ನವದೆಹಲಿ : ಪಾಕಿಸ್ತಾನದಲ್ಲಿನ ಬ್ರಿಟಿಷ್ ರಾಯಭಾರಿ ಜೇನ್ ಮ್ಯಾರಿಯಟ್ ಪಿಒಕೆಗೆ ಭೇಟಿ ನೀಡಿರುವುದಕ್ಕೆ ಭಾರತ ತೀವ್ರವಾಗಿ ಪ್ರತಿಕ್ರಿಯಿಸಿದೆ. ಈ ಕ್ರಮವನ್ನ ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ಬಣ್ಣಿಸಿದೆ.
“2024ರ ಜನವರಿ 10ರಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಬ್ರಿಟಿಷ್ ರಾಯಭಾರಿ ಮತ್ತು ಬ್ರಿಟಿಷ್ ವಿದೇಶಾಂಗ ಕಚೇರಿಯ ಅಧಿಕಾರಿ ಭೇಟಿ ನೀಡಿದ್ದನ್ನ ಭಾರತ ಗಂಭೀರವಾಗಿ ಪರಿಗಣಿಸಿದೆ. ಜಾನ್ ಮ್ಯಾರಿಯಟ್ ಅವರ ಈ ಕಾರ್ಯ ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ವಿರುದ್ಧವಾಗಿದೆ, ಇದು ಸ್ವೀಕಾರಾರ್ಹವಲ್ಲ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗಗಳಾಗಿವೆ” ಎಂದಿದ್ದಾರೆ. ಅಂತೆಯೇ, ವಿದೇಶಾಂಗ ಕಾರ್ಯದರ್ಶಿ ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ಗೆ ಬಲವಾದ ಪ್ರತಿಭಟನೆಯನ್ನ ದಾಖಲಿಸಿದ್ದಾರೆ.
India protests visit of British High Commissioner in Islamabad to Pakistan occupied Kashmir:https://t.co/vd4WqODznI pic.twitter.com/sYwkMUjAkr
— Randhir Jaiswal (@MEAIndia) January 13, 2024
ಪಾಕಿಸ್ತಾನದಲ್ಲಿನ ಬ್ರಿಟಿಷ್ ರಾಯಭಾರಿ ಜೇನ್ ಮ್ಯಾರಿಯಟ್ ಜನವರಿ 10ರಂದು ಪಿಒಕೆಗೆ ಭೇಟಿ ನೀಡಿದ್ದರು. ಈ ಸಮಯದಲ್ಲಿ, ಮ್ಯಾರಿಯಟ್ ಅನೇಕ ಸರ್ಕಾರಿ ಅಧಿಕಾರಿಗಳನ್ನ ಸಹ ಭೇಟಿಯಾದರು. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ತನ್ನ ಭೇಟಿಯ ಚಿತ್ರಗಳನ್ನ ಪೋಸ್ಟ್ ಮಾಡಿದ ಮ್ಯಾರಿಯಟ್, “ಬ್ರಿಟನ್ನ ಹೃದಯ ಮತ್ತು ಪಾಕಿಸ್ತಾನದ ಜನರ ನಡುವಿನ ಪರಸ್ಪರ ಸಂಪರ್ಕದ ಕೇಂದ್ರವಾದ ಮಿರ್ಪುರದಿಂದ ಸೆಲ್ಯೂಟ್. 70ರಷ್ಟು ಬ್ರಿಟಿಷ್ ಪಾಕಿಸ್ತಾನಿಗಳು ಮೂಲತಃ ಮಿರ್ಪುರದವರು. ವಲಸಿಗರ ಹಿತಾಸಕ್ತಿಗಳಿಗೆ ನಾವು ಒಟ್ಟಾಗಿ ಕೆಲಸ ಮಾಡುವುದು ಮುಖ್ಯ. ಅದಕ್ಕಾಗಿ ಧನ್ಯವಾದಗಳು” ಎಂದಿದ್ದಾರೆ.
BREAKING : ಚೀನಾ ಅಧ್ಯಕ್ಷೀಯ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷದ ‘ಲೈ ಚಿಂಗ್’ಗೆ ಗೆಲುವು
ಗೋಧಿ, ಅಕ್ಕಿ, ಸಕ್ಕರೆ ಬೆಲೆ ಹೆಚ್ಚಳ ಸದ್ಯಕ್ಕಿಲ್ಲ : ವಾಣಿಜ್ಯ ಸಚಿವ ಗೋಯಲ್
‘ATM’ನಿಂದ ನಕಲಿ ‘ನೋಟು’ ಬಂದಿದ್ಯಾ.? ಹೀಗೆ ಮಾಡಿ, ಬ್ಯಾಂಕ್ ‘ಒರಿಜಿನಲ್ ನೋಟು’ ನೀಡುತ್ತೆ