ಹಾವೇರಿ: ಬಿಜೆಪಿ ಕಾರ್ಯಕರ್ತ ವಿನಯ ಆತ್ಮಹತ್ಯೆ ಪ್ರಕರಣವನ್ನು ರಾಜ್ಯ ಪೊಲೀಸರು ನ್ಯಾಯಸಮ್ಮತ ತನಿಖೆ ಮಾಡುತ್ತಾರೆ ಎಂಬ ವಿಶ್ವಾಸ ಇಲ್ಲ. ಈ ಪ್ರಕರಣದ ಕುರಿತು ಸಿಬಿಐ ತನಿಖೆಯಾಗಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಹಾವೇರಿ ಜಿಲ್ಲೆ ಬ್ಯಾಡಗಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಲವಾರು ಪ್ರಕರಣಗಳಿಗೆ ಎಸ್ಐಟಿ ಮಾಡಿದ್ದಾರೆ. ಆದರೆ, ಯಾವುದೇ ಪ್ರಕರಣದ ತನಿಖೆ ನ್ಯಾಯಸಮ್ಮತವಾಗಿಲ್ಲಾ ಮತ್ತು ಪೂರ್ಣಗೊಂಡಿಲ್ಲ. ಬಿಜೆಪಿ ಕಾರ್ಯಕರ್ತ ವಿನಯ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಮುರಿದುಬಿದ್ದು ಬಹಳ ದಿನಗಳಾಗಿವೆ. ಹೆಣ್ಣು ಮಕ್ಕಳು ನಿರ್ಭಿತಿಯಿಂದ ಓಡಾಡಲಾಗುತ್ತಿಲ್ಲ. ರಾಜ್ಯದಲ್ಲಿ ಮಂತ್ರಿಗಳನ್ನು ಹನಿಟ್ರ್ಯಾಪ್ ಮಾಡುವಷ್ಟು ದಾರ್ಷ್ಟ್ಯಕ್ಕೆ ಇವತ್ತು ಕಾನೂನು ಸುವ್ಯವಸ್ಥೆ ಕುಸಿದಿದೆ. ಮಂತ್ರಿಗಳನ್ನೇ ಟ್ರ್ಯಾಪ್ ಮಾಡುತ್ತಾರೆ ಅಂದರೆ ಅರ್ಥ ಏನಿದೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ರಾಜಕೀಯ ದ್ವೇಷ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಪ್ರತಿಭಟನೆ ಮಾಡಿದರೆ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಪೊಲೀಸ್ ಸ್ಟೇಷನ್ನಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಕೇಸ್ ಹಾಕುತ್ತಿದ್ದಾರೆ. ಇದು ಬಹಳ ದೊಡ್ಡಪ್ರಮಾಣದಲ್ಲಿ ಎಲ್ಲ ಜಿಲ್ಲೆಯಲ್ಲಿ ನಡೆದಿದೆ ಎಂದು ಆರೋಪಿಸಿದರು.
ರೈಲಿನ ಶೌಚಾಲಯದಲ್ಲೇ ಬಾಲಕಿಯ ಮೇಲೆ ಕೀಚಕನಿಂದ ಅತ್ಯಾಚಾರ: ಫೋನ್ ನೋಡಿದ ಪೊಲೀಸರೇ ಶಾಕ್!
15,000 ಕೋಟಿ ರೂ.ಗಳ ಮೆಗಾ ಐಪಿಒಗಾಗಿ ಟಾಟಾ ಕ್ಯಾಪಿಟಲ್ ಗೌಪ್ಯ DRHP ಸಲ್ಲಿಕೆ: ವರದಿ | Tata Capital