ವಿಜಯಪುರ: ಜಿಲ್ಲೆಯಲ್ಲಿ ಇಂದು ಘೋರ ದುರಂತವೊಂದು ಸಂಭವಿಸಿದೆ. ತಮ್ಮ ಜಮೀನಿನಲ್ಲಿ ನೀರು ತುಂಬಿದ್ದಂತ ಗುಂಡಿಗೆ ಬಿದ್ದಂತ ಓರ್ವನನ್ನು ರಕ್ಷಿಸಲು ಹೋಗಿ, ಮೂವರು ಧಾರುಣವಾಗಿ ಸಾವನ್ನಪ್ಪಿರುವಂತ ಘಟನೆ ನಡೆದಿದೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ಎಮ್ಮೆ ಮೇಯಿಸಲು ನೀಲಮ್ಮ ಎಂಬುವರು ಹೋಗಿದ್ದರು. ಜಮೀನಿನ ಗುಂಡಿಯಲ್ಲಿ ನಿಂತಿದ್ದಂತ ನೀರನ್ನು ಎಮ್ಮೆಗೆ ಕುಡಿಸೋದಕ್ಕೆ ಹೋಗಿ, ಗುಂಡಿಗೆ ತಾವು ಬಿದ್ದಿದ್ದಾರೆ. ಈ ವೇಳೆ ರಕ್ಷಣೆಗಾಗಿ ಹೊಲದಲ್ಲೇ ಇದ್ದಂತ ಮುತ್ತಪ್ಪ ಕಿಲಾರಹಟ್ಟಿ ಎಂಬುವರನ್ನು ಕೂಗಿದ್ದಾರೆ.

ನೀಲಮ್ಮನನ್ನು ರಕ್ಷಿಸಲು ಹೋಗಿ ಮುತ್ತಪ್ಪ ಕಿಲಾರಹಟ್ಟಿ ನೀರಲ್ಲಿ ಮುಳುಗಿದ್ದಾರೆ. ಇವರು ಸಾವು ಬದುಕಿನ ನಡುವೆ ಮುಳುಗುತ್ತ ಹೋರಾಡುತ್ತಿದ್ದದ್ದು ಕಂಡಂತ ಶಿವು ಯಾಳವಾರ ಅವರು ಇಬ್ಬರನ್ನು ರಕ್ಷಿಸೋದಕ್ಕೆ ಹೋಗಿ, ತಾವು ನೀರಿನಿಂದ ಅವರನ್ನು ರಕ್ಷಿಸಿ ಮೇಲೆ ಬರಲಾಗದೇ ಧಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಮೂಲಕ ನೀಲಮ್ಮ ಕಿಲಾರಹಟ್ಟಿ (16), ಮುತ್ತಪ್ಪ ಕಿಲಾರಹಟ್ಟಿ (24) ಹಾಗೂ ಶಿವ ಯಾಳವಾರ(25) ಎಂಬುವರು ಧಾರುಣವಾಗಿ ಸಾವನ್ನಪ್ಪಿದ್ದಾರೆ.  ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಮೇಲೆತ್ತಿದ್ದಾರೆ. ಈ ಸಂಬಂಧ ಮುದ್ದೆಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BREAKING : ಒಡಿಶಾದಲ್ಲಿ ಕೋಮು ಘರ್ಷಣೆ : 10 ಮಂದಿಗೆ ಗಾಯ, 2 ದಿನದ ಕಾಲ ಇಂಟರ್ನೆಟ್ ಸ್ಥಗಿತ

ಸಾಗರದಲ್ಲಿ ‘ಡೆಂಗ್ಯೂ’ ನಿಯಂತ್ರಣಕ್ಕೆ ಈ ಖಡಕ್ ಸೂಚನೆ ಕೊಟ್ಟ ‘ಶಾಸಕ ಬೇಳೂರು ಗೋಪಾಲಕೃಷ್ಣ’

Share.
Exit mobile version