ಪ್ಯಾರಿಸ್ : ಭಾರತದ ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಮತ್ತೊಮ್ಮೆ ಚಾಪು ಮೂಡಿಸಿದ್ದಾರೆ. ಆದ್ರೆ, ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತೀಯ ಆಟಗಾರರು ಕಳೆದ ಕೆಲವು ದಿನಗಳಿಂದ ನಿರಾಶೆಯನ್ನ ಎದುರಿಸುತ್ತಿದ್ದಾರೆ. ಟೋಕಿಯೊ ಒಲಿಂಪಿಕ್ಸ್ 2020ರಲ್ಲಿ 7 ಪದಕಗಳನ್ನ ಗೆದ್ದಿರುವ ಭಾರತವು ಪ್ರಸ್ತುತ ವಿಶ್ವ ಕ್ರೀಡಾಕೂಟದಲ್ಲಿ ನಿರಾಶಾದಾಯಕ ಫಲಿತಾಂಶಗಳನ್ನ ದಾಖಲಿಸಲಿದೆ. ಇದುವರೆಗೆ ಕೇವಲ 3 ಪದಕಗಳನ್ನ ಗೆದ್ದಿದೆ. ಅವು ಕೂಡ ಕಂಚಿನ ಪದಕಗಳಾಗಿವೆ. ಆದರೆ, ಮಂಗಳವಾರ ಆರಂಭವಾದ ಪುರುಷರ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಭಾರತದ ತಾರೆ ನೀರಜ್ ಚೋಪ್ರಾ ಭಾರತದ ಕ್ರೀಡಾಭಿಮಾನಿಗಳಲ್ಲಿ ಭರವಸೆ ಮೂಡಿಸಿದ್ದಾರೆ. ಅರ್ಹತಾ ಸುತ್ತಿನಲ್ಲಿಯೇ ಫೈನಲ್ ತಲುಪಿದ್ದಾರೆ.
‘ಬಿ’ ಅರ್ಹತಾ ಗುಂಪಿನಲ್ಲಿ ಸ್ಪರ್ಧಿಸಿದ್ದ ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲಿಯೇ 89.34 ಮೀಟರ್ ದೂರ ಜಾವೆಲಿನ್ ಎಸೆತ ಎಸೆದು ಫೈನಲ್ ಪ್ರವೇಶ ಪಡೆದರು. ಒಲಿಂಪಿಕ್ಸ್ ನಿಯಮಗಳ ಪ್ರಕಾರ ಅರ್ಹತಾ ಸುತ್ತಿನಲ್ಲಿ 84 ಮೀಟರ್’ಗಿಂತ ಹೆಚ್ಚು ದೂರ ಎಸೆಯುವವರು ಸ್ವಯಂಚಾಲಿತವಾಗಿ ಫೈನಲ್’ಗೆ ಅರ್ಹತೆ ಪಡೆಯುತ್ತಾರೆ. ಮೊದಲ ಪ್ರಯತ್ನದಲ್ಲಿ ನೀರಜ್ ಚೋಪ್ರಾ 89.94 ಮೀಟರ್ ದೂರ ಜಾವೆಲಿನ್ ಎಸೆದು ಫೈನಲ್‌ಗೆ ಅರ್ಹತೆ ಪಡೆದರು. ಪಾಕಿಸ್ತಾನದ ಜಾವೆಲಿನ್ ಎಸೆತಗಾರ ನದೀಮ್ 86.59 ಮೀಟರ್ ಎಸೆದು ಮೂರನೇ ಸ್ಥಾನ ಪಡೆದರು. ಪೀಟರ್ (ಗ್ರೆನಡಾ) 88.63 ಮೀ ಎಸೆದು ಎರಡನೇ ಸ್ಥಾನದಲ್ಲಿದ್ದಾರೆ. ಈ ಮೂವರು ‘ಬಿ’ ಗುಂಪಿನಿಂದಲೂ ಫೈನಲ್‌ಗೆ ಅರ್ಹತೆ ಪಡೆದರು. ಎರಡೂ ಗುಂಪುಗಳಿಂದ ಒಟ್ಟು 12 ಜಾವೆಲಿನ್ ಎಸೆತಗಾರರು ಫೈನಲ್‌ಗೆ ಅರ್ಹತೆ ಪಡೆಯಲಿದ್ದಾರೆ. ಅದ್ರಂತೆ, ಆಗಸ್ಟ್ 8ರಂದು ಫೈನಲ್ ನಡೆಯಲಿದೆ.
ಅದ್ಭುತ ಎಸೆತದ ವಿಡಿಯೋ ನೋಡಿ.!
NEERAJ CHOPRA Javelin Throw of 89.34m 🔥🔥
See you in FINALS…#Paris2024 #Olympics #Olympic2024 #NeerajChopra pic.twitter.com/JwyORTnHme— Praneet Samaiya (@praneetsamaiya) August 6, 2024
Scam Alert: ನಿಮಗೆ ‘CBI ಸಮನ್ಸ್, ವಾರೆಂಟ್’ ಅಂತ ಮೆಸೇಜ್ ಬಂದಿದ್ಯಾ? ಎಚ್ಚರ.! ಈ ಸುದ್ದಿ ಓದಿ
BREAKING : ಒಕ್ಸಾನಾ ಮಣಿಸಿ ಕುಸ್ತಿಪಟು ‘ವಿನೇಶ್ ಫೋಗಟ್’ ‘ಸೆಮಿಫೈನಲ್’ಗೆ ಪ್ರವೇಶ |Paris Olympics