ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಕಾನ್ಲೆ ಗ್ರಾಮ ಪಂಚಾಯ್ತಿ ಪಿಡಿಓ ವಿರುದ್ಧ ತಹಶೀಲ್ದಾರರಿಗೆ ಗ್ರಾಮಸ್ಥರು ದೂರು ನೀಡಿದ್ದಾರೆ. ಇದಕ್ಕೆ ಕಾರಣ ಗ್ರಾಮದಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡಿದ್ರೂ ಪಿಡಿಓ ಮಾತ್ರ ನನಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಕಣ್ ಮುಚ್ಚಿ ಕುಳಿತಿರೋದೇ ಆಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಅವರಿಗೆ ಕಾನ್ಲೆ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಅದೇ ಊರಿನ ಗ್ರಾಮದ ಹಿರಿಯ ನಾಗರಿಕರಾದ ಬಡ ರೈತ ಕುಟುಂಬ ದೂರು ನೀಡಿದೆ.
ಕಣ್ ಮುಚ್ಚಿ ಕುಳಿತ ಕಾನ್ಲೆ ಗ್ರಾಮ ಪಂಚಾಯ್ತಿ ಪಿಡಿಓ
ಸಾಗರ ತಾಲೂಕು ತಾಳಗುಪ್ಪ ಹೋಬಳಿ ಕಾನ್ಲೆ ಗ್ರಾಮ ಪಂಚಾಯ್ತಿಯ ಸರ್ಕಾರಿ ಬೀಳು ಸರ್ವೇ ನಂಬರ್ 104ರಲ್ಲಿ ಸರಿಸುಮಾರು 18 ರಿಂದ 20 ಎಕರೆ ಸರ್ಕಾರಿ ಜಾಗದಲ್ಲಿ ಸಾವಿರಾರು ಲೋಡ್ ಅಕ್ರಮ ಮಣ್ಣು ಲೂಟಿ ಮಾಡಿ ಸಾಗಾಟ ಮಾಡಿಸಿದ್ದಾರೆ. ಅಲ್ಲದೇ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂಬುದಾಗಿ ಗಂಭೀರವಾಗಿ ಆರೋಪಿಸಲಾಗಿದೆ.
ಇದಲ್ಲದೇ ಪಕ್ಕದ ಸರ್ವೆ ನಂಬರ್ 105ರಲ್ಲಿ ರೈತ ಬಡ ಕುಟುಂಬದ ಅಡಿಕೆ ತೋಟವಿದ್ದು ಈ 104 ನೇ ಸರ್ವೆ ನಂಬರ್ ನಿಂದ ಮಣ್ಣು ತೆಗೆದಿರುವ ಕಾರಣ ಈ ಮುಂಬರುವ ಮಳೆಗಾಲದಲ್ಲಿ ತೋಟದಲ್ಲಿನ ಮಣ್ಣಿನ ಧರೆ ಕುಸಿದು ತೋಟ ಸಂಪೂರ್ಣ ನಾಶವಾಗುವ ಹಂತದಲ್ಲಿದೆ. ಹೀಗೆ ಕಾನೂನು ಬಾಹಿರವಾಗಿ ಕೃತ್ಯ ಎಸಗಿದ್ರೂ ಕಾನ್ಲೆ ಪಿಡಿಓ ಮಾತ್ರ ಯಾವುದೇ ಕ್ರಮ ವಹಿಸಿಲ್ಲ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.
ಎಚ್ಚರ ಅಕ್ರಮವಾಗಿ ಮಣ್ಣು ಸಾಗಾಟ ಮಾಡಿದ್ರೆ ಜೈಲು ಶಿಕ್ಷ
ರಾಜ್ಯದ ಯಾವುದೇ ಪ್ರದೇಶದಲ್ಲಿ ಆದರೂ ಸರ್ಕಾರಿ ಅಥವಾ ಖಾಸಗಿ ಜಮೀನಿನಲ್ಲಿ ಆದರೂ ಮಣ್ಣನ್ನು ಸಾಗಾಟ ಮಾಡುವುದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮಗಳ ಅನುಸಾರ ಅಪರಾಧವಾಗಿದೆ. ಅಂತವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ಜೈಲಿಗೂ ಕಳುಹಿಸಬಹುದಾಗಿದೆ. ಸೋ ಅಕ್ರಮವಾಗಿ ಮಣ್ಣು ಸಾಗಾಟ ಮಾಡೋರು ಎಚ್ಚರಿಕೆ ವಹಿಸೋ ಅಗತ್ಯವಿದೆ.
ವರದಿ: ಶಶಿಕಾಂತ್ ಎಂ.ಎಸ್, ಸಾಗರ
ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ: ಕ್ರೂಸರ್ ಪಲ್ಟಿಯಾಗಿ ಕರ್ನಾಟಕದ ಮೂವರು ಮಹಿಳೆಯರು ದುರ್ಮರಣ
‘ತಾಯಿಯಾಗುವುದು’ ಸಹಜ ವಿದ್ಯಮಾನ : ಉದ್ಯೋಗಿಗೆ ಹೆರಿಗೆ ಬಾಕಿ ಪಾವತಿಸಲು ಕೋರ್ಟ್ ಆದೇಶ