ಕೆಎನ್ಎನ್‍ಡಿಜಿಟಲ್ ಡೆಸ್ಕ್ : ತಾಯಿಯ ಪ್ರೀತಿಗಿಂತ ಮಿಗಿಲಾದ ಪ್ರೀತಿ ಇನ್ನೊಂದಿಲ್ಲ. ಒಬ್ಬ ತಾಯಿ ಅವಳನ್ನ ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿರುತ್ತಾಳೆ. ಹಾಗಾಗಿ ಅಮ್ಮ ಅನ್ನೋ ಶಬ್ದವೇ ಅಮೃತಕ್ಕೆ ಸಮಾನ. ಸಮಯ ಬಂದರೇ ಒಬ್ಬ ತಾಯಿ ತನ್ನ ಮಕ್ಕಳಿಗಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡುತ್ತಾಳೆ. ಆದ್ರೆ, ಇಂತಹ ತಾಯಿಯನ್ನ ತನ್ನ ಮಗಳೇ ಅತ್ಯಂತ ಕ್ರೂರವಾಗಿ ಹಿಂಸಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ತಾಯಿಯನ್ನು ಅತ್ಯಂತ ಕೀಳಾಗಿ ನಡೆಸಿಕೊಂಡಿದ್ದಾಳೆ. ಆಕೆಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಕಾಲುಗಳಿಂದ ಒದಿಯುತ್ತಾಳೆ. ಇನ್ನು ಬಾಯಿಯಿಂದ ಕಚ್ಚುತ್ತಿದ್ದು,ಆ ತಾಯಿ “ಬೇಡ, ಬೇಡ” ಎಂದು ಅಂಗಲಾಚುತ್ತಿದ್ದರು ಕ್ರೂರಿ ಮಗಳ ಹೃದಯ ಮಾತ್ರ ಕರಗಿಲ್ಲ. ಈ ವಿಡಿಯೋ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋ ನೋಡಿ.!
This is absolutely horrifying! A daughter torturing her own mother @cmohry @police_haryana @DGPHaryana @PMOIndia, urgent action is needed! Identify and punish the culprit. #JusticeForMother"pic.twitter.com/TGefDrIcdU
— Goonj – A voice of change (@avoiceofchange_) February 27, 2025
BREAKING : ಪಾಕಿಸ್ತಾನದ ಮಸೀದಿಯೊಂದರಲ್ಲಿ ಬಾಂಬ್ ಸ್ಫೋಟ ; ಐವರು ದುರ್ಮರಣ, 10 ಮಂದಿಗೆ ಗಾಯ |Bomb Blast
BREAKING: ಪಾಕಿಸ್ತಾನದಲ್ಲಿ ಪ್ರಬಲ ಬಾಂಬ್ ಸ್ಪೋಟ: ಐವರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ