ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಪ್ರತಿಯೊಬ್ಬರೂ ಪ್ರಯಾಣಿಸಲು ಇಷ್ಟಪಡುತ್ತಾರೆ. ಕೆಲವರಿಗೆ ತಮ್ಮ ಹತ್ತಿರದ ಪ್ರದೇಶಗಳನ್ನ ನೋಡಲು ಆಸಕ್ತಿ ಇದ್ದರೆ, ಇನ್ನು ಕೆಲವರು ದೇಶದ ಸುಂದರ ಸ್ಥಳಗಳಿಗೆ ಹೋಗಲು ಆಸಕ್ತಿ ಹೊಂದಿದ್ದಾರೆ. ಆದರೆ ಅವರು ವಿದೇಶಕ್ಕೆ ಹೋಗಿ ಸುಂದರ ಸ್ಥಳಗಳನ್ನ ಅದರಲ್ಲೂ ಕಡಲತೀರಗಳನ್ನ ನೋಡಬೇಕೆಂದು ಬಯಸಿದರೂ, ಹಣಕಾಸಿನ ಪರಿಸ್ಥಿತಿಯಿಂದ ಹಿಂದೆ ಉಳಿದು ಬಿಡುತ್ತಾರೆ. ಅದ್ರಂತೆ, ಹೊಸ ಸ್ಥಳಗಳನ್ನ ನೋಡಬೇಕು ಮತ್ತು ಸುಂದರವಾದ ಬೀಚ್ ಆನಂದಿಸಬೇಕು ಎಂಬ ಆಸೆ ನಿಮ್ಮಲ್ಲಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿರುತ್ತದೆ.
ಹೌದು, ಒಂದು ದೇಶದ ದ್ವೀಪವಾಸಿಗಳು ತಮ್ಮ ಸ್ಥಳಕ್ಕೆ ಬನ್ನಿ ಮತ್ತು ಸುಂದರವಾದ ಸ್ಥಳಗಳನ್ನ ಆನಂದಿಸಿ ಎಂದು ಕರೆಯುತ್ತಿದ್ದಾರೆ. ಅಲ್ಲಿಗೆ ಹೋದರೆ, ಎಲ್ಲ ವ್ಯವಸ್ಥೆಗಳನ್ನ ಉಚಿತವಾಗಿ ಕೊಡುತ್ತಾರೆ. ಯಾವ ತೊಂದರೆಯಿಲ್ಲ. ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ, ಜೊತೆಯಲ್ಲಿ ನಿಮ್ಮ ಸಂಗಾತಿಯನ್ನೂ ಕರೆದುಕೊಂಡು ಹೋಗಬೇಕು.
ಆಂಗ್ಲ ವೆಬ್ ಸೈಟ್ ನ್ಯೂಯಾರ್ಕ್ ಪೋಸ್ಟ್’ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಐರ್ಲೆಂಡ್’ನ ಅತ್ಯಂತ ಸುಂದರ ಗ್ರೇಟ್ ಬ್ಲಾಸ್ಕೆಟ್ ದ್ವೀಪ ಪ್ರವಾಸಿಗರಿಗೆ ಬಂಪರ್ ಆಫರ್ ಘೋಷಿಸಿದೆ. ಈ ದ್ವೀಪವು ಅನೇಕ ಕಡಲತೀರಗಳನ್ನ ಮತ್ತು ಅದ್ಭುತವಾದ ನೈಸರ್ಗಿಕ ಸೌಂದರ್ಯವನ್ನ ಹೊಂದಿದೆ. ಪ್ರತಿ ವರ್ಷ ವಿಶೇಷವಾಗಿ ಬೇಸಿಗೆಯಲ್ಲಿ ಲಕ್ಷಾಂತರ ಜನರು ಇಲ್ಲಿಗೆ ಬರುತ್ತಾರೆ. ಆದಾಗ್ಯೂ, ಈ ಒಳಹರಿವಿನ ಸಮಯದಲ್ಲಿ ಪ್ರವಾಸಿಗರಿಗೆ ಸೇವೆ ಸಲ್ಲಿಸಲು ಹೋಟೆಲ್ ಸಿಬ್ಬಂದಿಗೆ ಸ್ವಲ್ಪ ಕಷ್ಟದ ಕೆಲಸವಾಗುತ್ತದೆ. ಈಗ ಹೊಸ ಪ್ರಸ್ತಾವನೆ ಬಂದಿದೆ.
ಜೋಡಿಯಾಗಿ ಹೋಗುವವರು ಏನು ಮಾಡಬೇಕು..?
ಆಫರ್ ಬೇಕು ಎನ್ನುವವರು ಈ ದ್ವೀಪಕ್ಕೆ ಬರುವ ಪ್ರವಾಸಿಗರಿಗೆ ಚಹಾ ಮತ್ತು ಕಾಫಿ ನೀಡುವುದು. ಅವರ ಅಗತ್ಯಗಳನ್ನ ಪೂರೈಸಬೇಕಾಗುತ್ತೆ. ಇನ್ನು ಈ ಕೆಲಸಕ್ಕಾಗಿ ಅವರಿಗೂ ಸಂಭಾವನೆ ನೀಡಲಾಗುತ್ತದೆ. ಅಷ್ಟೇ ಅಲ್ಲ ದಂಪತಿಗೆ ಅವರ ಅಂಗಡಿಯ ಮೇಲಿರುವ ಅಪಾರ್ಟ್‌ಮೆಂಟ್’ನಲ್ಲಿ ಉಚಿತ ವಸತಿ ಒದಗಿಸಲಾಗುವುದು. ಅಲ್ಲಿ ಎಲ್ಲ ರೀತಿಯ ಸೌಲಭ್ಯಗಳು ದೊರೆಯುತ್ತವೆ. ಮಾಧ್ಯಮ ವರದಿಗಳ ಪ್ರಕಾರ ಈ ಕೊಡುಗೆಯು ಏಪ್ರಿಲ್ 2024 ರಿಂದ ಅಕ್ಟೋಬರ್ 2024 ರವರೆಗೆ ಇರುತ್ತದೆ. ಯಾಕಂದ್ರೆ, ಜೂನ್, ಜುಲೈ ಮತ್ತು ಆಗಸ್ಟ್‌ನಲ್ಲಿ ಪ್ರವಾಸಿಗರ ಸಂಖ್ಯೆ ಅತ್ಯಧಿಕವಾಗಿದೆ.
ದ್ವೀಪದ ವೆಬ್‌ಸೈಟ್ ಪ್ರಕಾರ, ಉದ್ಯೋಗಾಕಾಂಕ್ಷಿಗಳಿಗೆಮತ್ತು ಅನುಭವ ಇರುವವರಿಗೆ ಇಲ್ಲಿ ಮೊದಲ ಆದ್ಯತೆ.. ಮುಖ್ಯವಾದ ವಿಷಯವೆಂದರೆ ದಂಪತಿಗಳಿಬ್ಬರೂ ಇಂಗ್ಲಿಷ್ ಮಾತನಾಡಲೇಬೇಕು. ಮೇಲಾಗಿ ಈ ಕೆಲಸಕ್ಕೆ ಮುಖ್ಯವಾದ ಷರತ್ತೆಂದರೆ, ಇಲ್ಲಿರುವಷ್ಟು ದಿನಗಳಿಗೆ ಒಂದು ದಿನವೂ ರಜೆ ನೀಡುವುದಿಲ್ಲ. ಇನ್ನು ಉದ್ಯೋಗಾಕಾಂಕ್ಷಿಗಳ ವಯಸ್ಸು 40 ವರ್ಷಕ್ಕಿಂತ ಕಡಿಮೆಯಿರಬೇಕು.