಕ್ಷಕರು ನೀಡಿರುವ ಅನನ್ಯ ಸೇವೆಯನ್ನು ಸ್ಮರಿಸಿ. ಅಂತಹ ಅತ್ಯುತ್ತಮ ಶಿಕ್ಷಕರನ್ನು ಗೌರವಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ವತಿಯಿಂದ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರತಿ ವರ್ಷ ಪ್ರದಾನ ಮಾಡಲಾಗುತ್ತಿದೆ. ಅದರಂತೆ, 2024 ನೇ ಸಾಲಿನ ” ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ” ಪ್ರಶಸ್ತಿಗೆ ಅರ್ಹ ಶಿಕ್ಷಕರು / ಉಪನ್ಯಾಸಕರು / ಮುಖ್ಯ មិត្តថ / (https://nationalawardstoteachers.education.gov.in) ಮೂಲಕ ಅರ್ಜಿ ಸಲ್ಲಿಸಲು ಭಾರತ ಸರ್ಕಾರದ ಶಿಕ್ಷಣ ಮಂತ್ರಾಲಯದ ವ್ಯಾಪ್ತಿಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಉಲ್ಲೇಖಿತ ಪತ್ರ & ಅದರೊಂದಿಗಿನ ಪೂರಕ ದಾಖಲೆಗಳ ಅನುಸಾರ, ದಿನಾಂಕ: 27-06-2024 ರಿಂದ 15-07-2024 ರವರೆಗೆ ಅವಕಾಶ ಕಲ್ಪಿಸಿರುತ್ತದೆ.

ಉಲ್ಲೇಖಿತ ಪತ್ರ & ಅದರೊಂದಿಗಿನ ಪೂರಕ ದಾಖಲೆಗಳನ್ನು ಯಥಾವತ್ತಾಗಿ ಈ ಪತ್ರದೊಂದಿಗೆ ಲಗತ್ತಿಸಿದೆ. ಅದರಂತೆ, ಸದರಿ ವಿಷಯದ ಕುರಿತು ವ್ಯಾಪಕ ಪ್ರಚಾರದ ಮೂಲಕ ರಾಜ್ಯದ ಕೆಳಕಂಡ ಅರ್ಜಿದಾರರ ಗಮನಕ್ಕೆ ತಂದು ರಾಜ್ಯದಿಂದ ಅರ್ಹರು ಹೆಚ್ಚಿನ ಸಂಖ್ಯೆಯಲ್ಲಿ (ಪ್ರತಿ ಜಿಲ್ಲೆಯಿಂದ ಕನಿಷ್ಠ 50-60 ಮಂದಿ) ನಿಗದಿತ ಅವಧಿಯೊಳಗೆ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸುವುದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೆಳಕಂಡ ಅಂಶಗಳಂತೆ ಕ್ರಮವಹಿಸುವಂತೆ ಅರ್ಜಿದಾರರಿಗೆ, ಕೆಳಕಂಡ ಶಾಲೆ ಮತ್ತು ಕಾಲೇಜುಗಳ ಮುಖ್ಯಸ್ಥರಿಗೆ ಹಾಗೂ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ತಿಳಿಸಲಾಗಿದೆ ಮತ್ತು ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ಇವರನ್ನು ಕೋರಲಾಗಿದೆ.

Share.
Exit mobile version