ಮುಂಬೈ: ಮುಂಬೈನ ಹಳಿಗಳ ಮೇಲೆ ಜನರು ಅಡುಗೆ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, . ಈ ಕ್ಲಿಪ್ ಅನ್ನು ಮಹಿಮ್ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ ಹ್ಯಾಂಡಲ್ ತಿಳಿಸಿದೆ.
ರೈಲು ಹಳಿಗಳ ನಡುವೆ ಕುಳಿತು ಒಲೆಯ ಮೇಲೆ ಆಹಾರವನ್ನು ತಯಾರಿಸುವುದನ್ನು ಕಾಣಬಹದಾಗಿದೆ. ಇದಲ್ಲದೇ ಮ ಕೆಲವು ಹುಡುಗಿಯರು ಅಲ್ಲಿ ಅಧ್ಯಯನ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಇದಲ್ಲದೇ ಅಲ್ಲೇ ಮಕ್ಕಳು ಸುತ್ತಲೂ ಓಡುತ್ತಿರುವುದನ್ನು ಮತ್ತು ಕೆಲವರು ಮಲಗುವುದನ್ನು ಸಹ ಕಾಣಬಹುದಾಗಿದೆ. ಈ ವೀಡಿಯೊ 21,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ಅನೇಕ ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಇದು ತುಂಬಾ ಅಪಾಯಕಾರಿ ದಯವಿಟ್ಟು ಯಾರಾದರೂ ಕ್ರಮ ತೆಗೆದುಕೊಳ್ಳಿ” ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮುಂಬೈ ಸೆಂಟ್ರಲ್ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಡಿಆರ್ಎಂ) ವೀಡಿಯೊವನ್ನು ಗಮನಿಸಿ ಪಶ್ಚಿಮ ರೈಲ್ವೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಅಂತ ತಿಳಿದು ಬಂದಿದೆ.
Between the railway tracks at Mahim JN@RailMinIndia @grpmumbai @drmmumbaicr @drmbct pic.twitter.com/YtTg6gWmWC
— मुंबई Matters™ (@mumbaimatterz) January 24, 2024