ಕೆಎನ್ಎನ್ ಸಿನಿಮಾ ಡೆಸ್ಕ್: ವೆಡ್ಡಿಂಗ್ ಗಿಫ್ಟ್… ಕನ್ನಡದಲ್ಲಿ ಹೀಗೊಂದು ಸಿನಿಮಾ ಬರ್ತಿರುವುದು ಗೊತ್ತೇ ಇದೆ. ಜನರಲ್ಲಿ ಜಾಗೃತಿ ಜೊತೆಗೆ ಸಾಮಾಜಿಕ ಸಂದೇಶ ಮೂಡಿಸುವಂತಹ ಈ ಸಿನಿಮಾ ವಿಕ್ರಂ ಪ್ರಭು ಪಾಲಿಗೆ ಬರೀ ಸಿನಿಮಾವಲ್ಲ. ಅದೊಂದು ತಪಸ್ಸು ವರ್ಷಗಟ್ಟಲೇ ಶ್ರದ್ಧೆಯಿಂದ ಅತೀವ ಸಿನಿಮಾಸಕ್ತಿಯಿಂದ ಈ ಸಿನಿಮಾವನ್ನು ರೂಪಿಸಿದ್ದಾರೆ. ಇದೇ ಜುಲೈ 8ರಂದು ಬೆಳ್ಳಿತೆರೆ ಪ್ರವೇಶಿಸುತ್ತಿರುವ ವೆಡ್ಡಿಂಗ್ ಗಿಫ್ಟ್ ಸಿನಿಮಾ ಕುತೂಹಲದ ಕೋಟೆ ಕಟ್ಟಿದೆ. ಅದಕ್ಕೆ ಕಾರಣ ಸಿನಿಮಾದ ಗಟ್ಟಿತನದ ಕಂಟೆಂಟ್.

ನಿರ್ದೇಶನಕರಾಗಬೇಕೆಂಬ ಕನಸುಗಳನ್ನು ಹೊತ್ತು ಬಂದಿದ್ದ ವಿಕ್ರಂ ಪ್ರಭು ಒಂದಷ್ಟು ವರ್ಷಗಳ ಕಾಲ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದರು. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಮೂಡಿಬಂದಿದ್ದ ಆದಿ ನಟನೆಯ ಲವ್ ಸಿನಿಮಾದಲ್ಲಿ ಕೆಲಸ ನಿರ್ವಹಿಸಿದ್ದರು. ಆ ಬಳಿಕ ವೈಯಕ್ತಿಕ ಕಾರಣದಿಂದ ಸಿನಿಮಾ ರಂಗ ಬಿಟ್ಟು ಕೆಲ ವರ್ಷಗಳ ಕಾಲ ಪುಣೆಯಲ್ಲಿ ನೆಲೆಸಿದ್ದರು. ಹಾಗಂತ ಅವರಲ್ಲಿದ್ದ ಸಿನಿಮಾ ಉತ್ಸಾಹ ಕೊಂಚವೂ ತಗ್ಗಿರಲಿಲ್ಲ. ಚಿತ್ರರಂಗಕ್ಕೆ ಒಂದೊಳ್ಳೆ ಸಿನಿಮಾ ಮಾಡಬೇಕೆಂಬ ಕನಸು ಹೊತ್ತು ಮತ್ತೆ ಗಾಂಧಿನಗರದತ್ತ ಹೆಜ್ಜೆ ಇಟ್ಟರು. ಬರೀ ಲಾಭದ ದೃಷ್ಟಿಯಿಂದ ಸಿನಿಮಾ ಮಾಡಬಹುವವರ ಮಧ್ಯೆ ವಿಕ್ರಂ ಜನರಿಗೆ ಸಾಮಾಜಿಕ ಸಂದೇಶದ ಅರಿವು ಮೂಡಿಸಬೇಕೆಂಬ ಉದ್ದೇಶದಿಂದ ಸಾಕಷ್ಟು ಯೋಚಿಸಿ, ನೈಜ ಘಟನೆಯಾಧಾರಿಸಿ ವೆಡ್ಡಿಂಗ್ ಗಿಫ್ಟ್ ಸಿನಿಮಾ ಕಥೆಯನ್ನು ಸಿದ್ಧಪಡಿಸಿದರು.

ನಿರ್ದೇಶನ ಮಾಡುವುದರ ಜೊತೆಗೆ ತಾವೇ ಸಿನಿಮಾ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡು ವೆಡ್ಡಿಂಗ್ ಗಿಫ್ಟ್ ಸಿನಿಮಾವನ್ನು ಈಗ ಪ್ರೇಕ್ಷಕರ ಮಡಿಲಿಗೆ ಹಾಕಲು ಉತ್ಸಾಹಕರಾಗಿದ್ದಾರೆ. ಈಗಾಗಲೇ ವೆಡ್ಡಿಂಗ್ ಗಿಫ್ಟ್ ಸ್ಯಾಂಪಲ್ ಸಿನಿಮಾ ಗೆಲ್ಲುವ ಭರವಸೆ ಹುಟ್ಟಿಸಿವೆ. ಗಂಭೀರದ ಕಥೆಗೆ ಮನರಂಜನೆಯ ಅಂಶವನ್ನೂ ಬೇರೆಸಿ ವಿಕ್ರಂ ಪ್ರಭು ಲಾಂಛನದಲ್ಲಿ ಚಿತ್ರ ತಯಾರಿಸಿದ್ದಾರೆ. ವಿಕ್ರಂ ಕನಸುಗಳಿಗೆ ಇಡೀ ತಂಡ ಸಾಥ್ ಕೊಟ್ಟಿದೆ. ಪ್ರೇಮ, ಸೋನು ಗೌಡ, ನಿಶಾನ್, ಪವಿತ್ರಾ ಲೋಕೇಶ್ ಇವರೆಲ್ಲರೂ ಸಿನಿಮಾದ ಜೀವಾಳ. ಬಾಲಚಂದ್ರ ಪ್ರಭು ಸಂಗೀತ, ವಿಜೇತ ಚಂದ್ರ ಸಂಕಲನವಿರುವ ವೆಡ್ಡಿಂಗ್ ಗಿಫ್ಟ್ ಜುಲೈ 8 ರಂದು ಥಿಯೇಟರ್ ಅಂಗಳದಲ್ಲಿ ಅನಾವರಣಗೊಳ್ತಿದೆ.

Share.
Exit mobile version