ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್ಡಿಎ ಸಂಸದರು ಸೋಮವಾರ ಸಂಸತ್ತಿನ ಸಂಕೀರ್ಣ ಗ್ರಂಥಾಲಯದ ಬಾಲಯೋಗಿ ಸಭಾಂಗಣದಲ್ಲಿ “ದಿ ಸಬರಮತಿ ರಿಪೋರ್ಟ್” ಚಿತ್ರದ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ಚಿತ್ರ ವೀಕ್ಷಿಸುವಾಗ ಪ್ರಧಾನಿ ತುಂಬಾ ಭಾವುಕರಾದರು ಎಂದು ಮೂಲಗಳು ತಿಳಿಸಿವೆ.
Joined fellow NDA MPs at a screening of 'The Sabarmati Report.'
I commend the makers of the film for their effort. pic.twitter.com/uKGLpGFDMA
— Narendra Modi (@narendramodi) December 2, 2024
ಅಮಿತ್ ಶಾ, ರಾಜನಾಥ್ ಸಿಂಗ್, ಕಿರಣ್ ರಿಜಿಜು, ಜಿತನ್ ರಾಮ್ ಮಾಂಝಿ, ಅಶ್ವಿನಿ ವೈಷ್ಣವ್ ಸೇರಿದಂತೆ ಎನ್ಡಿಎ ಸಂಸದರು ಮತ್ತು ಕೇಂದ್ರ ಸಚಿವರು ಸ್ಕ್ರೀನಿಂಗ್ ಸಮಯದಲ್ಲಿ ಉಪಸ್ಥಿತರಿದ್ದರು.
ನಂತರ ಪಿಎಂ ಮೋದಿ ಅವರು ಚಿತ್ರದಲ್ಲಿನ ಅಭಿನಯಕ್ಕಾಗಿ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನ ಶ್ಲಾಘಿಸಿದರು. ‘ದಿ ಸಬರಮತಿ ರಿಪೋರ್ಟ್’ ಚಿತ್ರದ ಪ್ರದರ್ಶನದಲ್ಲಿ ಎನ್ಡಿಎ ಸಂಸದರೊಂದಿಗೆ ಸೇರಿಕೊಂಡಿದ್ದೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಚಿತ್ರದ ನಿರ್ಮಾಪಕರ ಪ್ರಯತ್ನವನ್ನ ನಾನು ಶ್ಲಾಘಿಸುತ್ತೇನೆ” ಎಂದಿದ್ದಾರೆ.
ಜೆಡಿಎಸ್ ಮುಖಂಡರಿಂದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಭೇಟಿ: ತಂಬಾಕು ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಮನವಿ
SHOCKING : ಸಮುದ್ರ ‘ಆಮೆ’ ತಿಂದು 3 ಜನ ಸಾವು, 32 ಮಂದಿ ಆಸ್ಪತ್ರೆಗೆ ದಾಖಲು