ಮಾಂಟ್ರಿಯಲ್ : ಶುಕ್ರವಾರ ಸಂಜೆ, ಕೆನಡಾದ ಮಾಂಟ್ರಿಯಲ್’ನ ಬೀದಿಗಳಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಇಸ್ರೇಲ್ ವಿರೋಧಿ, ಪ್ಯಾಲೆಸ್ತೀನ್ ಪರ ಕಾರ್ಯಕರ್ತರು ಪೊಲೀಸ್ ಅಧಿಕಾರಿಗಳೊಂದಿಗೆ ಘರ್ಷಣೆ ನಡೆಸಿದರು, ಕಿಟಕಿಗಳನ್ನು ಒಡೆದರು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದರು. ಸದ್ಯ ನಾಲ್ವರನ್ನು ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳಲ್ಲಿ ಪ್ರತಿಭಟನಾಕಾರರು ಫೆಲೆಸ್ತೀನ್ ಧ್ವಜಗಳನ್ನ ಬೀಸುತ್ತಿರುವುದನ್ನು ಮತ್ತು “ಫ್ರೀ ಪ್ಯಾಲೆಸ್ಟೈನ್” ಮತ್ತು “ಇಸ್ರೇಲ್ ಭಯೋತ್ಪಾದಕ, ಕೆನಡಾ ಭಾಗಿಯಾಗಿದೆ” ಎಂಬ ಘೋಷಣೆಗಳನ್ನು ಕೂಗುತ್ತಿರುವುದನ್ನು ತೋರಿಸಿದೆ.
ಗಲಭೆಯ ಮಧ್ಯೆ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಟೊರೊಂಟೊದಲ್ಲಿ ನಡೆದ ಅಮೆರಿಕದ ಪಾಪ್ ತಾರೆ ಟೇಲರ್ ಸ್ವಿಫ್ಟ್ ಅವರ ಸಂಗೀತ ಕಾರ್ಯಕ್ರಮದಲ್ಲಿ ತಮ್ಮ ಕುಟುಂಬದೊಂದಿಗೆ ಭಾಗವಹಿಸಿದ್ದರು. ಅವರು ರೋಜರ್ಸ್ ಕೇಂದ್ರದಲ್ಲಿ ಸ್ವಿಫ್ಟ್ ಅವರ ಹಾಡುಗಳನ್ನ ಆನಂದಿಸುತ್ತಿದ್ದು, ನೃತ್ಯ ಮಾಡಿದ್ದಾರೆ. ಸಂಗೀತ ಕಾರ್ಯಕ್ರಮದಲ್ಲಿ ಅಭಿಮಾನಿಯೊಬ್ಬರು ಪ್ರಧಾನಿ ನೃತ್ಯ ಮಾಡುತ್ತಿರುವ ವೀಡಿಯೊವನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋ ನೋಡಿ.!
Trudeau is dancing at the Taylor Swift concert while Montreal burns
Words cannot describe how much I despise this manpic.twitter.com/hCq4t0HBYS
— The Pleb 🌍 Reporter (@truckdriverpleb) November 23, 2024
‘ಅಭಿವೃದ್ಧಿ, ಉತ್ತಮ ಆಡಳಿತದ ಗೆಲುವು’ : ‘ಮಹಾರಾಷ್ಟ್ರ’ ವಿಜಯ ಶ್ಲಾಘಿಸಿದ ‘ಪ್ರಧಾನಿ ಮೋದಿ’
ಸಂಡೂರು ವಿಧಾನಸಭೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಗೆಲುವು- ಚುನಾವಣಾ ಆಯೋಗ ಘೋಷಣೆ
ನಾನು ಸೋತಿದ್ದೇನೆ ಅಂತ ಸುಮ್ಮನೇ ಕೂರಲ್ಲ, ಎದೆಗುಂದಲ್ಲ, ಹೋರಾಟ ಮಾಡುತ್ತೇನೆ: ನಿಖಿಲ್ ಕುಮಾರಸ್ವಾಮಿ