ಕಲಬುರಗಿ: ಆರೋಗ್ಯ, ವೃತ್ತಿ ಮತ್ತು ಸಮೃದ್ಧಿಗಾಗಿ ಆಶೀರ್ವಾದ ಪಡೆಯಲು ಭಕ್ತರು ಹೆಚ್ಚಾಗಿ ದೇವಾಲಯದ ಕಾಣಿಕೆಗೆ ಹುಂಡಿಗೆ ಹಲವು ಕಾಣಿಕೆಗಳನ್ನು ಹಾಕುವುದನ್ನು ನೋಡಿದ್ದೀವೆ, ಕೇಳಿದ್ದೇವೆ, ಹಾಗೇ ನಾವು ಕೂಡ ಮಾಡಿದ್ದೇವೆ. ಆದರೆ ಇಲ್ಲೋಬ್ಬರು ಕಾಣಿಕೆ ಹುಂಡಿಗೆ ಹಾಕಿರುವ ಮನವಿಯೊಂದು ವೈರಲ್ ಆಗಿದ್ದು, ಮಾನವನ ವರ್ತನೆಯನ್ನು ಪ್ರಶ್ನೆ ಮಾಡಿದೆ.
ಕಲಬುರಗಿ ತಾಲೂಕಿನ ಘಟರ್ಗಾ ಗ್ರಾಮದ ಭಾಗ್ಯವತಿ ದೇವಸ್ಥಾನದ ದೇಣಿಗೆ ಪೆಟ್ಟಿಗೆಯಲ್ಲಿ ನೋಟಿನ ಮೇಲೆ ಬರೆದಿರುವ ಆಘಾತಕಾರಿ ಸಂದೇಶ ಪತ್ತೆಯಾಗಿದೆ.
ದೇವಸ್ಥಾನದಲ್ಲಿ ಪತ್ತೆಯಾಗಿರುವ 20 ರೂ.ಗಳ ನೋಟಿನಲ್ಲಿ ‘ಓ ತಾಯಿ! ನನ್ನ ಅತ್ತೆ ಬೇಗನೆ ಸಾಯಬೇಕು’ ಹಾಕಿರುವುದು ಪತ್ತೆಯಾಗಿದೆ. ನೋಟಿನ ಜೊತೆಗೆ ಹುಂಡಿಯಲ್ಲಿ 60 ಲಕ್ಷ ನಗದು, ಒಂದು ಕಿಲೋಗ್ರಾಂ ಬೆಳ್ಳಿ ಮತ್ತು 200 ಚಿನ್ನಾಭರಣಗಳು ಇದ್ದವು ಎನ್ನಲಾಗಿದೆ.