ಮುಂಬೈ: ಮಹಾರಾಷ್ಟ್ರದ ನಾಸಿಕ್ನಲ್ಲಿ ಆದಾಯ ತೆರಿಗೆ ಇಲಾಖೆ ತಂಡವು ಚಿನ್ನದ ವ್ಯಾಪಾರಿಯೊಬ್ಬರ ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿದೆ. ಈ ದಾಳಿಗಳಲ್ಲಿ ಭಾರಿ ಪ್ರಮಾಣದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಆದಾಯ ತೆರಿಗೆ ಇಲಾಖೆ ತಂಡವು ಇಲ್ಲಿಂದ 26 ಕೋಟಿ ರೂ ನಗದು ಮತ್ತು 90 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ ಎನ್ನಲಾಗಿದೆ.
ಆದಾಯ ತೆರಿಗೆ ಇಲಾಖೆ ದಾಳಿ ಸುಮಾರು 30 ಗಂಟೆಗಳ ಕಾಲ ನಡೆಯಿತು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಂಗಲೆಯ ಪೀಠೋಪಕರಣಗಳನ್ನು ಒಡೆದು ನೋಟುಗಳನ್ನು ಹೊರತೆಗೆದಿದ್ದಾರೆ ಎನ್ನಲಾಗಿದೆ. ನಾಸಿಕ್ ನ ಈ ಬುಲಿಯನ್ ಉದ್ಯಮಿಯ ಆವರಣದ ಮೇಲೆ ನಡೆದ ದಾಳಿಗಳು ಇಡೀ ಪ್ರದೇಶವನ್ನು ಬೆಚ್ಚಿಬೀಳಿಸಿದೆ. ಆದಾಯ ತೆರಿಗೆ ಇಲಾಖೆ ತಂಡವು ನಾಸಿಕ್ನ ಕೆನಡಾ ಕಾರ್ನರ್ ಪ್ರದೇಶದಲ್ಲಿರುವ ಸುರಾನಾ ಜ್ಯುವೆಲ್ಲರ್ಸ್ ಮತ್ತು ಅದರ ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿದೆ. ತೆರಿಗೆ ವಂಚನೆಯ ಅನುಮಾನದ ಮೇಲೆ ಆದಾಯ ತೆರಿಗೆ ಇಲಾಖೆ ಈ ಕ್ರಮ ಕೈಗೊಂಡಿದೆ.
https://twitter.com/ANI/status/1794595361291706710