ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳ ನಡುವೆ ಮಾರಾಮಾರಿಯಾಗಿದೆ. ಈ ಘಟನೆಯಲ್ಲಿ ಓರ್ವ ಖೈದಿ ಗಂಭೀರವಾಗಿ ಗಾಯಗೊಂಡಿರೋದಾಗಿ ತಿಳಿದು ಬಂದಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆನಂದ್ ಹಾಗೂ ಹುಸೇನ್ ಎಂಬ ಕೈದಿಗಳ ಮೇಲೆ ಸೂರ್ಯಪ್ರಕಾಶ್ ಎಂಬ ವಿಚಾರಣಾಧೀನ ಕೈದಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಹಲ್ಲೆಯಲ್ಲಿ ಆನಂದ್ ಗಂಭೀರವಾಗಿ ಗಾಯಗೊಂಡಿದ್ದರೇ, ಹುಸೇನ್ ಗೆ ಸಣ್ಣಪುಟ್ಟ ಗಾಯವಾಗಿದೆ.
ಈ ಘಟನೆ ಬುಧವಾರ ನಡೆದಿದ್ದು, ಇಂದು ತಡವಾಗಿ ಬೆಳಕಿಗೆ ಬಂದಿದೆ. ಮಧ್ಯಾಹ್ನ ಊಟದ ವೇಳೆಯಲ್ಲಿ ಸೂರ್ಯ ಪ್ರಕಾಶ್ ಹಾಗೂ ಆನಂದ ನಡುವೆ ಜಗಳ ಉಂಟಾಗಿತ್ತು. ಈ ಜಗಳ ತಾರಕಕ್ಕೇರಿದ ವೇಳೆಯಲ್ಲಿ ಸೂರ್ಯ ಪ್ರಕಾಶ್ ಬಾತ್ ರೂಮ್ ನಲ್ಲಿದ್ದಂತ ಟೈಲ್ಸ್ ತೆಗೆದುಕೊಂಡು ಆನಂದ್ ಮೇಲೆ ಹಲ್ಲೆ ಮಾಡಿದ್ದರು.
ವಿಚಾರಣಾಧೀನ ಕೈದಿ ಸೂರ್ಯ ಪ್ರಕಾಶ್, ಆನಂದ್ ಮೇಲೆ ಹಲ್ಲೆ ಮಾಡುತ್ತಿದ್ದ ವೇಳೆ ತಡೆಯೋದಕ್ಕೆ ಹೋದಂತ ಕೈದಿ ಹುಸೇನ್ ಮೇಲೂ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಆನಂದ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೌಂಟ್ ಎವರೆಸ್ಟ್ ಏರಿ, ಇಳಿಯುವಾಗ ಭಾರತೀಯ ಪರ್ವತಾರೋಹಿ ಸಾವು | Mount Everest
BREAKING: ‘ಆಶಾ ಕಾರ್ಯಕರ್ತೆ’ಯರಿಗೆ ಸಿಹಿಸುದ್ದಿ: ‘ಗೌರವಧನ 1000’ ಹೆಚ್ಚಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ