ಬೆಂಗಳೂರು: ಇತ್ತೀಚಿಗೆ ಕನ್ನಡದಲ್ಲಿ ಕೆಲವು ಮಂದಿ ಹಾಸ್ಯವನ್ನು ಮಾಡುವ ನೆಪದಲ್ಲಿ ಡಬ್ಬಲ್ ಮೀನಿಂಗ್ ನಲ್ಲಿ ಅಭಿಯ ಮಾಡುತ್ತಿರುವುದು ಹೆಚ್ಚುತ್ತಿದೆ.
ಈ ನಡುವೆ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಸಂಜು ಬಸಯ್ಯ ಎನ್ನುವ ವ್ಯಕ್ತಿ ಮತ್ತು ಆತನ ಪತ್ನಿ ಪಲ್ಲವಿ ಎನ್ನುವರು ಕೆಲ ದಿನಗಳ ಹಿಂದೆ ಕಾರ್ಯಕ್ರಮದಲ್ಲಿ ಮಾಡಿದ್ದ ನಡವಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.
ಹಾಸ್ಯದ ನೆಪದಲ್ಲಿ ಡಾ.ರಾಜ್ ಕುಮಾರ್ ಮತ್ತು ಕಲ್ಪನ ಅವರ ಅಭಿನಯದ ಪೂಜಿಸಲೆಂದೆ ಹೂಗಳ ತಂದೆ ಹಾಡನ್ನು ಸಂಜು ಬಸಯ್ಯನ ಪತ್ನಿ ಪಲ್ಲವಿ ಹಾಗೂ ಅತನ ತಂಡವು ತೀರ ಅಸಭ್ಯವಾಗಿ ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಜು ಬಸಯ್ಯನ ಪತ್ನಿ ಪಲ್ಲವಿ ಹಾಗೂ ಅತನ ತಂಡದ ವಿರುದ್ದ ಕಿಡಿಕಾರುತ್ತಿದ್ದಾರೆ.
ಉತ್ತರ ಕರ್ನಾಟಕದ ಮಾನ ಮಾರ್ಯದೆಯನ್ನು ಹಾಳು ಮಾಡುತ್ತಿದ್ದು, ದುಡ್ಡಿಗೆ ಇವರೆಲ್ಲ ಕನ್ನಡವನ್ನು ಹಾಳು ಮಾಡುತ್ತಿದ್ದಾರೆ. ಹಾಸ್ಯಕ್ಕೆ ತನ್ನದೇ ಆದ ಸ್ಥಾನವಿದ್ದು, ಅದನ್ನು ಇವರು ಹಾಳು ಮಾಡುತ್ತಿದ್ದಾರೆ ಎನ್ನುವ ಮಾತುಗಳನ್ನು ಜನತೆ ಸಂಜು ಬಸಯ್ಯನ ಪತ್ನಿ ಪಲ್ಲವಿ ಹಾಗೂ ಅತನ ತಂಡ ವಿರುದ್ದ ಕಿಡಿಕಾರುತ್ತಿದ್ದಾರೆ.ಒಟ್ಟಿನಲ್ಲಿ ಡಬ್ಬಲ್ ಮೀನಿಂಗ್ ನಿಂದ ಹಣ ಮಾಡಲು ಹೊರಟಿರುವವರಿಗೆ ದೇವರು ಬುದ್ದಿ ಕೊಡಲಿ ಅಂಥ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದಲ್ಲದೇ ಈ ದಂಪತಿಗಳ ವಿರುದ್ದ ಮೊದಲಿಂದಲೂ ಕೂಡ ಈ ರೀತಿ ಡಬ್ಬಲ್ ಮೀನಿಂಗ್ ಪದಗಳ ಬಳಕೆಯಿಂದ ಹಾಸ್ಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಆರೋಪ ಕೇಳಿ ಬಂದಿದ್ದು, ಇವರ ವಿರುದ್ದ ಸೂಕ್ತಕ್ರಮವನ್ನು ಕೈಗೊಳ್ಳುವುದಕ್ಕೆ ಆಗ್ರಹ ಕೇಳಿ ಬಂದಿದೆ. ಇಂತಹವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವವರ ಸಂಸ್ಕಾರವನ್ನು ಕಾಣಬಹುದಾಗಿದೆ ಅಂಥ ಹೇಳುತ್ತಿದ್ದಾರೆ.
ಉಚಿತ ಸುದ್ದಿ ಪಡೆದುಕೊಳ್ಳುವುದಕ್ಕೆ ನಮ್ಮ ವಾಟ್ಸಪ್ ಗುಂಪು ಸೇರಿಕೊಳ್ಳಿ
https://chat.whatsapp.com/LE44dr3kKYG7AHE6b6ksTh