ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಮಾನವರು ಮತ್ತು ಪ್ರಾಣಿಗಳಿಗೆ ಅಂತ್ಯಕ್ರಿಯೆ ಮಾಡುವುದನ್ನ ನಾವು ನೋಡುತ್ತೇವೆ. ಗುಜರಾತ್ನ ಅಮ್ರೇಲಿ ಜಿಲ್ಲೆಯ ಕುಟುಂಬವೊಂದು ಕಾರಿನ ಅಂತಿಮ ವಿಧಿಗಳನ್ನ ನೆರವೇರಿಸಿ ಎಲ್ಲರ ಗಮನವನ್ನ ತಮ್ಮತ್ತ ತಿರುಗಿಸಿದೆ. ಅಂತ್ಯಕ್ರಿಯೆಯಲ್ಲಿ ಸುಮಾರು 1,500 ಜನರು ಭಾಗವಹಿಸಿದ್ದು, ಅಂತ್ಯಕ್ರಿಯೆಯ ವೀಡಿಯೊ ಸಧ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಪದರ್ ಶಿಂಗಾ ಗ್ರಾಮದಲ್ಲಿ ವಾಸಿಸುವ ಸಂಜಯ್ ಪೋಲಾರಾ ಅವರ ಕುಟುಂಬವು 12 ವರ್ಷಗಳ ಹಿಂದೆ ವ್ಯಾಗನ್ಆರ್ ಕಾರನ್ನು ಖರೀದಿಸಿತು. ತಮ್ಮ ಜೀವನಕ್ಕೆ ಆ ಕಾರಿನ ಹಿಂದೆಯೇ ಅದೃಷ್ಟವೂ ಬಂತು ಎಂದು ಅವರು ಭಾವಿಸಿದ್ದಾರೆ. ಹೀಗಾಗಿ ಕಾರಿನ ವೃದ್ಧಾಪ್ಯಕ್ಕೆ ಕೃತಜ್ಞತೆ ಸಲ್ಲಿಸಲು ಗುರುವಾರ ಅಂತಿಮ ವಿಧಿಗಳನ್ನು ನಡೆಸಲಾಯಿತು. ಇದಕ್ಕಾಗಿ 4 ಲಕ್ಷ ರೂ.ಗಳನ್ನ ಖರ್ಚು ಮಾಡಲಾಗಿದೆ.
ಭವಿಷ್ಯದ ಪೀಳಿಗೆಯು ಈ ವಿಷಯವನ್ನ ನೆನಪಿಟ್ಟುಕೊಳ್ಳಬೇಕು ಅನ್ನೋ ಕಾರಣಕ್ಕೆ ಕಾರನ್ನು ಸಮಾಧಿ ಮಾಡಲಾಗಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಕುಟುಂಬವು ತಮ್ಮ ಸ್ವಂತ ಜಮೀನಿನಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಅಂತಿಮ ವಿಧಿಗಳನ್ನ ನಡೆಸಿತು. ಕಾರನ್ನು ಹೂವುಗಳಿಂದ ಅಲಂಕರಿಸಲಾಗಿತ್ತು ಮತ್ತು ಅವರ ಮನೆಯಿಂದ ಜಮೀನಿಗೆ ಅಂತಿಮ ಪ್ರಯಾಣವನ್ನ ಆಯೋಜಿಸಲಾಯಿತು.
ಮಂತ್ರಗಳ ಪಠಣದ ನಡುವೆ ಕಾರನ್ನು 15 ಅಡಿ ಗುಂಡಿಯಲ್ಲಿ ಹೂಳಲಾಗಿದ್ದು, ಕಾರು ಅವರಿಗೆ ಸಂಪತ್ತನ್ನು ತಂದಿದೆ ಎಂದು ಕುಟುಂಬ ಸದಸ್ಯ ಸಂಜಯ್ ಪೊಲ್ಲಾರ ಮಾಧ್ಯಮಗಳಿಗೆ ತಿಳಿಸಿದರು. ಆ ಕಾರಿನಿಂದಾಗಿ ಅವರು ವ್ಯವಹಾರದಲ್ಲಿ ಯಶಸ್ಸನ್ನು ಪಡೆದಿದ್ದು, ಕಾರು ಹಳೆಯದಾಗಿದ್ದರಿಂದ, ಅದನ್ನು ಇತರರಿಗೆ ಮಾರಾಟ ಮಾಡುವ ಬದಲು ಸಮಾಧಿಯನ್ನು ನಿರ್ಮಿಸಲು ಮತ್ತು ಅದಕ್ಕೆ ಗೌರವ ಸಲ್ಲಿಸಲು ಬಯಸಿದ್ದರಿಂದ ಹೀಗೆ ಮಾಡಿದ್ದೇವೆ ಎಂದು ಅವರು ಹೇಳಿದರು.
In Amreli, Gujarat, A farmer's family organized an elaborate burial ceremony for their 12-year-old car, spending 4 lakh on the event held at their farm. A video has emerged online showing the car adorned with flowers. The farmer commented, "This vehicle brought us success in… pic.twitter.com/AEA8qi0KpF
— Ipul 😹 (@gujjuallrounder) November 8, 2024
ಜನಪ್ರಿಯ ‘ವಿದ್ಯಾರ್ಥಿ ವೀಸಾ ಯೋಜನೆ’ ಸ್ಥಗಿತಗೊಳಿಸಿದ ‘ಕೆನಡಾ’ : ಭಾರತೀಯರ ಮೇಲೆ ಪರಿಣಾಮ
ರಾಹುಲ್ ಗಾಂಧಿ ತೋರಿಸಿರುವ ‘ಸಂವಿಧಾನದ ಪ್ರತಿ’ ನಕಲಿ : ‘ಅಮಿತ್ ಶಾ’ ಆರೋಪ