ಕೋಟಾ : ರಾಜಸ್ಥಾನದ ಕೋಟಾದ ಪ್ರತಾಪ್ ನಗರದಲ್ಲಿ ನಡೆದ ಒಂದು ವಿಚಿತ್ರ ಘಟನೆಯೊಂದು ನಡೆದಿದೆ. ಕಳ್ಳನೊಬ್ಬ ಮನೆಯೊಳಗೆ ದರೋಡೆಗೆ ಬಂದು ಖದೀಮನೊಬ್ಬ ಅಡುಗೆಮನೆಯ ಎಕ್ಸಾಸ್ಟ್ ಫ್ಯಾನ್ ಶಾಫ್ಟ್ ಒಳಗೆ ಸಿಲುಕಿಕೊಂಡಿದ್ದಾನೆ.
ಗೋಡೆಯಿಂದ ಅಸಹಾಯಕನಾಗಿ ನೇತಾಡುತ್ತಿರುವ ವ್ಯಕ್ತಿಯನ್ನ ತೋರಿಸುವ ಘಟನೆಯ ವೀಡಿಯೊ ವೈರಲ್ ಆಗಿದ್ದು, ಸಾವಿರಾರು ವೀಕ್ಷಣೆಗಳನ್ನು ಸಂಗ್ರಹಿಸಿದೆ ಮತ್ತು ಆನ್‌ಲೈನ್‌ನಲ್ಲಿ “ಇನ್ಸ್ಟೆಂಟ್ ಕರ್ಮ” ಮೀಮ್‌ಗಳ ಅಲೆಯನ್ನು ಹುಟ್ಟುಹಾಕಿದೆ.
ಶನಿವಾರ ತಡರಾತ್ರಿ ಸುಭಾಷ್ ಕುಮಾರ್ ರಾವತ್ ಅವರ ನಿವಾಸದಲ್ಲಿ ಈ ಘಟನೆ ನಡೆದಿದೆ. ರಾವತ್ ಕುಟುಂಬವು ಖಾತು ಶ್ಯಾಮ್ ದೇವಸ್ಥಾನಕ್ಕೆ ಧಾರ್ಮಿಕ ತೀರ್ಥಯಾತ್ರೆಗೆ ಹೋಗಿದ್ದರು. ಈ ಅವಕಾಶವನ್ನು ಪಡೆದುಕೊಂಡ ಇಬ್ಬರು ವ್ಯಕ್ತಿಗಳು ಬಿಳಿ ಕಾರಿನಲ್ಲಿ ಸ್ಥಳಕ್ಕೆ ಬಂದು, ರಾತ್ರಿ ಗಸ್ತು ತಿರುಗುವವರಿಂದ ಅನುಮಾನ ಬರದಂತೆ ವಿಂಡ್ ಷೀಲ್ಡ್ ಮೇಲೆ “ಪೊಲೀಸ್” ಸ್ಟಿಕ್ಕರ್ ಅಂಟಿಸಿದರು.
ಮುಖ್ಯ ದ್ವಾರಗಳನ್ನ ದಾಟಿ, ಶಂಕಿತರಲ್ಲಿ ಒಬ್ಬರಾದ 25 ವರ್ಷದ ಪವನ್ ವೈಷ್ಣವ್, ಅಡುಗೆಮನೆಯ ಎಕ್ಸಾಸ್ಟ್ ಫ್ಯಾನ್’ಗೆ ವೃತ್ತಾಕಾರದ ಕಿಂಡಿತನ್ನ ಪ್ರವೇಶಕ್ಕೆ ಉತ್ತಮ ಸ್ಥಳವೆಂದು ನಿರ್ಧರಿಸಿದರು. ಅದ್ರಂತೆ, ಅದರೊಳಗೆ ಅರ್ಧ ಹೊಕ್ಕಿದ್ದು, ಒಳ ಮತ್ತು ಹೊರ ಹೋಗಲು ಸಾಧ್ಯವಾಗದೇ ಪರದಾಡಿದ್ದಾನೆ. ಮರುದಿನ ಕುಟುಂಬ ಮನೆಗೆ ವಾಪಾಸ್ ಬಂದಿದ್ದು, ಕಳ್ಳ ನೇತಾಡುತ್ತಿದ್ದನ್ನ ನೋಡಿ ಆಘಾತಗೊಂಡಿದ್ದಾರೆ. ನಂತ್ರ ಅವರೇ ಆತನನ್ನ ಹೊರ ತೆಗೆದಿದ್ದು, ನಂತ್ರ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಧ್ಯ ಈ ಘಟನೆಯ ವಿಡಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
🚨 Kota, Pratap Nagar: Two thieves broke into a house for theft.
When the family returned around 1 AM, one fled, while the other got stuck in the kitchen exhaust fan opening 😂 pic.twitter.com/Vc4yO8228w
— Megh Updates 🚨™ (@MeghUpdates) January 6, 2026
BREAKING: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನಿಗೆ ಚಾಕು ಇರಿತ
‘ಪ್ರಚೋದನಕಾರಿ, ಪ್ರಜಾಪ್ರಭುತ್ವದಲ್ಲಿ ಇದು ತರವಲ್ಲ” : ಉಮರ್ ಖಾಲಿದ್ ಬೆಂಬಲಿಸುವ ಘೋಷಣೆಗಳ ಕುರಿತು ‘JNU’ ಸ್ಪಷ್ಟನೆ
ಪುರುಷ, ಮಹಿಳಾ, ಅಂಧ ಮಹಿಳಾ ಕ್ರಿಕೆಟ್ ವಿಶ್ವಕಪ್ ವಿಜೇತರಿಗೆ ನೀತಾ ಎಂ. ಅಂಬಾನಿ ಅದ್ದೂರಿ ಸನ್ಮಾನ








